ಕಾರವಾರ: ನಗರದ ದಿವೇಕರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ‘ಅಂತರಾಷ್ಟ್ರೀಯ ಮಾದಕದ್ರವ್ಯ ವಿರೋಧಿ ದಿನಾಚರಣೆ’ ಕಾರ್ಯಕ್ರಮ ನಡೆಯಿತು.
ಡಿವೈಎಸ್‌ಪಿ ವೆಲೈಂಟೈನ್ ಡಿಸೋಜಾ ಮಾತನಾಡಿ, ಡ್ರಗ್ಸ್ ವ್ಯಸನಕ್ಕೆ ತೊಡಗಿಕೊಂಡರೆ ಎಫ್‌ಐಆರ್ ದಾಖಲಾದರೆ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ನುಡಿದರು.
ಸಿಪಿಐ ಎಸ್.ಎಸ್.ಬಿಳಗಿ, ಗಾಂಜಾ ಸೇವನೆ ಮಾಡಿದರೆ ಹತ್ತು ಸಾವಿರ ದಂಡಹಾಕಲಾಗುತ್ತದೆ. ಗಾಂಜಾ ಸಾಗಾಟ ಮಾಡಿದರೆ ಇಪ್ಪತ್ತು ವರ್ಷಗಳವರೆಗೆ ಸೆರೆವಾಸ ಶಿಕ್ಷೆ ನೀಡಲಾಗುತ್ತದೆ. ಒಂದು ದೇಶದವನ್ನು ಹಾಳು ಮಾಡಲು ಡ್ರಗ್ಸ್ನ್ನು ಆಯುಧವಾಗಿ ಬಳಸಲಾಗುತ್ತದೆ. ಯಾರೇ ಡ್ರಗ್ಸ್ ಮಾರಾಟ ಮಾಡುವುದಾಗಲಿ, ಸೇವಿಸುವುದು ಕಂಡುಬAದರೆ 112ಗೆ ಕರೆ ಮಾಡಿ ತಿಳಿಸುವಂತೆ ಹೇಳಿದರು.
ನಗರ ಠಾಣೆಯ ಪಿಎಸ್‌ಐ ಸಂತೋಷಕುಮಾರ ಮಾತನಾಡಿ, ಮಾದಕ ವಸ್ತುಗಳನ್ನು ಸಮಾಜದಿಂದ ನಿರ್ಮೂಲನೆ ಮಾಡಲು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು. ಪ್ರಾಚಾರ್ಯ ಡಾ.ಕೇಶವ ಕೆ.ಜಿ. ಎಲ್ಲರನ್ನು ಸ್ವಾಗತಿಸಿ ಮಾತನಾಡಿ, ವಿದ್ಯಾರ್ಥಿಗಳು ಮಾದಕದ್ರವ್ಯ ವ್ಯಸನಿಯಾಗಿ ಬಾಳು ಹಾಳು ಮಾಡಿಕೊಳ್ಳಬಾರದು ಎಂದರು.
ಈ ಸಂದರ್ಭದಲ್ಲಿ ಪಿಎಸ್‌ಐ ಕುಮಾರ ಕಾಂಬ್ಳೆ ಹಾಗೂ ಉಪನ್ಯಾಸಕ ವರ್ಗ ಉಪಸ್ಥಿತರಿದ್ದರು. ಗ್ರಂಥ ಪಾಲಕ ಸುರೇಶ ಗುಡಿಮನಿ ನಿರೂಪಿಸಿದರು. ಬಿಸಿಎ ವಿಭಾಗದ ಮುಖ್ಯಸ್ಥ ಡಾ.ಹರೀಶ್ ಕಾಮತ ಪ್ರಮಾಣ ವಚನ ವಾಚಿಸಿ ಮಂದಿಸಿದರು.