ಸಿದ್ದಾಪುರ: ಬಾವಿಯ ಒಳಗೆ ಇಳಿದು ಮೇಲಕ್ಕೆ ಏರುವಾಗ ಹಿಡಿದುಕೊಂಡ ಹಗ್ಗ ತುಂಡಾದ ಪರಿಣಾಮ ಬಾವಿಯಲ್ಲಿ ಬಿದ್ದು ನೀರಿನಲ್ಲಿ ವ್ಯಕ್ತಿ ಒರ್ವ ಮೃತಪಟ್ಟ ಘಟನೆ ಪಟ್ಟಣದ ಹೊನ್ನೆಗುಂಡಿಯಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆ ನಡೆದಿದೆ.
ಪಟ್ಟಣದ ರವೀಂದ್ರ ನಗರದ ಸೇಲ್ವಾನ್ ಪಾಚಾರ ನಾಡರ (70) ಮೃತ ವ್ಯಕ್ತಿ. ಮೃತ ಸೇಲ್ವಾನ್ ಕೂಲಿ ಕೆಲಸ ಮಾಡುವವನಾಗಿದ್ದು, ಪಟ್ಟಣದ ಹೊನ್ನೇಗುಂಡಿ ಹೋಗುವ ರಸ್ತೆಯ ಬದಿಯಲ್ಲಿ ಎಮ್.ಎಸ್.ಭಟ್‌ರವರ ಮನೆಯ ಕೆಲಸಕ್ಕೆ ಬಂದಿದ್ದ. ಅವರ ಮನೆಯ ಆವರಣದಲ್ಲಿರುವ ಬಾವಿಯಲ್ಲಿರುವ ಪೈಪ್ ಕಟ್ ಮಾಡಿ ಏರುವಾಗ ಹಗ್ಗದಿಂದ ಮೇಲಕ್ಕೆ ಏರುವಾಗ ಹಗ್ಗದಿಂದ ಕೈ ಜಾರಿ ಬಿದ್ದು ಆಳವಾದ ಬಾವಿಯಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ತೆರಳಿ ರಕ್ಷಣೆ ಮಾಡುವುದರೊಳಗೆ ಮೃತಪಟ್ಟಿದ್ದು, ಘಟನೆಯ ಕುರಿತು ಪ್ರಕರಣ ದಾಖಲಾಗಿದೆ.