ಅಂಕೋಲಾ: ಆದರ್ಶ ಗುಣದ ಬಹುಮುಖ ಪ್ರತಿಭೆಯ ಕ್ರಿಯಾಶೀಲ ಶಿಕ್ಷಕ ಸಾತು ಗೌಡರ ನಿವೃತ್ತಿ ನಿಮಿತ್ತ ಅವರ ಆತ್ಮೀಯ ಒಡನಾಡಿ ಗೆಳಯರ ಬಳಗವು ಅವರ ಮನೆಯಂಗಳಕ್ಕೆ ಆಗಮಿಸಿ ಸಾತುಗೌಡ ದಂಪತಿಯನ್ನು ಸನ್ಮಾನಿಸಿತು.
ನಿವೃತ್ತ ಶಿಕ್ಷಕ ಸಾತುಗೌಡರಿಗೆ ಗೆಳೆಯರ ಬಳಗವು ಶಾಲು ಹೊದಿಸಿ, ಫಲಪುಷ್ಪ ಮತ್ತು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಶುಭಕೋರಿತು. ನಿವೃತ್ತ ಶಿಕ್ಷಕ ಬಿ.ಪಿ.ಗೌಡ, ಸಾತು ಗೌಡರ ಸೇವೆ, ಪರಿಚಯ ಮತ್ತು ಒಡನಾಟದ ಕುರಿತು ಆತ್ಮೀಯತೆ ಹಂಚಿಕೊಂಡರೆ, ಸ್ನೇಹಿತ ಉಮೇಶ ಗೌಡ ತಮ್ಮ ದೀರ್ಘಕಾಲದ ಸ್ನೇಹದ ಒಡನಾಟದ ಅನುಭವ ಹಂಚಿಕೊಂಡರು.
ಇನ್ನೋರ್ವ ನಿವೃತ್ತ ಶಿಕ್ಷಕ ಲಕ್ಷ್ಮಣ ವಿ.ಗೌಡ ಬೆಳೆಸೆ ಸನ್ಮಾನಿತರ ವಿಶಾಲ ಆದರ್ಶ ಗುಣಗಳನ್ನು ಹಂಚಿಕೊಂಡು ಶುಭಕೋರಿದರು. ಶಿಕ್ಷಕ, ಸ್ತ್ರೀ ಪಾತ್ರಧಾರಿ ತುಳಸು ಮಾಸ್ತರ ಮತ್ತು ಶಿಕ್ಷಕ ಚಂದ್ರಕಾಂತ ಗೌಡ ಬೆಳೆಸೆ ಮುಂತಾದವರು ಅಭಿಮಾನದಿಂದ ಮಾತನಾಡಿ ನಿವೃತ್ತ ಜೀವನಕ್ಕೆ ಶುಭ ಕೋರಿದರು.
ಪ್ರಮೋದಗೌಡ ಬೆಳಸೆ, ನಾಗರಾಜ ಗೌಡ ಬೆಳಸೆ, ಗ್ರಾ.ಪಂ. ಪಿಡಿಓ ಮಾದೇವ ಗೌಡ, ವನಜಾಕ್ಷಿ ಗೌಡ, ಸಾತು ಮಾಸ್ತರ ಅಂಬಾರಕೊಡ್ಲ, ಮಹಾಬ್ಲೇಶ್ವರ ಗೌಡ ಬೆಳಸೆ, ಯುವರಾಜ್, ಸೂರಜ್, ಸುಮನಾ ಉಮೇಶ್, ಪುಷ್ಪಾ ಗೌಡ, ಸಂದೀಪ ಗೌಡ ಮತ್ತು ತುಳಸಿದಾಸ ಗೌಡ ಹಾರವಾಡ, ಅಂಕೋಲಾ ಕ್ಷೇತ್ರ ಶಿಕ್ಷಣ ಅಧಿಕಾರಿ ಕಚೇರಿಯ ಸಹಾಯಕ ಆನಂದು ಗೌಡ ಮುಂತಾದವರು ಹಾಜರಿದ್ದು ಶುಭ ಕೋರಿದರು. ಮನೆಯಂಗಳಕ್ಕೆ ಆಗಮಿಸಿ ಸನ್ಮಾನಿಸಿದ ಗೆಳೆಯರ ಬಳಗಕ್ಕೆ ಶುಭಾಶಯ ಕೋರುತ್ತಾ ತಮ್ಮ ಶಾಲಾ ದಿನದ ಸುಂದರ ಸೇವಾ ಅನುಭವವನ್ನು ಹಂಚಿಕೊಂಡರು.