• Slide
    Slide
    Slide
    previous arrow
    next arrow
  • ಮಕ್ಕಳ ವ್ಯಕ್ತಿತ್ವ ವಿಕಸನ ಮತ್ತು ಶೈಕ್ಷಣಿಕ ಉನ್ನತಿಯಲ್ಲಿ ಪಾಲಕರ ಪಾತ್ರ ಮಹತ್ವದ್ದು: ಫಾ.ರೊನಾಲ್ಡ್

    300x250 AD

    ದಾಂಡೇಲಿ: ನಗರ ಸೇಂಟ್ ಮೈಕಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಹಿ.ಪ್ರಾ.ಶಾಲೆಯಲ್ಲಿ ಶಾಲೆಯ 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳ ಪಾಲಕರಿಗಾಗಿ ಮಕ್ಕಳ ಕಲಿಕೆಯಲ್ಲಿ ಪಾಲಕರ ಪಾತ್ರ ಎಂಬ ವಿಷಯದ ಬಗ್ಗೆ ಹಮ್ಮಿಕೊಳ್ಳಲಾದ ಒಂದು ದಿನದ ಕಾರ್ಯಗಾರವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.
    ಕಾರ್ಯಕ್ರಮಕ್ಕೆ ಶಾಲಾ ಮುಖ್ಯೋಪಾಧ್ಯಯಿನಿ ಸಿಸ್ಟರ್ ಕ್ಲಾರೆಟ್ ಚಾಲನೆಯನ್ನು ನೀಡಿ ಮಕ್ಕಳ ಶೈಕ್ಷಣಿಕ ಉನ್ನತಿಯ ದೃಷ್ಟಿಯಿಂದ ಮಕ್ಕಳ ಕಲಿಕೆಯಲ್ಲಿ ಪಾಲಕರು ಯಾವ ರೀತಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂಬುವದರ ಅರಿವು ಮೂಡಿಸುವ ಸಣ್ಣ ಪ್ರಯತ್ನ ಈ ಕಾರ‍್ಯಗಾರದ್ದಾಗಿದೆ ಎಂದರು.

    ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಪಾಲಕರ ಸಂಘದ ಅಧ್ಯಕ್ಷರಾದ ಎಸ್.ಪ್ರಕಾಶ ಶೆಟ್ಟಿ, ಮಾತನಾಡಿ ಮಕ್ಕಳನ್ನು ಶಾಲೆಗೆ ಕಳುಹಿಸುವುದಷ್ಟೆ ಪಾಲಕರ ಜವಾಬ್ದಾರಿಯಲ್ಲ. ಅದರ ಹೊರತಾಗಿಯೂ ಮನೆಯಲ್ಲಿ ಮಕ್ಕಳ ಕಲಿಕೆಗೆ ಪೂರಕ ವಾತವರಣದ ಜೊತೆಗೆ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಕಾರ‍್ಯವನ್ನು ಮಾಡಬೇಕು. ಈ ನಿಟ್ಟಿನಲ್ಲಿ ಈ ಕಾರ‍್ಯಗಾರ ಉಪಯುಕ್ತವಾಗಲಿದೆ ಎಂದರು.
    ಶಾಲೆಯ ಅಧೀಕ್ಷಕಿ ಸಿಸ್ಟರ್ ವೀಣಾ ಉಪಸ್ಥಿತರಿದ್ದು, ಸಂದರ್ಭೋಚಿತವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ಉಪನ್ಯಾಸಕರಾದ ಫಾ: ರೋನಾಲ್ಡ್ ಮಾತನಾಡುತ್ತಾ, ಮಕ್ಕಳ ವ್ಯಕ್ತಿತ್ವ ವಿಕಸನ ಮತ್ತು ಶೈಕ್ಷಣಿಕ ಉನ್ನತಿಯಲ್ಲಿ ಶಾಲೆಯಷ್ಟೇ ಪಾಲಕರ ಜವಾಬ್ದಾರಿ ಬಹುಮುಖ್ಯವಾಗಿದೆ. ಮಕ್ಕಳಲ್ಲಿ ಮಕ್ಕಳಂತೆ ಇದ್ದು, ಮಕ್ಕಳಿಗೆ ಅವರ ಆಸಕ್ತಿದಾಯಕ ಚಟುವಟಿಕೆಗಳಿಗೆ ಪ್ರೇರೆಪಿಸುವ ಜೊತೆಗೆ ಕಲಿಕೆಯಲ್ಲಿ ಹೆಚ್ಚಿನ ರೀತಿಯಲ್ಲಿ ಮಕ್ಕಳನ್ನು ತೊಡಗಿಕೊಳ್ಳುವಂತೆ ಮಾಡುವುದು ಪ್ರತಿಯೊಬ್ಬ ಪಾಲಕರ ಮುಖ್ಯ ಕರ್ತವ್ಯವಾಗಿದೆ. ಪಾಲಕರು ಮಕ್ಕಳ ವಿಚಾರದಲ್ಲಿ ಅಸಡ್ಡೆ ತೋರದೆ, ಕರ್ತವ್ಯದಿಂದ ವಿಮುಖರಾಗದೆ, ಜವಾಬ್ದಾರಿಯನ್ನು ಅರಿತು ನಡೆದರೇ ಪ್ರತಿಯೊಂದು ವಿದ್ಯಾರ್ಥಿಯೂ ಈ ರಾಷ್ಟ್ರದ ಆಸ್ತಿಯಾಗಬಲ್ಲುದು ಎಂದರು. ಮಕ್ಕಳ ಮೇಲಿಟ್ಟ ಕನಸುಗಳು ನನಸಾಗಬೇಕಾದರೆ ಮಕ್ಕಳ ಜೊತೆ ಪಾಲಕರು ಪ್ರಯತ್ನಿಶೀಲರಾಗಬೇಕೆಂದು ಕರೆ ನೀಡಿದರು.
    ಶಿಕ್ಷಕರಾದ ರೆಲಿಕ್ ಬೋರ್ಜಸ್ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ವಿನೀತಾ ಡಯಾಸ್ ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕಿ ಪ್ರಿಯಾ ಡಯಾಸ್ ವಂದಿಸಿದರು. ಶಿಕ್ಷಕ ಸೀತಾರಾಮ ನಾಯ್ಕ ಕಾರ‍್ಯಕ್ರಮ ನಿರೂಪಿಸಿದರು. ಕಾರ‍್ಯಗಾರದಲ್ಲಿ ವಿದ್ಯಾರ್ಥಿಗಳ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top