ಜೊಯಿಡಾ: ತಾಲೂಕಿನ ಫಣಸೋಲಿ ಅರಣ್ಯ ಇಲಾಖೆ ವ್ಯಾಪ್ತಿಯ ಅವರ್ಲಿ ಪ್ರಾಥಮಿಕ ಶಾಲೆಯಲ್ಲಿ ಫಣಸೋಲಿ ಅರಣ್ಯ ಇಲಾಖೆ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಫಣಸೋಲಿ ವಲಯ ಅರಣ್ಯಾಧಿಕಾರಿ ರಶ್ಮಿ ದೇಸಾಯಿ ಮಾತನಾಡಿ, ನಮ್ಮ ಭಾರತ ದೇಶದಲ್ಲಿ ಕರ್ನಾಟಕ ರಾಜ್ಯ ಅದರಲ್ಲಿ ನಮ್ಮ ಪಶ್ಚಿಮ ಘಟ್ಟ ಹಾಗೂ ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಕಾಡು ಉಳಿದಿದೆ. ನಗರ ಪ್ರದೇಶ ಹೆಚ್ಚಾದಷ್ಟು ಅರಣ್ಯ ನಾಶವಾಗುತ್ತದೆ. ಆದ್ದರಿಂದ ಮರಗಿಡಗಳನ್ನು ಕಡಿಯಬಾರದು ಹೆಚ್ಚಾಗಿ ಬೆಳೆಸಬೇಕು. ಮರಗಳಿಂದಲೇ ನಮಗೆ ಉಸಿರು. ಇದು ಈಗಿನ ಯುವಜನತೆಗೆ ತಿಳಿಯಬೇಕು ಮತ್ತು ಯುವಜನತೆ ಹೆಚ್ಚು ಮರ- ಗಿಡಗಳನ್ನು ಬೆಳೆಸಬೇಕು ಎಂದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಸಸಿ ನೆಡುವ ಹಾಗೂ ಬೀಜದ ಊಂಡೆಗನ್ನು ಮಾಡುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಡಿಎರ್‌ಎಫ್‌ಓ ರಾಜಕುಮಾರ್ ಹಾಗೂ ಅರಣ್ಯ ಸಿಬ್ಬಂದಿಗಳು ಮತ್ತು ಶಾಲೆಯ ಶಿಕ್ಷಕರು ಊರಿನ ಸ್ಥಳೀಯರು ಉಪಸ್ಥಿತರಿದ್ದರು.