ಭಟ್ಕಳ: ಆರ್‌ಎನ್‌ಎಸ್ ಸಂಸ್ಥೆ, ಶಿಕ್ಷಣ, ಆರೋಗ್ಯ ಕ್ಷೇತ್ರದ ಜೊತೆ ಕೈಗಾರಿಕಾ ವಿಭಾಗದಲ್ಲಿ ಸಾಕಷ್ಟು ಸಾಧನೆ ಮಾಡುತ್ತಿದೆ ಎಂದು ಮ್ಯಾಜಿಕ್ ಬಸ್ ಇಂಡಿಯಾ ಮ್ಯಾನೇಜರ್ ಕಲಾ ಪ್ರಕಾಶ ಮೆಚ್ಚುಗೆ ವ್ಯಕ್ತಪಡಿಸಿದರು.
ಮುರ್ಡೇಶ್ವರದ ಆರ್.ಎನ್.ಎಸ್. ಪ್ರಥಮ ದರ್ಜೆ ಕಾಲೇಜಿನಲ್ಲಿ ಆರ್.ಎನ್.ಶೆಟ್ಟಿ ಟ್ರಸ್ಟ್ ಮತ್ತು ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಆಯೋಜಿಸಿದ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆರ್‌ಎನ್‌ಎಸ್, ಶಿಕ್ಷಣ, ಆರೋಗ್ಯ, ಕೈಗಾರಿಕೆ ಸೇರಿದಂತೆ ವಿವಿಧ ರಂಗದ ಮೂಲಕ ಸಾವಿರಾರು ಸಂಖ್ಯೆಯ ಯುವಕರಿಗೆ ಉದ್ಯೋಗ ನೀಡಿದ ಹೆಮ್ಮೆಯ ಸಂಸ್ಥೆಯಾಗಿದೆ. ಇಂತಹ ಸಂಸ್ಥೆ ಹಾಗೂ ಸುತ್ತಮುತ್ತಲೂ ಅಧ್ಯಯನ ಮಾಡುತ್ತಿದ್ದ ಯುವಕರಿಗೆ ಇಂದು ಸಂದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕಾದ ಕೆಲಸ ಎಲ್ಲಾ ಎಲ್ಲ ವಿದ್ಯಾರ್ಥಿಗಳು ಮಾಡಬೇಕು ಎಂದರು.
ಆರ್.ಎನ್.ಶೆಟ್ಟಿ ಸಂಸ್ಥೆಯ ಸಿಇಓ ಕರಣ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು. ಆರ್.ಎನ್. ಸಂಸ್ಥೆಯ ಡಾ.ಸುಧೀರ್ ಪೈ ಮಾತನಾಡಿ, ಉದ್ಯೋಗ ಸಿಗದಿದ್ದರೆ ನಿರಾಶರಾಗಬೇಡಿ. ಮುಂದಿನ ಪ್ರಯತ್ನಕ್ಕೆ ಇದು ಮುನ್ನಡಿಯಾಗಲಿದೆ. ಎಂದಿಗೂ ಹಣದ ಹಿಂದೆ ಹೋಗಬೇಡಿ ಅನುಭವದ ಹಿಂದೆ ಹೋದರೆ ಮುಂದೆ ವ್ಯಕ್ತಿಯ ಅನುಭವದಿಂದ ಹಣ ಬರಲಿದೆ ಎಂದು ಸಲಹೆ ನೀಡಿದರು.
ಮುರುಳಿಕೃಷ್ಣ ಮಾತನಾಡಿ, ಸಮುದ್ರದಲ್ಲಿ ಹೇಗೆ ಅರ್ನಘ್ನ ರತ್ನ ಸಿಗಲಿದೆಯೋ ಹಾಗೆಯೇ ಇಂದು ನಡೆಯುವ ಸಂದರ್ಶನದಲ್ಲಿ ಅಂತಹ ವ್ಯಕ್ತಿಗಳು ಸಿಗಬಹುದು ಎನ್ನುವ ಆಶಾ ಭಾವನೆ ವ್ಯಕ್ತಪಡಿಸಿದರು. ದಿನೇಶ ಗಾವಂಕರ್, ವೃತ್ತಿ ಗೌರವ ಬಹು ಮುಖ್ಯವಾಗಿದೆ. ವಿದ್ಯಾರ್ಥಿಗಳು ಇದೊಂದು ಉತ್ತಮ ಅವಕಾಶ ಎಂದು ಅರಿತು ಇಲ್ಲಿ ಸಂದರ್ಶನಕ್ಕೆ ಹಾಜರಾಗಲು ಶುಭ ಹಾರೈಸಿದರು.
ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಸಂತೋಷ, ಪದವಿ ಕಾಲೇಜಿನ ಪ್ರಾಚಾರ್ಯ ಸಂಜಯ್ ಕೆ.ಎಸ್., ಮ್ಯಾಜಿಕ್ ಬಸ್ ಇಂಡಿಯಾದ ದಿನೇಶ, ವಿವಿಧ ಕಂಪನಿಯಿಂದ ಆಗಮಿಸಿದ ಸಂದರ್ಶಕರು ಉಪಸ್ಥಿತರಿದ್ದರು. ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದ ಪೂರ್ವದಲ್ಲಿ ರಕ್ಷಿತ ಕುಳಿಮನೆ ಇವರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.