ಭಟ್ಕಳ: ಜಾಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಮಂಜಪ್ಪ ಎನ್. ನೇತೃತ್ವದಲ್ಲಿ ‘ವಿಶ್ವ ಪರಿಸರ ದಿನಾಚರಣೆ’ ಅಂಗವಾಗಿ, ಪ್ಲಾಸ್ಟಿಕ್‌ನಿಂದ ಆಗಬಹುದಾದ ಮಾಲಿನ್ಯದ ಕುರಿತು ಜಾಗೃತಿ ಮೂಡಿಸಲಾಯಿತು.
ತದನಂತರ ಗಿಡಗಳನ್ನು ನೆಟ್ಟು ಪರಿಸರ ಹಸರೀಕರಣ ಕುರಿತು ಹಾಗೂ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಕಾಟನ್ ಕೈಚೀಲಗಳನ್ನು ಬಳಸುವ ಕುರಿತು ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕ ವಿನಾಯಕ ನಾಯ್ಕ, ಪ್ರಭಾರ ಕಂದಾಯ ನಿರೀಕ್ಷಕ ಜಗದೀಶ ನಾಯ್ಕ, ಸಿಬ್ಬಂದಿಗಳಾದ ನೂತನ, ಭಾಗಿರಥಿ, ಸುಜಾತಾ, ಶ್ರೀಪಾದ ಅಕ್ಷಯ, ಸೂರಜ, ಸುನೀಲ್, ರಾಮ, ಮಾದೇವ ಉಪಸ್ಥಿತರಿದ್ದರು.