• Slide
    Slide
    Slide
    previous arrow
    next arrow
  • ಸರ್ವಂ ಶಕ್ತಿಮಯಂ -ಟ್ರೇಲರ್

    300x250 AD

    eUK ವಿಶೇಷ: ಜಿ ಫೈವ್ ನಲ್ಲಿ ಜೂನ್ ಒಂಬತ್ತಕ್ಕೆ ಬಿಡುಗಡೆ ಆಗಲಿರುವ ಚಿತ್ರ. ಸರ್ವ ಶಕ್ತಿಮಯಂ. ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಟ್ರೇಲರ್‌ನ ಆರಂಭದಲ್ಲಿ ಒಬ್ಬ ಲೇಖಕ ಪಾತ್ರ ಬರುತ್ತದೆ. ದೇವರು ವರವಲ್ಲ ಶಾಪ ಎನ್ನುತ್ತಾನೆ. ಆ ಪಾತ್ರದ ಹೆಸರು ರಂಜಿತ್ ಸೋನಿ ಅದರಲ್ಲಿ ಆತ ಬರೆದ ಪುಸ್ತಕ “ದೇವರು; ಮನುಕುಲದ ನಿಜವಾದ ಭೂತ”. ದೇವರನ್ನು ನಿರಾಕರಿಸುವ ದೂಷಿಸುವ ವ್ಯಕ್ತಿ.

    ಇನ್ನೊಂದು ಕಡೆ, ಮಾಧವ್ ಸೂರಿ ಎಂಬ ಪಾತ್ರ ಬರುತ್ತದೆ. ಗಂಡ ಹೆಂಡತಿ ಎರಡು ಮಕ್ಕಳ ಸುಂದರ ಸಂಸಾರ .ಖುಷಿ ಖುಷಿಯಾಗಿದ್ದ ಕುಟುಂಬ. ಬರು ಬರುತ್ತ ಪರಿಸ್ಥಿತಿ ಬದಲಾಗುತ್ತದೆ. ಒಂದು ಕಡೆ ವ್ಯವಹಾರ ನಷ್ಟಾಗಿ ಜೀವನದಲ್ಲಿ ಸೋತು ಸುಣ್ಣವಾದ ಆತ ‘ ಗೆಲುವು ಮನಸಲ್ಲಲ್ಲ, ಕನಸಲ್ಲಿಯೂ ಇಲ್ಲ’ ಎಂದುಕೊಂಡುಬಿಡುತ್ತಾನೆ. ಮನೆಯಲ್ಲೂ ಗಂಡ ಹೆಂಡತಿ ನಡುವೆ ವೈಮನಸ್ಸು. ಅಶಾಂತಿ. ಮಕ್ಕಳೂ ಸಹ ಅಪ್ಪನ ವ್ಯವಹಾರ ಬಿದ್ದುಹೋಗಿದೆ ಎಂದಾಗ ತೀರ ನೊಂದುಕೊಳ್ಳುತ್ತಾರೆ. ಆಗ ಗೆಲ್ಲಲು ಒಂದು ಸಲಹೆ ಕೇಳುತ್ತಾನೆ. ಐವತ್ತು ಲಕ್ಷದ ಸಹಾಯ ಕೇಳುತ್ತಾನೆ ಆಗ ಸ್ನೇಹಿತ ಹದಿನೆಂಟು ಪುಣ್ಯಕ್ಷೇತ್ರಗಳ ಸಂದರ್ಶನ ಮಾಡಿದರೆ ಎಲ್ಲ ಸಂಕಟಗಳಿಂದ ಪರಿಹಾರ ಎಂದು ಸಲಹೆ ಕೊಡುತ್ತಾನೆ.

    ಹೀಗೆ ಹದಿನೆಂಟು ಕ್ಷೇತ್ರ ಸಂದರ್ಶನ ಫಲ ನೀಡುವುದಾ? ಅಥವಾ ಲೇಖಕ ಹೇಳಿದಂತೆ ದೇವರ ದರ್ಶನ ದುಃಖದಾಯಕ ಆಗುವುದಾ ? ದೇವ ದೂಷಕನ ಗೆಲುವಾಗುತ್ತದೆಯಾ? ದೇವರ ನಂಬಿದವ ಏಳಿಗೆ ಹೊಂದುತ್ತಾನ? ನಾಸ್ತಿಕ ಆಸ್ತಿಕತೆ ಸಂಘರ್ಷದ ಕಥನ ಇದು. ಏನೇನಾಗುತ್ತದೆ ಎಂಬುದನ್ನು ಚಿತ್ರ ನೋಡಿ ತಿಳಿಯಬೇಕು. ಇದು ಮನೋಜ್ಞ ನಟನೆಯ ಕುತೂಹಲಕಾರಿ ಕಥೆ.

    ಇದೇ ಸರ್ವಂ ಶಕ್ತಿಮಯಂ.

    300x250 AD

    Link:https://youtu.be/QDnd6L3XlNA

    ಕೃಪೆ: https://youtube.com/@ZEE5

    Share This
    300x250 AD
    300x250 AD
    300x250 AD
    Leaderboard Ad
    Back to top