eUK ವಿಶೇಷ: ಸರ್ವಂ ಶಕ್ತಿ ಮಯಂ ಝೀಫೈವ್ ಒಟಿಟಿ ವೇದಿಕೆಯಲ್ಲಿ ಎಲ್ಲರೂ ಉಚಿತವಾಗಿ ನೋಡಬಹುದು. ಹಿಂದಿ ಭಾಷೆಯ ಚಿತ್ರ. ತಲಾ ಮೂವತ್ತು ನಿಮಿಷಗಳ ಹತ್ತು ಸಂಚಿಕೆಗಳಿರುವ ವೆಬ್ ಸಿರೀಸ್ ಇದು. ಪೂರ್ತ ಮುನ್ನೂರು ನಿಮಿಷಗಳ ಚಿತ್ರ.
ಇದರಲ್ಲಿ ಏನಿದೆ? ಕಥೆ ಏನು? ಏನು ತೋರಿಸಿದ್ದಿರಿ? ಕೇರಳ ಸ್ಟೋರಿ, ಕಾಶ್ಮೀರ್ ಫೈಲ್ಸ್ ನಂತರ ಇದೂ ಆ ಸಾಲಿಗೆ ಹೇಗೆ ಹೊಂದಿಕೊಳ್ಳುತ್ತದೆ.
ಅವೆರಡು ಚಿತ್ರಗಳು ನೈಜ ಘಟನೆ ಆಧಾರಿತ. ಸರ್ವಂ ಶಕ್ತಿಮಯಂ ಒಂದು ಕಾಲ್ಪನಿಕ ಕಥೆ. ಕೌಟುಂಬಿಕ ಡ್ರಾಮಾ ಇದು. ಒಂದು ಕಡೆ ದೇವರ ನಂಬದ ಒಬ್ಬ ವ್ಯಕ್ತಿ. ಇನ್ನೊಂದೆಡೆ ಆಸ್ತಿಕ ಸಂಸಾರ-ಗಂಡ ಹೆಂಡತಿ ಮಗ ಮಗಳು ಇರುವ ಕುಟುಂಬ. ಇವುಗಳೇ ಐದು ಪ್ರಧಾನ ಪಾತ್ರಗಳು. ಅವರ ಜೀವನ ಪಯಣ ಕಥನ ಬರುತ್ತದೆ. ಕುಟುಂಬಕ್ಕೆ ನಾನಾ ತರದ ಸಮಸ್ಯೆ ಎದುರಾದಾಗ ಹದಿನೆಂಟು ಪೀಠಗಳ ದರ್ಶನ ಮಾಡಿದರೆ ಪರಿಹಾರ ಎಂದಾಗ ಕುಟುಂಬಸ್ಥರು ಹಾಗೇ ಮಾಡಲು ಮುಂದಾಗುತ್ತಾರೆ. ಸಮಸ್ಯೆ ಬಂದೇ ಬರುತ್ತದೆ. ಅದರ ಮಧ್ಯ ದೈವಿಕ ಶಕ್ತಿಯ ಪ್ರವೇಶ ಪ್ರಭಾವ ಕೂಡಾ ಆಗುತ್ತದೆ.. ನಂತರ ಏನೇನಾಗುತ್ತದೆ ಎಂದು ಚಿತ್ರ ಒಳಗೊಂಡಿದೆ.
ಇದರ ಸಂಭಾಷಣೆಕಾರ ವಿ.ವಿ.ರವಿ. ಇದಕ್ಕೆ ಪ್ರದೀಪ್ ಮಂದಾಲಿ ನಿರ್ದೇಶಕರು.
ಯಾವ ಸತ್ವ ಇದೆ ಎಂದು ನಿರ್ಮಾಣಕ್ಕೆ ಮುಂದಾಗಿದ್ದೀರಿ? ಭಕ್ತಿಯೇ ಶಕ್ತಿ ಎಂಬುದು ತತ್ವ. ಅದನ್ನು ನೆಚ್ಚಿ ಈ ಚಿತ್ರ ಹೊರಬರುತ್ತದೆ. ಅದನ್ನು ಸಾಬೀತು ಮಾಡುತ್ತಿಲ್ಲ. ಹೇಳಹೊರಟಿದೆ ಅಷ್ಟೇ. ಪ್ರತಿಯೊಬ್ಬರಿಗೂ ಸಮಸ್ಯೆ ಬರುತ್ತದೆ. ವೈಯುಕ್ತಿಕ, ವೃತ್ತಿಪರ, ವೈವಾಹಿಕ ಸಮಸ್ಯೆಗಳು ಜೀವನದಲ್ಲಿ ಎದುರಾಗುತ್ತವೆ. ಅದನ್ನು ದಾಟುವುದು ಹೇಗೆ? ಇಲ್ಲಿ ಭಕ್ತಿಯ ಶಕ್ತಿ ಏನು? ಎನ್ನುವುದನ್ನು ತೋರಿಸಲು ಯತ್ನಿಸಿದೆ ಈ ಚಿತ್ರ. ಮನುಷ್ಯನ ಮೀರಿಸುವ ಒಂದು ವಿಶೇಷ ಶಕ್ತಿ ಇದೆ. ಅದು ಹೇಗೆಲ್ಲ ಕೆಲಸ ನಾಡಬಹುದು ಪ್ರಭಾವ ಬೀರಬಹುದು? ಎಂದೆಲ್ಲ ಕಥೆಯಲ್ಲಿದೆ.
ಈ ಚಿತ್ರದ ಸಮೀರ್ ಸೋನಿ ಪಾತ್ರ ಹೊರದೇಶದಿಂದ ಮರಳಿದ ಹಿನ್ನೆಲೆ ಹೊಂದಿ ದೇವರ ಕುರಿತ, ಹಿಂದುಯಿಸಂ ಕುರಿತ ಅನೇಕ ಪ್ರಶ್ನೆ ಕೇಳುತ್ತದೆ. ಈ ಪ್ರಶ್ನೆಗಳಿಗೆಲ್ಲ ಉತ್ತರ ನೀಡುವಂಥ ಪ್ರಯತ್ನಕ್ಕೆ ಸಂಬಂಧಿಸಿದಂತೆ ಚಿತ್ರವಿದೆ.
ಇನ್ನು ಮಂದಿರಗಳ ಕುರಿತು ಬಂದಾಗ ಒಂದು ಶ್ಲೋಕವಿದೆ, ಹದಿನೆಂಟು ಶಕ್ತಿಪೀಠಗಳ ಹೆಸರು ಇರುವ ಒಂಬತ್ತು ಸಾಲುಗಳ ಶ್ಲೋಕದ ಪ್ರಕಾರ ಹೆಸರಿಸಲಾದ ಶಕ್ತಿಪೀಠಗಳ ಪೈಕಿ ಒಂದು ಶ್ರೀಲಂಕಾದಲ್ಲಿಯೂ ಇದೆ, ಶಾರದಾ ಪೀಠ ಗಡಿನಿಯಂತ್ರಣ ರೇಖೆ ಬಳಿ ಇದೆ. ಈಶಾನ್ಯ ಭಾರದಲ್ಲೂ ಇವೆ.
ಶಕ್ತಿ ಪೀಠಗಳ ಭೇಟಿಯಿಂದ ಆಂತರಿಕ ಬದಲಾವಣೆ ಹೇಗಾಗುತ್ತದೆ ಎಂಬ ಅಂಶವೂ ಇದೆ. ಇದು ಕುಟುಂಬದ ಸದಸ್ಯರ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಸೂಚ್ಯವಾಗಿ ಟ್ರೇಲರ್ನಲ್ಲಿ ಸಹ ನೋಡಬಹುದು.
ದೇವರ ನಂಬದವನೂ ಕೂಡಾ ಈ ಕುಟುಂಬದೊಡನೆ ಪಯಣಿಸುತ್ತಾನೆ. ಇವೆಲ್ಲ ಕುತೂಹಲಕರ ಸಂಗತಿಗಳಿವೆ. ಪ್ರತಿಯೊಬ್ಬರ ಅನುಭವ ವಿಭಿನ್ನ, ಅದರಿಂದ ಕಲಿಯುತ್ತಾರೆ.
ಭಾರತದ ಹನ್ನೊಂದು ರಾಜ್ಯಗಳಲ್ಲಿ ಈ ಹದಿನೆಂಟು ಶಕ್ತಿಪೀಠಗಳು ವ್ಯಾಪಿಸಿಕೊಂಡಿವೆ. ಪ್ರತಿ ಕ್ಷೇತ್ರಕ್ಕೂ ಹೋದಾಗ ಆದಿ ಶಂಕರಾಚಾರ್ಯರು ಬರೆದ ಒಂಬತ್ತು ಸಾಲಿನ ಸ್ತೋತ್ರ ಪಠಿಸುತ್ತಾರೆ. ಪ್ರತಿ ರಾಜ್ಯದಲ್ಲೂ ಒಂದು ನಾಗರಿಕ ಸಾಮ್ಯತೆ ಇದೆ. ಒಗ್ಗಟ್ಟು ಇದೆ. ಅದು ಕೂಡಾ ಒಂದು ಹೇಳಬೇಕಾದ ಅಂಶ.
ಈ ಚಿತ್ರ ಹಣ ಮಾಡುವ ,ಲಾಭ ಮಾಡುವ ಉದ್ದೇಶದಿಂದ ಮಾಡಿಲ್ಲ. ಚಂದಾದಾರಗದೇ ಉಚಿತವಾಗಿ ನೋಡಬಹುದು. ನಮ್ಮ ಆಧ್ಯಾತ್ಮಿಕತೆ , ಸಾಂಸ್ಕೃತಿಕತೆ ಜನ ಜನರನ್ನು ತಲುಪಲಿ ಎಂಬ ಆಶಯವಿದೆ. ಕೋವಿಡ್ ಕಾಲದಿಂದಲೇ ಕಥಾಹಂದರ ಹೆಣೆದು, ಹದಿನೆಂಟೂ ಕ್ಷೇತ್ರಗಳಿಗೆ ಪಾತ್ರಗಳು ಸಂದರ್ಶನ ನೀಡಿ ತಯಾರಿಸಿದ ಚಿತ್ರ ಇದು ಭಾರತೀಯರೆಲ್ಲರನ್ನು ತಲುಪಬೇಕು. ಆಸ್ತಿಕರು ದೇಗುಲಗಳಿಗೆ ಭೇಟಿ ಕೂಡಾ ನೀಡಲಿ. ವೈವಿಧ್ಯತೆಯಲ್ಲಿ ಏಕತೆ ಇದೆ ಎಂಬುದನ್ನು ದೇಶ ಅರಿಯಲಿ ಎಂಬುದು ಉದ್ದೇಶ.