ಆಲ್ ಆನ್ಸರ್ಸ್ (ಪ್ರತಿಕ್ರಿಯೆಗಳು)- ಕೇರಳ ಸ್ಟೋರಿ
ಕೇರಳ ಸ್ಟೋರಿ ಚಿತ್ರದಲ್ಲಿ ನಮ್ಮ ಸನಾತನ ಧರ್ಮ ಕುರಿತು ಪ್ರಶ್ನೆ ಕೇಳಿದ್ದಾರೆ. ಇಂದು ಅದಕ್ಕೆ ಉತ್ತರ ಇಲ್ಲಿದೆ.
ಪುನರ್ಜನ್ಮ:
ಪುನರ್ಜನ್ಮವನ್ನು ಬಹಳಷ್ಟು ಜನ ಒಪ್ಪುವುದಿಲ್ಲ. ಆದರೆ ಬಾರ್ಬರೋ, ಎನ್ನಿ ಫ್ರಾಂಕ್ ಶಕುಂತಲಾ ದೇವಿ, ಇವೆಲ್ಲ ಉದಾಹರಣೆ.
ಬಹುದೇವತಾ ಕಲ್ಪನೆ: ಸ್ಪೆಶಲೈಸೇಶನ್ ಅಥವಾ ಡಿವಿಶನ್ ಆಫ್ ಲೇಬರ್ ಒಂದು ನಿರ್ವಹಣೆ ಸಿದ್ಧಾಂತ ಎಂಬುದನ್ನು ಜನ ಒಪ್ಪುತ್ತಾರೆ. ಆದರೆ ಬಹುದೇವತಾ ವಾದವನ್ನು ಲೇವಡಿ ಮಾಡುತ್ತಾರೆ. ಪ್ರತಿಯೊಂದು ಸಮಸ್ಯೆ ಸಂಗತಿಗೆ ಸಂಬಂಧಿಸಿದಂತೆ ದೇವರ ಅಂಶ ಆಧರಿಸಿ ಬಹುದೇವತಾ ಕಲ್ಪನೆ ಇದೆ. ಸಮಸ್ಯೆಯೊಂದರ ಶೀಘ್ರ ಪರಿಹಾರಕ್ಕೆ ಇದು ಸಹಾಯಕ. ಆಧುನಿಕತೆಗೆ, ವಿಶೇಷತೆಗೆ ಮಣೆ.
ಕೃಷ್ಣನ ರಾಸಲೀಲೆ: ಕೃಷ್ಣನ ರಾಸಲೀಲೆ ಹೆಣ್ಣುಗಳ ಮೇಲಿನ ಮೋಹ ಎಂದು ಅಪಪ್ರಚಾರ ಮಾಡುತ್ತಾರಲ್ಲ. ಅದರ ಅರ್ಥ ಹಾಗಲ್ಲ. ರಾಸಲೀಲೆ ಎಂದರೆ ಜೀವನದ ಸಂಭ್ರಮವನ್ಹು ಪ್ರತಿನಿಧಿಸುತ್ತದೆ ಹೊರತು ಲೈಂಗಿಕತೆಯ ಉದ್ದೀಪನೆಯಲ್ಲ, ನಶೆಯನ್ನಲ್ಲ. ಮುಕ್ತವಾಗಿ ಸಂಭ್ರಮ, ಸಂತೋಷ ಪಡುವುದು ಜೀವನದ ಆಯಾಮ.
ಕೃಷ್ಣನ ಹದಿನಾರು ಸಾವಿರ ಹೆಂಡತಿಯರ ಕತೆ: ನರಕಾಸುರನ ವಧೆ ಮಾಡಿದ ಕೃಷ್ಣ ಹದಿನಾರು ಸಾವಿರ ಹೆಂಗಸರನ್ಹು ಸೆರೆಯಿಂದ ಬಿಡಿಸಿದ. ಅವರು ಅನಾಥರಾದರು. ಹಾಗಾಗಿ ಅವರಿಗೆ ಪತ್ನಿಯರ ಸಮಾನ ಸ್ಥಾನ ಕೊಟ್ಟ. ಅವರೂ ಸಹ ಕೃಷ್ಣನೇ ಪತಿ ಎಂದು ಭಾವಿಸಿದರು. ಹೊರತು ಅದು ತೆವಲಲ್ಲ.
ಸತಿದಹನ : ಶಿವ ಸತಿ ಅಗ್ನಿಗೆ ಹಾರಿದ್ದನ್ನು ಕಂಡು ದುಃಖಿತನಾದರೆ ಅವನೆಂತ ದೇವರು ಎಂದು ಪ್ರಶ್ನಿಸುತ್ತಾರೆ. ದೇವರು ಸರ್ವವನ್ನೂ ಒಳಗೊಂಡವನು. ಆತ ಗುಣನೂ ಹೌದು ನಿರ್ಗುಣನೂ ಹೌದು. ಸಾಕಾರನೂ ಹೌದು ನಿರಾಕಾರವೂ ಇದೆ. ಹೀಗಿದ್ದಾಗ ದೇವರೂ ಕೂಡ ಸ್ಪಂದಿಸುತ್ತಾನೆ. ಹಾಗೇ ಶಿವನೂ ಕೂಡ ತನ್ನ ಸತಿ ಅಗ್ನಿದಗ್ಧವಾದಾಗ ವಿಲಪಿಸಿದ. ಹೃದಯಶಿವ ಭಕ್ತರಿಗೂ ಮಿಡಿಯುತ್ತಾನೆ. ಆತ ವಿಶ್ವಕುಟುಂಬಿ. ನೃತ್ಯ, ಸಂಗೀತ ಎಲ್ಲಾ ಶಿವನ ಜೀವನದ ಭಾಗ. ಯಾರಿಗೂ ಮಿಡಿಯದ್ದುಹೇಗೆ ದೇವರಾದೀತು. ಅಲ್ಲವೇ?