ಶಿರಸಿ: ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದ ಸರ್ಕಾರ ಜನತೆಗೆ ಅನುಕೂಲವಾಗಲೆಂದು ಹಲವು ಗ್ಯಾರಂಟಿ ಯೋಜನೆಗಳು ಜಾರಿಗೆ ತಂದಿದ್ದು, ಆ ಪೈಕಿ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ಕೂಡ ಒಂದಾಗಿದೆ. ಈ ಯೋಜನೆಯಿಂದಾಗಿ ಸಾವಿರಾರು ಆಟೋ ಚಾಲಕರ ಸ್ಥಿತಿ ಏನು ಎಂದು ಶಿರಸಿ ಆಟೊ ಚಾಲಕ ಮಾಲಕರ ಸಂಘದ ಅಧ್ಯಕ್ಷ ಉಪೇಂದ್ರ ಪೈ ಪ್ರಶ್ನಿಸಿದ್ದಾರೆ.
2020- 21ರ ಮಾರಕ ಖಾಯಿಲೆಯಾದ ಕೋರೊನಾ ಸಂದರ್ಭದ ಭಾರಿ ಹೊಡೆತದಿಂದ ಕಂಗಾಲಾದ ಆಟೋ ಚಾಲಕರು ಇನ್ನೂ ಸುಧಾರಿಕೊಳ್ಳಲಾಗಲಿಲ್ಲ. ವಾಹನದ ವಿಮೆ, ಬ್ಯಾಂಕ್ ಸಾಲ, ಮನೆ ನಿರ್ವಹಣೆ, ಮಕ್ಕಳ ವಿಧ್ಯಾಭ್ಯಾಸ, ಪರ್ಮಿಟ್ ಲೈಸೆನ್ಸ್ ಇವೆಲ್ಲವೂನ್ನು ಆಟೋ ಬಾಡಿಗೆಯಿಂದಲೆ ನಿರ್ವಹಿಸಬೇಕಾಗುತ್ತದೆ. ಅಂತಹದರಲ್ಲಿ ಸರ್ಕಾರವು ಈ ರೀತಿ ಸವಲತ್ತು ನೀಡಿದರೆ ನಮ್ಮ ಕಷ್ಟಕ್ಕೆ ಯಾರು ಹೊಣೆ? ಎಂದು ಕೇಳಿದ್ದಾರೆ. ಸರ್ಕಾರವು ಎಚ್ಚೆತ್ತು ಆಟೋ ಚಾಲಕರಿಗೆ ಆದಷ್ಟು ಬೇಗ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.