Slide
Slide
Slide
previous arrow
next arrow

ಮಳೆಗಾಲ ಆರಂಭಕ್ಕೂ ಮುನ್ನ ಜಾಗೃತೆ ವಹಿಸಿ: ಮಂಕಾಳ ವೈದ್ಯ

300x250 AD

ಕಾರವಾರ: ಮಳೆಗಾಲ ಆರಂಭವಾಗಿರುವುದರಿಂದ ಚಂಡಮಾರುತದಂತಹ ಅನಾಹುತಗಳು ಸಂಭವಿಸಬಹುದು. ಹೀಗಾಗಿ ಅನಾಹುತಗಳು ಸಂಭವಿಸುವುದಕ್ಕಿಂತ ಮೊದಲೇ ಮುಂಜಾಗೃತೆ ವಹಿಸುವಂತೆ ಅಧಿಕಾರಿಗಳಿಗೆ ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ ವೈದ್ಯ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಾರ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಡಲು ಕೊರೆತ, ಬಂದರು ಹಾಗೂ ಇತರೆ ವಿಷಯಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶಾಲೆ, ಅಂಗನವಾಡಿ, ಆರೋಗ್ಯ, ವಿದ್ಯುತ್ ಮತ್ತು ಕುಡಿಯುವ ನೀರು ಈ ಸೌಲಭ್ಯಗಳನ್ನು ನೀಡುವ ಇಲಾಖೆಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಆಯಾ ಇಲಾಖೆಗಳ ಸಿಬ್ಬಂದಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ಆಯಾ ಇಲಾಖೆಯಲ್ಲಿ ಒಟ್ಟು ಮಂಜೂರಾದ ಹುದ್ದೆಗಳು ಮತ್ತು ಪ್ರಸ್ತುತ ಕಾರ್ಯನಿವಹಿಸುತ್ತಿರುವ ಸಿಬ್ಬಂದಿಗಳ ಅಂಕಿ- ಸಂಖ್ಯೆಗಳ ಮಾಹಿತಿ ಪಡೆದುಕೊಂಡರು. ಎಲ್ಲದಕ್ಕಿಂತ ಮುಖ್ಯವಾಗಿ ಈ ಜಿಲ್ಲೆಯಲ್ಲಿ ಆರೋಗ್ಯ ಮತ್ತು ಹೆಸ್ಕಾಂ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಮಳೆಗಾಲದ ಸಮಯದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿರುತ್ತದೆ ಅದರಿಂದ ತುರ್ತು ಸಿಬ್ಬಂದಿಗಳು ಮತ್ತು ಅಗತ್ಯವಿರುವ ಉಪಕಾರಣಗನ್ನು ಶೇಖರಣೆ ಮಾಡಿ ಇಟ್ಟುಕೊಳ್ಳಿ ಹಾಗಿಯೇ ಸಾರ್ವಜನಿಕರು ಐಪಿ ಸೆಟ್ ಗೆ ಅರ್ಜಿ ಸಲ್ಲಿಸಿದರೆ ವಿಳಂಬ ಮಾಡದೇ 15 ದಿನ ಒಳಗಾಗಿ ಬಡವರಿಗೆ ಕರೆಂಟ್ ನೀಡುಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.

ಮಳೆಗಾಲದಲ್ಲಿ ರಸ್ತೆ ಬದಿಯಲ್ಲಿ ನೀರು ನಿಲ್ಲದ ರೀತಿಯಲ್ಲಿ ತಡೆಯಲು ಕ್ರಮವಹಿಸಬೇಕು. ಚರಂಡಿಗಳ ಬ್ಲಾಕ್ ಆಗಬಾರದು ರಸ್ತೆ ಮೇಲೆ ನೀರು ನಿಲ್ಲಬಾರದು ಸಾರ್ವಜನಿಕರಿಗೆ, ಶಾಲೆಗೆ ಹೋಗುವ ಮಕ್ಕಳಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಆಯಾ ತಾಲೂಕಿನ ಪಿಡಿಓ ಕೆಲಸ ನಿರ್ವಹಿಸಬೇಕು ಎಂದರು.

300x250 AD

ಐಆರ್‌ಬಿ ಅಡಿಯಲ್ಲಿ ಸಿರೂರು ಬೌಂಡರಿಯಿಂದ ಗೋವಾ ಬೌಂಡರಿ ರಸ್ತೆಗಳು ಎಷ್ಟು ಪ್ರಮಾಣದಲ್ಲಿ ಕೆಲಸವಾಗಿದೆ. ಭಟ್ಕಳ್ ಹೊನ್ನಾವರ ಕ್ಷೇತ್ರದಲ್ಲಿ ಕೆಲಸ ಎಷ್ಟಾಗಿದೆ ಒಂದು ವೇಳೆ ಕೆಲಸವಾಗದಿದ್ದಲ್ಲಿ ಕಾರಣ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಸಮರ್ಪಕ ರಸ್ತೆಯಿಂದ ಎಷ್ಟೋ ಸಾವು ನೋವುಗಳು ಸಂಭವಿಸಿವೆ ಬಡವರಿಗೆ ಉಪಯೋಗವಾಗದೆ ಇರುವ ರಸ್ತೆ ಕಂಪನಿಗಳು ನಮ್ಮ ಜಿಲ್ಲೆಗೆ ಅವಶ್ಯಕತೆವಿರುವುದಿಲ್ಲಾ. ಕೆಲಸ ಮಾಡದ ಕಂಪನಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ಜಿಲ್ಲಾ ಕಾರವಾರ- ಅಂಕೋಲಾ ಶಾಸಕ ಸತೀಶ್ ಕೆ.ಸೈಲ್, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕಧಿಕಾರಿ ಈಶ್ವರಕುಮಾರ ಖಂಡೂ, ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಪ್ರೊಬೆಷನರಿ ಐಎಎಸ್ ಅಧಿಕಾರಿ ಜುಬಿನ್ ಮಹಾಪಾತ್ರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಶಾಂತಕುಮಾರ, ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯ್‌ಕೋಡ್, ಡಿವೈಎಸ್‌ಪಿ ವಾಲೆಂಟೈನ್ ಡಿಸೋಜಾ, ಜಿಲ್ಲಾ ಮತ್ತು ತಾಲೂಕಿನ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top