Slide
Slide
Slide
previous arrow
next arrow

ವಿಪತ್ತು ನಿರ್ವಹಣೆಗೆ ಸಜ್ಜಾದ ಶೌರ್ಯ ಸ್ವಯಂ ಸೇವಕರು

300x250 AD

ಕಾರವಾರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಾರವಾರ- ಅಂಕೋಲಾ ಹಾಗೂ ಜನಜಾಗೃತಿ ವೇದಿಕೆ ಬೆಳ್ತಂಗಡಿ ಸಂಯುಕ್ತ ಆಶ್ರಯದಲ್ಲಿ ಶೌರ್ಯ ವಿಪತ್ತು ನಿರ್ವಹಣೆ ಸ್ವಯಂ ಸೇವಕರ ಸಭೆ ನಡೆಯಿತು.

ಅಗ್ನಿಶಾಮಕ ದಳದ ಡಿಎಫ್‌ಒ ಮಂಜುನಾಥ ಕಾರ್ಯಕ್ರಮ ಉದ್ಘಾಟನೆ ಮಾಡಿ, ಮಾಹಿತಿ ಮಾರ್ಗದರ್ಶನ ನೀಡಿದರು. ವಿಪತ್ತು ನಿರ್ವಹಣೆ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾಯಸ್ ಮಾತನಾಡಿ, ವಿಪತ್ತಿನಲ್ಲಿರುವ ಸಾರ್ವಜನಿಕರ ಸಹಾಯಕ್ಕಾಗಿ ಮಾಡಿರುವಂತಹ ಈ ಕಾರ್ಯಕ್ರಮಕ್ಕೆ 2023- 24ನೇ ಸಾಲಿನಲ್ಲಿ ಕರ್ನಾಟಕ ರಾಜ್ಯಾದ್ಯಂತ 2 ಕೋಟಿ ಅನುದಾನವನ್ನು ಮೀಸಲಿಟ್ಟಿದ್ದಾರೆ. ವಿಪತ್ತಿನಲ್ಲಿರುವ ಜನರಿಗೆ ನಮ್ಮ ಸ್ವಯಂಸೇವಕರು ಸಹಾಯ ಮಾಡಲು ಎಲ್ಲಾ ಸಂದರ್ಭದಲ್ಲಿಯೂ ಸಿದ್ಧರಿರಬೇಕೆಂದು ಕರೆನೀಡಿದರು.

ಅಂಕೋಲಾ– ಕಾರವಾರ ತಾಲೂಕಿನಲ್ಲಿ 8 ಶೌರ್ಯ ಘಟಕಗಳಿದ್ದು, 92 ಜನ ಸ್ವಯಂ ಸೇವಕರಿದ್ದು, ಮಳೆಗಾಲದಲ್ಲಿ ಎದುರಾಗಬಹುದಾದ ಆಪತ್ತುಗಳಿಗೆ ಶೀಘ್ರ ಶಮನ ನೀಡುವಂತೆ ಮಾಹಿತಿ ನೀಡಿದರು. ವಿಪತ್ತು ವಿಭಾಗದ ಯೋಜನಾಧಿಕಾರಿ ಜೈವಂತ ಪಟಗಾರ ಹಾಗೂ ಜನಜಾಗೃತಿ ವೇದಿಕೆ ಉಡುಪಿ ವಿಭಾಗದ ಯೋಜನಾಧಿಕಾರಿ ಗಣೇಶ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಮಾಹಿತಿನೀಡಿದರು.

300x250 AD

ಯೋಜನಾಧಿಕಾರಿ ವಿನಾಯಕ ನಾಯ್ಕ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಮೇಲ್ವಿಚಾರಕ ಶಂಭುಕೃಷ್ಣ ಪಟಗಾರ ಕಾರ್ಯಕ್ರಮವನ್ನು ನಿರೂಪಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಸುಜಾತ ನಾಯ್ಕ ಸಾಧನಾ ವರದಿ ಮಂಡನೆ ಮಾಡಿದರು. ಮೇಲ್ವಿಚಾರಕ ನಾಗರಾಜ ಭಂಡಾರಿ ಕಾರ್ಯಕ್ರಮಕ್ಕೆ ವಂದಿಸಿದರು. ಕೃಷಿ ಮೇಲ್ವಿಚಾರಕ ಭಾಸ್ಕರ ಎಮ್., ಮೇಲ್ವಿಚಾರಕ ಚಿದಾನಂದ ತಳವಾರ, ಲತಾ ನಾಯ್ಕ, ಶೋಭಾ ಪೂಜಾರಿ, ಶೌರ್ಯ ವಿಪತ್ತು ನಿರ್ವಹಣೆ ತಂಡದ ಘಟಕ ಪ್ರತಿನಿಧಿಗಳು, ಸಂಯೋಜಕರು ಹಾಗೂ ಸ್ವಯಂಸೇವಕರು ಸೇರಿ ಒಟ್ಟು 92 ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Share This
300x250 AD
300x250 AD
300x250 AD
Back to top