• Slide
    Slide
    Slide
    previous arrow
    next arrow
  • ‘ಕನ್ನಡ ಕಾಯಕ ದತ್ತಿ ಪ್ರಶಸ್ತಿ’ಗೆ ಶಿವಾನಂದ ಕಳವೆ ಆಯ್ಕೆ

    300x250 AD

    ಶಿರಸಿ: ಕನ್ನಡ ಸಾಹಿತ್ಯ ಪರಿಷತ್‌ ಬೆಂಗಳೂರು ವತಿಯಿಂದ 2022ನೇ ಸಾಲಿನ “ಕನ್ನಡ ಕಾಯಕ ದತ್ತಿ ಪ್ರಶಸ್ತಿ’ ಪ್ರಕಟಗೊಂಡಿದ್ದು, ಇಲ್ಲಿನ ಶಿವಾನಂದ ಕಳವೆ ಪ್ರಶಸ್ತಿಗೆ ಭಾಜನರಾಗಿದ್ದು, ಪ್ರಶಸ್ತಿಯು ತಲಾ 10 ಸಾವಿರ ರೂ. ನಗದು ಒಳಗೊಂಡಿದೆ.

    ಕಸಾಪ ಮಾಜಿ ಗೌರವ ಕಾರ್ಯದರ್ಶಿ ವ.ಚ. ಚನ್ನೇಗೌಡ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿದ್ದಾಗ ತಮಗೆ ನೀಡಲಾಗುತ್ತಿದ್ದ ಮಾಸಿಕ ಗೌರವ ಸಂಭಾವನೆಯನ್ನು ದತ್ತಿ ರೂಪದಲ್ಲಿ ಇರಿಸಿದ್ದು, ಅವರ ಆಶಯದಂತೆ ಕನ್ನಡ ಪರ ಹೋರಾಟ ಮಾಡುತ್ತ ನಾಡು ನುಡಿಗೆ ಸೇವೆ ಸಲ್ಲಿಸಿದವರು, ನೆಲ, ಜಲ ಕುರಿತು ಕೃತಿ ರಚಿಸಿದವರು ಹಾಗೂ ಕನ್ನಡ ರಂಗಭೂಮಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಮೂವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಶಿವಾನಂದ ಕಳವೆ ಜೊತೆ ಅಥಣಿಯ ಶ್ರೀ ಪ್ರಭು ಚೆನ್ನಬಸವ ಸ್ವಾಮೀಜಿ ಹಾಗೂ ಕೊಪ್ಪಳದ ಹೆಲನ್ ಮೈಸೂರು ಇವರಿಗೂ ಪ್ರಶಸ್ತಿ ಲಭಿಸಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top