Slide
Slide
Slide
previous arrow
next arrow

ರೈತ ವಿರೋಧಿ ಕೃಷಿ ಕಾಯ್ದೆಗಳ ರದ್ದುಪಡಿಸಲು ಕೆಪಿಆರ್‌ಎಸ್ ಆಗ್ರಹ

300x250 AD

ಅಂಕೋಲಾ: ರೈತ ವಿರೋಧಿ ಕೃಷಿ ಕಾಯ್ದೆಗಳಾದ ಕರ್ನಾಟಕ ರಾಜ್ಯ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ 2020, ಕರ್ನಾಟಕ ಜಾನುವಾರು ಸಂರಕ್ಷಣಾ ಹಾಗೂ ಹತ್ಯೆ ನಿಷೇಧ ಕಾಯ್ದೆ 2020, ಕರ್ನಾಟಕ ರಾಜ್ಯ ಭೂ ಸ್ವಾಧೀನ ಕಾಯ್ದೆ 2020 ಅನ್ನು ಕೂಡ ರದ್ದುಪಡಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಹಿಂದಿನ ಬಿಜೆಪಿ ಸರ್ಕಾರ ತಂದಿದ್ದ ಎಪಿಎಂಸಿ ಮಾರುಕಟ್ಟೆಗಳನ್ನು ನಾಶ ಮಾಡುವ ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಸಂವಿಧಾನಬದ್ದ ಧಾರ್ಮಿಕ ಸ್ವಾತಂತ್ರ‍್ಯ ನಿರಾಕರಿಸುವ ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ಸು ಪಡೆಯಲು ನಿರ್ಧರಿಸಿರುವ ರಾಜ್ಯ ಸರಕಾರದ ಸಂಪುಟ ಸಭೆಯ ತೀರ್ಮಾನವನ್ನು ಸಂಘ ಸ್ವಾಗತಿಸಿದೆ.


ರೈತಾಪಿ ಕೃಷಿ ನಾಶ ಮಾಡಿ, ಕಾರ್ಪೊರೇಟ್ ಕೃಷಿ ಉತ್ತೇಜಿಸುವ ಉದ್ದೇಶ ಸಾಧನೆಗೆ ತಂದಿದ್ದ ಕೇಂದ್ರ ಕೃಷಿ ಕಾಯ್ದೆಗಳು ರದ್ದಾದ ನಂತರವೂ ಅದೇ ಉದ್ದೇಶದ ರಾಜ್ಯ ಕೃಷಿ ಕಾಯ್ದೆಗಳು ಮುಂದುವರೆಸಿದ್ದನ್ನು ರಾಜ್ಯದ ರೈತರು ಪ್ರಬಲವಾಗಿ ವಿರೋಧಿಸಿದ್ದರು. ಕೃಷಿ ಬಿಕ್ಕಟ್ಟು ನ್ನು ತೀವ್ರಗೊಳಿಸುವ ,ರಾಜ್ಯದ ರೈತರಿಗೆ ಬೆಂಬಲ ಬೆಲೆ ನಿರಾಕರಿಸುವ ವ್ಯಾಪಾರಿಗಳ ಮರ್ಜಿಗೆ ರೈತರನ್ನು ದಯನೀಯವಾಗಿ ನೂಕುವ ಎಪಿಎಂಸಿ ತಿದ್ದುಪಡಿ ಕಾಯ್ದೆ 2020 ರದ್ದತಿ ನಿರ್ಧಾರ ರೈತ ಹೋರಾಟಕ್ಕೆ ಜಯವಾಗಿದೆ. ದುರ್ಬಲ ಗೊಂಡಿರುವ ಎಪಿಎಂಸಿಯನ್ನು ಬಲಪಡಿಸಲು, ರೈತ ಸ್ನೇಹಿಯಾಗಿಸಲು, ಎಪಿಎಂಸಿ ಸೆಸ್ ಮೂಲಕ ಸಂಗ್ರಹವಾಗುವ ಅವರ್ಥ ನಿಧಿಯನ್ನು ಸಮರ್ಥವಾಗಿ ರೈತರ ಹಿತ ರಕ್ಷಣೆಗೆ ಬಳಸಲು ಆಗ್ರಹಿಸಿದೆ.
ತನ್ನ ಪೂರ್ಣ ವ್ಯಾಪ್ತಿಗೆ ಎಪಿಎಂಸಿ ಸಮಿತಿಗಳ ಅಧಿಕಾರವನ್ನು ಪುನರ್ ಸ್ಥಾಪಿಸುವ ಈ ರದ್ದತಿ ಒಂದೇ ಎಪಿಎಂಸಿ ಬಲಪಡಿಸಲು ಸಾಕಾಗುವುದಿಲ್ಲ. ಉದಾರೀಕರಣ ನೀತಿಗಳ ಒತ್ತಡಕ್ಕೆ ತಂದಿರುವ ಖಾಸಗಿ ಕಂಪನಿಗಳ ಪರವಾದ ಈ ಹಿಂದಿನ ತಿದ್ದಪಡಿಗಳಾದ ಆನ್ ಲೈನ್ ಮಾರಾಟ, ಕೋಲ್ಡ್ ಸ್ಟೋರೇಜ್, ಹಣ್ಣು-ತರಕಾರಿ ಮಾರುಕಟ್ಟೆಯಲ್ಲಿ ಎಪಿಎಂಸಿಯನ್ನು ಬೈಪಾಸ್ ಮಾಡುವ ರೈತ ವಿರೋಧಿ ತಿದ್ದುಪಡಿಗಳು ಕೂಡ ರದ್ದಾಗಬೇಕು ಎಂದು ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಶಾಂತಾರಾಮ ನಾಯಕ ಮತ್ತು ಕಾರ್ಯದರ್ಶಿ ಶ್ಯಾಮನಾಥ ನಾಯ್ಕ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top