ಕಾರವಾರ: ಜಿಲ್ಲೆಯ ಕುಮಟಾ ತಾಲೂಕಿನ ಗ್ರಾಮ/ಮಜಿರೆಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲು ಆಸಕ್ತ ಗುತ್ತಿಗೆದಾರರಿಂದ ಆಸಕ್ತವಿರುವ ಗುತ್ತಿಗೆದಾರರಿಂದ ದರಪಟ್ಟಿ ಆಹ್ವಾನಿಸಲಾಗಿದೆ.
ಆಸಕ್ತರು ದರಪಟ್ಟಿಯನ್ನು ಜೂನ್ 09 ರಂದು ಸಾಯಂಕಾಲ 3.00 ಗಂಟೆ ಒಳಗಾಗಿ ತಹಶೀಲದಾರ ಕಚೇರಿಯಲ್ಲಿ ಸಲ್ಲಿಸಬಹುದು ಹಾಗೂ ಟೆಂಡರನ್ನು ಜೂನ್ 09 ರಂದು ಸಾಯಂಕಾಲ 5.00 ಗಂಟೆಗೆ ತಹಶೀಲದಾರ ಕಾರ್ಯಾಲಯದಲ್ಲಿ ಹಾಜರಿದ್ದ ಗುತ್ತಿಗೆದಾರರ ಸಮಕ್ಷಮ ತೆರೆಯಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ Tel:+9108386222054 ಗೆ ಸಂಪರ್ಕಿಸಿ ಎಂದು ಕುಮಟಾ ತಹಸೀಲ್ದಾರ್ ಶಿವಯೋಗಿ ಎಸ್. ನಾಯ್ಕಲಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.