• Slide
    Slide
    Slide
    previous arrow
    next arrow
  • ಪ್ರಕೃತಿ ವಿಕೋಪ ಸಮಯದಲ್ಲಿ ಶೌರ್ಯ ತಂಡ ನೆರವಾಗುತ್ತದೆ: ಜಿ.ಯು.ಭಟ್

    300x250 AD

    ಹೊನ್ನಾವರ: ಪ್ರಕೃತಿ ವಿಕೋಪ ಸಮಯದಲ್ಲಿ ಗ್ರಾಮೀಣ ಭಾಗಕ್ಕೆ ಜಿಲ್ಲೆ ಹಾಗೂ ತಾಲೂಕು ಕೇಂದ್ರದಿಂದ ನೆರವಾಗಲು ವಿಳಂಬವಾದರೂ ತಕ್ಷಣ ಸ್ಥಳೀಯ ಮಟ್ಟದಿಂದ ನೆರವು ಸಿಗಲು ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡ ಸಹಕಾರಿಯಾಗಲಿದೆ ಎಂದು ಹಿರಿಯ ಪತ್ರಕರ್ತ ಜಿ.ಯು. ಭಟ್ ಅಭಿಪ್ರಾಯಪಟ್ಟರು.

    ಪಟ್ಟಣದ ಎಸ್.ಡಿ.ಎಂ ಕಾಲೇಜಿನ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ಶ್ರೀಧರ್ಮಸ್ಥಳ ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಾಜ್ಯದ ಆರು ಕೋಟಿಯಲ್ಲಿ ಎರಡು ಕೋಟಿ ಜನರಿಗೆ ವಿವಿಧ ರೀತಿಯಲ್ಲಿ ನೆರವಾಗಿದೆ. ನಾವು ಹೇಗೆ ಸಮಾಜಕ್ಕೆ ನೆರವಾಗಬಹುದು ಎನ್ನುವುದಕ್ಕೆ ಗ್ರಾಮಾಭಿವೃದ್ದಿ ಯೋಜನೆಯ ಹಲವು ಕಾರ್ಯಕ್ರಮದ ಮೂಲಕ ಡಾ.ವಿರೇಂದ್ರ ಹೆಗ್ಗಡೆಯವರು ತೋರಿಸುತ್ತಾ ಬಂದಿದ್ದಾರೆ. ತಾಲೂಕಿನಲ್ಲಿ ಸಮುದ್ರದಿಂದ ಕಡಲ್ಕೊರೆತ, ಲಿಂಗನಮಕ್ಕಿ ಡ್ಯಾಂ ಭರ್ತಿಯಾಗಿ ಬರುವ ನೀರು, ಗುಂಡಬಾಳ ನದಿ ನೀರಿನ ಅಪಾಯ ದಶಕಗಳಿಂದ ಶರಾವತಿ ಎಡಬಲ ದಂಡೆ, ಕರ್ಕಿ ಕಾಸರಕೋಡ ಭಾಗದಲ್ಲಿ ಹಾಗಾಗಿ ಸಂಭವಿಸುತ್ತಿದೆ. ಇಂತಹ ಸಮಯದಲ್ಲಿ ಈ ತಂಡವು ಕಳೆದ ಮೂರು ವರ್ಷದಿಂದ ನೆರವಾಗುತ್ತಿದೆ. ಕಳೆದೆರಡು ವರ್ಷದ ಹಿಂದೆ ಕೋವಿಡ್ ಸಮಯದಲ್ಲಿ ಅಂಬ್ಯುಲೆನ್ಸ್ಸ್ ನೀಡಿ ತಾಲೂಕಿನ ಜನತೆಗೆ ಯೋಜನೆಯಿಂದ ಅನೂಕೂಲವಾಗಿದೆ ಎಂದು ಸ್ಮರಿಸಿದರು.

    ತಾಲೂಕು ಮಟ್ಟದ ಸಾಧಕ ತಂಡಗಳಿಗೆ ಪ್ರಶಸ್ತಿ ವಿತರಿಸಿ ಗೌರವಿಸಲಾಯಿತು. ಜಿಲ್ಲಾ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ ವಿ.ಪಾಯಸ್ ಮಾತನಾಡಿ, ಜಿಲ್ಲೆಯ ಕಾರವಾರದಿಂದ ನೆರೆಯ ಮಂಗಳೂರಿನವರೆಗೆ ಕಡಲತೀರದಲ್ಲಿ ಸಮುದ್ರದಲ್ಲಿ ಹಲವು ಅಪಾಯವನ್ನುಂಟು ಮಾಡುತ್ತಿದೆ. ಹೆದ್ದಾರಿಯಲ್ಲಿ ದಿನನಿತ್ಯ ಅಪಘಾತಗಳಿಂದ ಮನುಷ್ಯರು ಪ್ರಾಣಿಗಳು ಸಾವನ್ನು ಅನುಭವಿಸುತ್ತಿದ್ದಾರೆ. ಇಲ್ಲಿ ಸಂಭವಿಸುವ ವಿಪತ್ತು ಯಾರನ್ನು ಬಿಡುವುದಿಲ್ಲ. ನಾವೆಲ್ಲರೂ ಈ ಸಮಯದಲ್ಲಿ ಹೆಚ್ಚಿನ ಅನಾಹುತ ಸಂಭವಿಸದಂತೆ ಜಾಗೃತವಾಗಬೇಕಿದೆ. ಈ ಸಮಯದಲ್ಲಿ ಗ್ರಾಮಾಭಿವೃದ್ಧಿ ಯೋಜನೆ 74 ತಾಲೂಕಿನಲ್ಲಿ ಹತ್ತು ಸಾವಿರ ಸ್ವಯಂಸೇವಕರನ್ನು ಸಿದ್ಧ ಮಾಡಿ ಪ್ರಕೃತಿ ವಿಕೋಪದ ಸಮಯದಲ್ಲಿ ನೆರವಾಗಲು ಸಿದ್ದಪಡಿಸಲಾಗುತ್ತಿದೆ. ಈ ತಾಲೂಕಿನ ಆಪ್ತ ಕಾಲದಲ್ಲಿ ಆಪ್ತರಕ್ಷಕರಾಗಿ ಸೇವೆ ಸಲ್ಲಿಸುವಂತೆ ಸೂಚಿಸಿದರು. ಅಪಾಯದ ನೆರೆಕೆರೆಯ ರಾಷ್ಟ್ರದ ಮಧ್ಯೆ ನಮ್ಮ ದೇಶವಿದ್ದು, ನಮಗೆ ಅಪಾಯವನ್ನುಂಟು ಮಾಡುತ್ತಿದೆ. ನಮ್ಮಲ್ಲಿಯ ಯುವಸಮುದಾಯವನ್ನು ಡ್ರಗ್ಸ್ ದಾಸರನ್ನಾಗಿಸುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಯೋಜನೆಯು ಸ್ವಾಸ್ಥ್ಯ ಸಂಕಲ್ಪದಂತಹ ಕಾರ್ಯಕ್ರಮ ನಡೆಸುತ್ತಿದೆ ಎಂದರು.

    300x250 AD

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯರಾದ ವಿಜಯಲಕ್ಷ್ಮಿ ನಾಯ್ಕ ಆಪತ್ತು ಹಾಗೂ ವಿಪತ್ತು ಆಕಸ್ಮಿಕವಾಗಿ ಬರಲಿದ್ದು, ಅಂತಹ ಸಮಯದಲ್ಲಿ ನಿಮ್ಮ ಜೀವನವನ್ನು ಪಣಕಿಟ್ಟು ನೆರವಾಗುವ ಕಾರ್ಯ ಮಾದರಿಯಾಗಿದೆ. ಹೆಚ್ಚಿನ ಸದಸ್ಯರು ಈ ತಂಡದಲ್ಲಿ ಸೇರ್ಪಡೆಯಾಗಿ ಇನ್ನಷ್ಟು ಸಮಾಜಮುಖಿ ಕಾರ್ಯ ನಡೆಯಲಿ ಎಂದು ಶುಭ ಹಾರೈಸಿದರು. ಪೊಲೀಸ್ ಠಾಣೆಯ ಎ.ಎಸೈ ಸುಶಾಂತ, ಅಗ್ನಿಶಾಮಕ ಠಾಣಿಯ ರಾಘವೇಂದ್ರ ಪಟಗಾರ, ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಗಣೇಶ ಆಚಾರ್ಯ, ಶೌರ್ಯ ವಿಪತ್ತು ನಿರ್ವಹಣೆ ಪಡೆಯ ಯೋಜನಾಧಿಕಾರಿ ಜೈವಂತ ಪಟಗಾರ ಯೋಜನೆಯ ಕಾರ್ಯಕರ್ತರು, ವಿಪತ್ತು ನಿರ್ವಹಣಾ ಘಟಕದ ಸಂಯೋಜಕರು ಸದಸ್ಯರು ಹಾಜರಿದ್ದರು. ತಾಲೂಕ ಯೋಜನಾಧಿಕಾರಿ ವಾಸಂತಿ ಅಮೀನ್ ಸ್ವಾಗತಿಸಿ, ಮೇಲ್ವಿಚಾರಕ ಉದಯ ವಂದಿಸಿ, ನಾಗರಾಜ ಕೆ. ನಿರ್ವಹಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top