ದಾಂಡೇಲಿ: ಜೂನ್ 12ರ ಸೋಮವಾರದಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 110/11 ಕೆವಿ ಅನಮೋಡ ಉಪಕೇಂದ್ರದ ಸೂಪಾ-ಗೋವಾ 110 ಕೆವಿ ಮಾರ್ಗದ ವಾಹಕ ಮತ್ತು ಗೋಪುರಗಳನ್ನು ಬದಲಾಯಿಸುವ ಕಾಮಗಾರಿಯನ್ನು ಕೈಗೊಳ್ಳುವ ಕಾರಣ ಜೋಯಿಡಾ ತಾಲ್ಲೂಕಿನ ಅಖೇತಿ, ಬಜಾರಕುಣಂಗ, ಕ್ಯಾಸಲ್ ರಾಕ್, ಅಸು ಗ್ರಾಮ ಪಂಚಾಯ್ತುಗಳಿಗೆ ಸಂಬಂಧಪಟ್ಟ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಸಹಾಯಕ ಕಾರ‍್ಯನಿರ್ವಾಹಕ ಅಭಿಯಂತರರಾದ ದೀಪಕ್ ನಾಯಕ ಮನವಿ ಮಾಡಿದ್ದಾರೆ.
ಜೂ.12ಕ್ಕೆ ಜೊಯಿಡಾದಲ್ಲಿ ಹಲವೆಡೆ ವಿದ್ಯುತ್ ವ್ಯತ್ಯಯ
