ಸಿದ್ದಾಪುರ: ತಾಲೂಕಿನ ನಾಣಿಕಟ್ಟಾದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸಭಾಭವನದಲ್ಲಿ ವೇ.ಮೂ. ವಿನಾಯಕ ಸುಬ್ರಾಯ ಭಟ್ಟ ಮತ್ತೀಹಳ್ಳಿ ದಿವ್ಯ ಉಪಸ್ಥಿತಿಯಲ್ಲಿ , ಸೂರನ್ ಕುಟುಂಬದವರ ಸಂಪೂರ್ಣ ಸಹಕಾರದೊಂದಿಗೆ, ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗ ನಾಣಿಕಟ್ಟಾ(ಶ್ರೀ ನಟರಾಜ ಎಮ್ ಹೆಗಡೆ & ಮಿತ್ರ ಬಳಗ)ದವರ ಸಮರ್ಥ ಸಂಯೋಜನೆಯಲ್ಲಿ “ಕೃಷ್ಣ ಯಜುರ್ವೇದ ಪಾರಾಯಣ, ಶ್ರೀಮದ್ ಭಾಗವತ ಸಪ್ತಾಹ ಮತ್ತು ಪ್ರವಚನ”ದ ಪ್ರಯುಕ್ತ ನಡೆದ ಯಕ್ಷಗಾನ ಹಿಮ್ಮೇಳ ವೈಭವ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.
ಸಭಾ ಕಾರ್ಯಕ್ರಮದಲ್ಲಿ ಶ್ರೀ ಸ್ವರ್ಣವಲ್ಲೀ ಮಠದ ಆಡಳಿತ ಮಂಡಳಿಯ ಸದಸ್ಯ ಮತ್ತು ಸಮಾಜ ಸೇವಕ ಎಮ್.ಆರ್. ಹೆಗಡೆ ಬಾಳೇಜಡ್ಡಿ ಮತ್ತೀಹಳ್ಳಿ, ತ್ಯಾಗಲಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಬಿ. ಹೆಗಡೆ ಮತ್ತೀಹಳ್ಳಿ, ಸೂರನ್ ಕುಟುಂಬದ ಲೋಕೇಶ ಬಿ. ಹೆಗಡೆ ಸೂರನ್, ಮಾಬ್ಲೇಶ್ವರ ಗಣೇಶ ಹೆಗಡೆ ಸೂರನ್, ಜಿ.ವಿ. ಹೆಗಡೆ ಸೂರನ್, ನಾಗಾನಂದ ಆರ್. ಹೆಗಡೆ, ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗದ ಹಿರಿಯ ಎಮ್. ಎಮ್. ಹೆಗಡೆ ಹಂಗಾರಖಂಡ ಸೂರನ್, ಮತ್ತು ಪ್ರಭಾಕರ ಗ. ಹೆಗಡೆ ಸೂರನ್, ರವೀಂದ್ರ ಗಂ. ಹೆಗಡೆ ಸೂರನ್, ಉಮೇಶ ಗ. ಹೆಗಡೆ ಸೂರನ್, ವಿನಾಯಕ ನಾ. ಹೆಗಡೆ ಸೂರನ್ ಹಾಗೂ ಕುಟುಂಬದವರು, & ಸಂಘಟಕರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಸಹಸ್ರಾರು ಕಲಾಭಿಮಾನಿಗಳ ಸಮ್ಮುಖದಲ್ಲಿ ಯಕ್ಷರಂಗದ ಸಾಧಕ ಸುನೀಲ್ ಬಂಡಾರಿ ಕಡತೋಕ ಅವರಿಗೆ ಗೌರವ ಸನ್ಮಾನವನ್ನು ನೆರವೇರಿಸಲಾಯಿತು. ನಂತರ ದಿಗ್ಗಜ ಕಲಾವಿದರಿಂದ ಅದ್ಧೂರಿ “ಯಕ್ಷಗಾನ ಹಿಮ್ಮೇಳ ವೈಭವ ” ಭಕ್ತಿ ರಸಧಾರೆಯ ಅಪೂರ್ವ ಪ್ರಸ್ತುತಿ ನಡೆಯಿತು. ಯಕ್ಷರಂಗ ಕಂಡ ಅಪೂರ್ವ ಜೋಡಿ ರಾಮ-ರಾಘವರ ಜೋಡಿ ಭಾಗವತರಾಗಿ ಪ್ರಸಿದ್ಧ ಭಾಗವತರಾದ ರಾಘವೇಂದ್ರ ಆಚಾರ್ಯ ಜನ್ಸಾಲೆ, ರಾಮಕೃಷ್ಣ ಹೆಗಡೆ ಹಿಲ್ಲೂರು,ಅವರ ದ್ವಂದ್ವ ಗಾನಸುಧೆ, ಜಿಲ್ಲೆ ಕಂಡಂತಹ ಯುವ ಪ್ರತಿಭೆ ಕುಮಾರ ಸೃಜನ್ ಜಿ. ಹೆಗಡೆ ಸಾಗರ, ಹಾಗೇ ಮದ್ದಲೆಯಲ್ಲಿ, ಮದ್ದಲೆ ಹುಲಿ ಸುನೀಲ್ ಬಂಡಾರಿ ಕಡತೋಕ ಮತ್ತು ಚಂಡೆಯ ಗಂಡುಗಲಿ ಮತ್ತು ಹಿರಿಯ ಚಂಡೆ ಮಾಂತ್ರಿಕ ಶಿವಾನಂದ ಕೋಟ ಚಂಡೆಯ ಝೇಂಕಾರ ನಡೆಸಿದರು. ಯಕ್ಷಗಾನ ಹಿಮ್ಮೇಳ ಕಲಾವಿದರಿಂದ ಜೋಡಿ ಪದ್ಯವಾದ ರಾಮಾಯಣದ ಪಂಚವಟಿ ಪ್ರಸಂಗದ ದ್ವಂದ್ವ ಪದ್ಯ ಸುಂದರವಾಗಿ ಮೂಡಿಬಂದಿದ್ದು, ಸೇರಿದ ಕಲಾ ಪ್ರೇಮಿಗಳಿಗೆ ಮುದನೀಡಿ, ಯಶಸ್ವಿ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಜನ್ಸಾಲೆ-ಹಿಲ್ಲೂರು-ಸೃಜನ ಸಾಗರ ಭಾಗವತರ ತ್ರಿಂದ್ವ ಹಾಡಾದ “ಭೀಷ್ಮ ಪರ್ವ” ಪ್ರಸಂಗದ “ಸ್ವಾಮಿ ಪರಾಕು” ಹಾಡು ಸೇರಿದ ಸಹಸ್ರಾರು ಕಲಾ ಪ್ರೇಮಿಗಳ ಮನತಣಿಸಿತು.
ಸಭಾ ಕಾರ್ಯಕ್ರಮದ ಸ್ವಾಗತ ಗೀತೆಯನ್ನು ಕುಮಾರಿ ಕಾವ್ಯಾ ಉಮೇಶ ಹೆಗಡೆ ಸೂರನ್ ಹಾಡಿದ್ದು,ಪ್ರಸ್ತಾವನಾ ನುಡಿಯನ್ನು ನಟರಾಜ ಎಮ್ ಹೆಗಡೆ ಸೂರನ್, ಸಭೆಯ ಸ್ವಾಗತ ಭಾಷಣ ಮತ್ತು ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಪ್ರಜ್ಞಾ ಪ್ರಸನ್ನ ಹೆಗಡೆ ನಡೆಸಿದರೆ, ವಂದನಾರ್ಪಣೆಯನ್ನು ಅಭಿಷೇಕ ರವೀಂದ್ರ ಹೆಗಡೆ ಸೂರನ್, ಯಕ್ಷ ಗೌರವ ಸನ್ಮಾನ ಪತ್ರ ವಾಚನವನ್ನು ವೆಂಕಟೇಶ ಎಸ್. ಹೆಗಡೆ ಸೂರನ್ ಸುಂದರವಾಗಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸೂರನ್ ಕುಟುಂಬದ ಎಲ್ಲಾ ಸದಸ್ಯರು, ಸಂಘಟನೆಯ ಸಮಿತಿಯ ಎಲ್ಲಾ ಸದಸ್ಯರು ಇವರುಗಳೂ ಸಹ ಸಕ್ರಿಯವಾಗಿ ತಮಗೆ ನೀಡಿದ ಕಾರ್ಯನಿರ್ವಹಿಸಿದರು.