Slide
Slide
Slide
previous arrow
next arrow

ಅತಿಕ್ರಮಣದಾರರ ಒಕ್ಕಲೆಬ್ಬಿಸದಂತೆ ನೋಡಿಕೊಳ್ಳುತ್ತೇನೆ: ಶಾಸಕ ಭೀಮಣ್ಣ

300x250 AD

ಸಿದ್ದಾಪುರ: ಕ್ಷೇತ್ರದಲ್ಲಿರುವ ಅತಿಕ್ರಮಣದಾರರಿಗೆ ಪಟ್ಟಾ ನೀಡುವವರೆಗೆ ನನ್ನ ಅಧಿಕಾರದ ವ್ಯಾಪ್ತಿ ಮೀರಿ ರಕ್ಷಣೆ ಕೊಡಲು ನಾನು ಸಿದ್ದನಿದ್ದೇನೆ. ಯಾರು ಕೂಡ ನಿಮ್ಮನ್ನು ಒಕ್ಕಲೆಬ್ಬಿಸದಂತೆ ನೋಡಿಕೊಳ್ಳುತ್ತೇನೆ.ಶಿರಸಿ-ಸಿದ್ದಾಪುರ ಕ್ಷೇತ್ರದ ವ್ಯಾಪ್ತಿಯ ಅತಿಕ್ರಮಣದಾರರ ರಕ್ಷಣೆಗೆ ಸದಾ ಸಿದ್ದನಿದ್ದು, ಯಾರು ಕೂಡ ಒಕ್ಕಲೆಬ್ಬಿಸದಂತೆ ನೋಡಿಕೊಳ್ಳುತ್ತೇನೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.

ತಾಲೂಕಿನ ಮಾಸ್ತಿಹಕ್ಕಲಿನಲ್ಲಿ ನಡೆದ ವನಮಹೋತ್ಸವ ಹಾಗೂ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಕ್ಷೇತ್ರದ ಶಾಸಕರಾದವರು ಎಲ್ಲಾ ಸಮುದಾಯದವರ ಪ್ರತಿನಿಧಿಯಾಗಿರಬೇಕು. ನಮಗಾಗಿ ಶ್ರಮಪಟ್ಟ ಸಾವಿರಾರು ಕಾರ್ಯಕರ್ತರು ಹಾಗೂ ಮುಖಂಡರ ಶ್ರಮಕ್ಕೆ ಬೆಲೆ ಕೊಟ್ಟಾಗ ಮಾತ್ರ ವಿಶ್ವಾಸ ಗಳಿಸಲು ಸಾಧ್ಯ. ಕ್ಷೇತ್ರದ ಸಾಕಷ್ಟು ಕಡೆ ರಸ್ತೆಗಳಾಗಬೇಕಿದೆ. ನಿಮ್ಮ ನಂಬಿಕೆ ಹಾಗೂ ವಿಶ್ವಾಸ ಗಳಿಸುವುದರ ಜತೆಗೆ ಈ ಭಾಗದ ಅಭಿವೃದ್ಧಿ ಹಾಗೂ ಮೂಲಭೂತ ಸೌಲಭ್ಯವನ್ನು ಹಂತ ಹಂತವಾಗಿ ಕಲ್ಪಿಸೋಣ ಎಂದ ಅವರು, ಪ್ರತಿಯೊಂದು ರೈತ ಕುಟುಂಬಗಳು ತಮ್ಮ ವ್ಯಾಪ್ತಿಯಲ್ಲಿ ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದರು.

ಕಾರ್ಯಕ್ರಮದ ಸಂಘಟಕರಾದ ವಕೀಲ ಜಿ.ಟಿ.ನಾಯ್ಕ ಪ್ರಾಸ್ತಾವಿಕ ಮಾತನಾಡಿ, ಮೂವತ್ತು ವರ್ಷಗಳಿಂದ ನಿರ್ಲಕ್ಷಕ್ಕೆ ಒಳಗಾದ ಪ್ರದೇಶ ಇದಾಗಿದೆ. ತುರ್ತು ಅಗತ್ಯವಾದ ಕೆಲಸಗಳು ಊರಲ್ಲಿ ಸಾಕಷ್ಟಿವೆ. ಬಂದ0ತ ಅನುದಾನಗಳು ವಾಪಸ್ ಆಗಿವೆ. ಸೇತುವೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದರು.

300x250 AD

ಈ ವೇಳೆ ಗ್ರಾಪಂ ಸದಸ್ಯರಾದ ಸುರೇಶ ನಾಯ್ಕ, ಲಲಿತಾ, ನಾಗರಾಜ ಗೌಡ, ಪ್ರಮುಖರಾದ ವಿ.ಎನ್.ನಾಯ್ಕ ಬೇಡ್ಕಣಿ, ಸಿ.ಆರ್.ನಾಯ್ಕ, ಜಿ.ಟಿ.ನಾಯ್ಕ ಗೋಳಗೋಡ, ಐ.ಕೆ.ನಾಯ್ಕ ಸುಂಗೊಳ್ಳಿಮನೆ ಬಿ.ಎಲ್.ನಾಯ್ಕ, ವಿ.ಡಿ.ನಾಯ್ಕ ಕಾನಳ್ಳಿ, ರಾಮಾ ನಾಯ್ಕ, ಸುನೀಲ್ ನಾಯ್ಕ ಸಂಪಖ0ಡ,ದೇವಸ್ಥಾನ ಸಮಿತಿ ಅಧ್ಯಕ್ಷ ಈಶ್ವರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ನ್ಯಾಯವಾದಿ ಜಿ.ಟಿ.ನಾಯ್ಕ ಸ್ವಾಗತಿಸಿದರು.

Share This
300x250 AD
300x250 AD
300x250 AD
Back to top