eUK ವಿಶೇಷ: ಮೇ 28,2023. ಭಾರತದ ಇತಿಹಾಸದಲ್ಲಿ ಒಂದು ಮಹತ್ವದ ದಿನ. ಕಾರಣ ಭಾರತದ ನೂತನ ಸಂಸತ್ತು ಲೋಕಾರ್ಪಣೆ ಯಾದ ದಿವಸ.ಆ ದಿನ ಸಾವರ್ಕರ್ ರ ಜನ್ಮ ದಿನ ಕೂಡಾ.
ಪ್ರಧಾನಿ ಮೋದಿ ಅವರು ಉದ್ಘಾಟಿಸಿ ಜನತೆಗೆ ಸಮರ್ಪಿಸಿದರು. ಆದರೆ ಕೆಲವು ಜನ ಇದರ ಬಗ್ಗೆ ಅಪಸ್ವರ ಎತ್ತಿದರೂ ಮೋದಿ ಅವರು ತಮ್ಮ ದಾರಿಯಿಂದ ವಿಚಲಿತರಾಗಲಿಲ್ಲ.ಈ ಹಿಂದೆ ಕೂಡಾ ಸಂಸತ್ತನ್ನು ಅಂದಿನ ಪ್ರಧಾನಿ ನೆಹರೂ ಅವರು ಉದ್ಘಾಟಿಸಿದ್ದರು. ರಾಷ್ಟ್ರಪತಿಗಳ ಹೆಸರಿನಲ್ಲೇ ಎಲ್ಲವೂ ನಡೆಯುತ್ತದೆ ಎನ್ನುವುದು ನಿರ್ವಿವಾದ. ರಾಷ್ಟ್ರಪತಿ ಜೊತೆ ಸೇರಿಯೆ ಎಲ್ಲಾ ಕೆಲಸ ನೆರವೇರಿಸಲಿಕ್ಕೂ ಸಮಯಾವಕಾಶ ಆಗುವುದಿಲ್ಲ.
ಭಾರತ ಸ್ವತಂತ್ರವಾದ ಬಳಿಕ ಭಾರತ ನೈಜ ರೂಪ ಮುನ್ನೆಲೆಗೆ ಬರಲಿಲ್ಲ. ಭಾರತದ ಸಭ್ಯತೆ, ಸಂಸ್ಕೃತಿ ಹಿಂದೆಯೇ ಉಳಿದು ಬಿಟ್ಟಿತು. ಹಿಂದುತ್ವ ವಿರೋಧಿಸುವ , ಹಿಂದುತ್ವ ಕಂಡರಾಗದ ಕಮ್ಯುನಿಸ್ಟ್ ಇಸ್ಲಾಮ್ ಮಿಷನರಿಗಳ ಪ್ರಭಾವದಿಂದ ಭಾರತದ ಸಂಸ್ಕೃತಿ ಮರೆಯಾಯಿತು.
ಭಾರತ ತನ್ನ ಪ್ರಾಚೀನ ಪರಂಪರೆಯೊಂದಿಗೆ ನಡೆಯುವುದನ್ನು ಇವರೆಲ್ಲ ಸುತರಾಂ ಸಹಿಸಲೊಲ್ಲರು. ಭಾರತದ ಸಂಸತ್ತನ್ನು ರಷ್ಯಾದ ರೀತಿ ನಿರ್ಮಿಸಬೇಕೆ, ಪಾಕಿಸ್ತಾನದ ತರಹ ಮಾಡಬೇಕೆ, ಹಿಟ್ಲರ್ ಬುಂಡಸ್ಟಾಕ್ಆಗಬೇಕೆ? ಭಾರತದ ಸಂಸತ್ತು ಭಾರತದ ಪ್ರತಿನಿಧಿ.
ಮೇ.27 ನೆಹರು ಪುಣ್ಯತಿಥಿ. ಮೇ.28 ಸಾವರ್ಕರ್ ಜನ್ಮದಿನ. ಇದು ನೆಹರುಯಿಸಂನ ಅಸ್ತ ಮತ್ತು ಸಾವರ್ಕರ್ ಸಿದ್ಧಾಂತ ಉದಯದ ಸಂಕೇತ. ಸಾವರ್ಕರ್ ಒಬ್ಬ ದೇಶಭಕ್ತ . ಆಧುನಿಕ ಭಾರತದ ಪ್ರತಿನಿಧಿ. ತ್ಯಾಗದ ಸಂಕೇತ. ಶೌರ್ಯದ ಪ್ರತೀಕ. ರಾಷ್ಟ್ರಪ್ರೇಮದ ಸಂಕೇತ. ವೈಜ್ಞಾನಿಕ ಮನೋಭಾವದ ಸಂಕೇತ. ಸಂಸ್ಕೃತಿಯ ಸಂಕೇತ. ಸೈನ್ಯದ ಸಂಕೇತ. ಹಿಂದುತ್ವದ ಸಂಕೇತ. ದಲಿತರ ಸಂಕೇತ ಕೂಡ- ಪತಿತ ಪಾವನ ಮಂದಿರ ರತ್ನಗಿರಿಯಲ್ಲಿ ಸಾವರ್ಕರರೇ ನಿರ್ಮಿಸಿದ್ದು. ಇಂತಹ ಸಾವರ್ಕರ್ ಜನ್ಮದಿನವೇ ಸಂಸತ್ ಉದ್ಘಾಟನೆ ಅವರಿಗೆ ಒಂದು ಕೊಡುಗೆ.
ದೇಶವನ್ನು ಒಡೆವ ಕಮ್ಯುನಿಷ್ಟರು ಇದನ್ನೆಲ್ಲ ವಿರೋಧಿಸುತ್ತಾರೆ. ಬಿಜೆಪಿ ಕರ್ನಾಟಕ ಚುನಾವಣೆ ಸೋತ ಬಳಿಕ ರಿಪಬ್ಲಿಕ್ ಆಫ್ ಸೌತ್ ಇಂಡಿಯಾ ಎಂದು ಕರೆಯುತ್ತಾರೆ.( ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದ ಕಥೆ ಬೇರೆಯೇ ಇದೆ. ಜನತಾದಳದ ಓಟು ,ಶಾಂತಿಪ್ರಿಯರ ಓಟು ಸಂಪೂರ್ಣ ಕಾಂಗ್ರೆಸ್ನೆಡೆಗೆ ವಾಲಿದ್ದು ಗೆಲುವಿಗೆ ಕಾರಣ. ಗೊತ್ತಿರಲಿ. ) ಆದರೆ ದೇಶ ಒಡೆವಂಥ ಕಮ್ಯುನಿಷ್ಟ್ ಹೇಳಿಕೆ ವಿರುದ್ದ ಎಫ್ ಐಆರ್ ಹಾಕಬೇಕು. ಇದು ದೇಶ ಒಡೆವ ಕೆಲಸ.
ಸಂಸತ್ ಉದ್ಘಾಟನೆ ಸಂದರ್ಭದಲ್ಲಿ ಸೆಂಗೋಲ್ ಮುನ್ನೆಲೆಗೆ ಬಂತು. ಭಾರತದ ಸಂಸ್ಕೃತಿ ಪ್ರತೀಕವಾಗಿ ಚೋಳ ರಾಜರು ಬಳಸಿದ ಪ್ರತೀಕವನ್ನು ಬಳಸಲಾಯಿತು. ಅದರ ವಿಧಿ ವಿಧಾನ ಆಚರಿಸಿ ಸ್ಥಾಪಿಸಲಾಯಿತು. ಅದರಲ್ಲಿ ನಂದಿ ಇದೆ ನಂದಿ ಬಲ ಶೌರ್ಯದ ಸಂಕೇತ, ದುರ್ಬಲತೆಯ ಪ್ರತೀಕವಲ್ಲ. ದೇಶವೊಂದಕ್ಕೆ ಲಾಂಛನ ಬೇಕು. ಅದು ದೇಶೀ ಆಗಿರಬೇಕು.
ಈ ಹಿಂದೆ ಮೌಂಟ್ ಬ್ಯಾಟನ್ ಭಾರತ ಬಿಟ್ಟು ಹೋದಾಗ ಆಂಗ್ಲೀಯತೆ ತೊಲಗಲಿಲ್ಲ, ಅದೇ ಪದ್ಧತಿ ಪರಂಪರೆ ಎಂದೆ ಭಾವಿಸಲಾಗಿದ್ದು ದುರಂತ. ಆಳುಗರು ಭಾರತೀಯರ ಒಳಗಿನ ಬ್ರಿಟಿಷರೇ ಆಗಿದ್ದರು. ಇವರಿಗೆ ಭಾರತೀಯತೆ ಅರಗುವುದಿಲ್ಲ. ಏಕೆಂದರೆ ಚೋಳ ಸಾಮ್ರಾಜ್ಯದ ಅತ್ಯಂತ ದೀರ್ಘಕಾಲ ಆಳಿದ ಮನೆತನ. ಭಾರತದಾಚೆಗೂ ಸಾಮ್ರಾಜ್ಯ ವಿಸ್ತರಿಸಿತ್ತು ಈ ಬಲಿಷ್ಠ ಸಾಮ್ರಾಜ್ಯ.
ಕಮಲ್ ಹಾಸನ್ ಮಾತು ನೆನಪಿದೆಯೇ? ವಿಪರ್ಯಾಸ ಎಂದರೆ ಈ ನಟ ಚೋಳರು ಹಿಂದುಗಳೇ ಅಲ್ಲ ಎನ್ನುತ್ತಾರೆ.
ಹೇಗೆ ಮಹಾಭಾರತದಲ್ಲಿ ಕೃಷ್ಣನ ವಿರಾಡ್ರೂಪ ದರ್ಶನವನ್ನು ಎಲ್ಲರೂ ನೋಡಲಾಗಲಿಲ್ಲವೋ ಹಾಗೇ ಸಂಸತ್ ಉದ್ಘಾಟನೆ ಕೂಡ ಎಲ್ಲರಿಗೂ ನೋಡಲು ಸಹಿಸಲು ಆಗಲಿಲ್ಲ, ಕಣ್ಣು ಕುಕ್ಕಿತು.
ಈ ವಿರೋಧಿ ಶಕ್ತಿಗಳು ಹಿಂದುಗಳು ಜಾಗೃತವಾದರೆ ಸುಮ್ಮನಾಗುತ್ತಾರೆ. ರಾಷ್ಟ್ರವಿರೋಧಿಗಳೂ ಸಹ ಹಿಂದು ಜಾಗೃತ ಆಗುವುದು ಕಂಡು ಕಂಗಾಲಾಗಿದ್ದಾರೆ. ರಾಷ್ಟ್ರವಾದಿಗಳು ಶಸ್ತ್ರ ಹಿಡಿದು ಓಡಾಡುವುದಿಲ್ಲ. ಅನ್ಯದೇಶದಲ್ಲಿನ ಹಿಂದುಗಳ ಮೇಲೆ ದೌರ್ಜನ್ಯದ ಆದರೂ ಸಹ ಅವರಿಗೆ ಸಹಾಯ ಮಾಡಲು ನಕಾರ. ಕೋಟಿಗಟ್ಟಲೆ ಹಿಂದುಗಳು ಬಾಂಗ್ಲಾದೇಶ, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿ ತೊಂದರೆಯಲ್ಲಿದ್ದಾರೆ. ಯುರೋಪ್ನಂತೇ ಜನಸಂಖ್ಯೆ ಸಮೀಕರಣ ಬದಲಾದರೆ ಕಥೆ ಬೇರೆಯಾಗುತ್ತದೆಂಬುದು ತಿಳಿದಿರಬೇಕಾದ ವಿಚಾರ. ಇದನ್ನು ಮುಕ್ತವಾಗಿ ಘಂಟಾಘೋಷವಾಗಿ ಹೇಳಬೇಕು.
ಆದರೆ ಇದನ್ನು ಹಿಂದುಗಳೇ ವಿರೋಧಿಸುತ್ತಾರೆ. ಅವರೆಲ್ಲ ನೆಹರು ತರಹ. ಹೊರಗಡೆಗೆ ಮಾತ್ರ ಹಿಂದು. ಮನಸಿನಿಂದ ಕಮ್ಯುನಿಸ್ಟ್, ಹಿಂದು ವಿರೋಧ. ಮೋದಿ ಎದುರು ಇವರ ಬಲ ಕ್ಷೀಣಿಸುತ್ತಿದೆ. ಮುಂದಿನ ಚುನಾವಣೆಗೆ ತಯಾರಿಯಾಗಿ ಈ ಹಿಂದು ವಿರೋಧಿಗಳು ತಂತ್ರ ಹೆಣೆಯುತ್ತಿದ್ದಾರೆ. ಸಮಾಜ ಇದನ್ನು ಅರಿಯಬೇಕು. ಇದೊಂದು ನಾಗರಿಕ ಯುದ್ಧ ಎಂದು ತಿಳಿದು ಹೋರಾಡದಿದ್ದರೆ ರಕ್ಷಿಸಿಕೊಳ್ಳದಿದ್ದರೆ, ಹಕ್ಕು ಕಳಕೊಂಡಂತೆ. ಶಿವಾಜಿ, ರಾಣಾಪ್ರತಾಪ್, ಸಾವರ್ಕರ್ ತ್ಯಾಗಗಳು ವ್ಯರ್ಥವಾದಂತೆ.
ನಾಗರಿಕ ಸಮಾಜ ಹೇಡಿಗಳಂತಾಗಿದ್ದಾರೆ. ಮೊಬೈಲ್ ನಲ್ಲಿ ಮುಳುಗಿದ್ದಾರೆ. ಆದರೂ ಸಹ ಒಂದಷ್ಟು ಜನ ಜಾಗೃತ ಆಗುತ್ತಿದ್ದಾರೆ.
ಭಾರತದ ಸನ್ನಿವೇಶ ಕೂಡ ಜಾಗೃತ ಆಗುತ್ತಿದೆ. ಇದಕ್ಕೆ ಸಂಸತ್ ಒಂದು ನಿದರ್ಶನ. ಹಿಂದುಗಳಿಗೆ ಮೋದಿ ಏನು ಮಾಡುತ್ತಿದ್ದಾರೆ ಎಂಬುದಕ್ಕೆ ಉತ್ತರ.
ಎಲ್ಲ ಕ್ಷೇತ್ರಗಳಲ್ಲೂ ಭಾರತೀಯ ಜ್ಞಾನ ವ್ಯವಸ್ಥೆ ಪ್ರಸಾರವಾಗಬೇಕು. ಆಗುತ್ತಿದೆ. ಇದನ್ನು ಜನರು ನೋಡಬೇಕು. ವೈದ್ಯಕೀಯ, ವಿಜ್ಞಾನ, ಪರಿಸರ ಈ ಎಲ್ಲ ಕ್ಷೇತ್ರಗಳಲ್ಲಿ ಭಾರತೀಯರ ಕೊಡುಗೆಯ ನ್ನು ನೋಡಿದರೆ ಕಮ್ಯುನಿಸ್ಟರು ಮೂರ್ಛೆ ಹೋಗುತ್ತಾರೆ.