• Slide
  Slide
  Slide
  previous arrow
  next arrow
 • ‘ವನರಾಗ ಶರ್ಮಾ ಪುಸ್ತಕ ಪ್ರಶಸ್ತಿ’ ಫಲಿತಾಂಶ ಪ್ರಕಟ

  300x250 AD

  ಶಿರಸಿ: ಸ್ವರ್ಣಿಮ ಭಾರತಿ ಸಾಹಿತ್ಯ ಸಮ್ಮಾನ್ ವತಿಯಿಂದ ಆಯೋಜಿಸಿದ್ದ ‘ವನರಾಗ ಶರ್ಮಾ ಪುಸ್ತಕ ಪ್ರಶಸ್ತಿ’ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.

  ವನರಾಗ ಶರ್ಮಾರವರ ಹೆಸರಿನಲ್ಲಿ 2021 ಮತ್ತು 2022ನೇ ಸಾಲಿನಲ್ಲಿ ಪ್ರಕಟವಾದ ಕಥಾ ಸಂಕಲನ ಮತ್ತು ಕಾವ್ಯ ಸಂಕಲನಗಳನ್ನು ಪ್ರಶಸ್ತಿಗಾಗಿ ಆಹ್ವಾನಿಸಿದ್ದು, 2021ನೇ ಸಾಲಿನಲ್ಲಿ ಕತೆಗಾರ ಟಿ.ಎಂ.ರಮೇಶರ ‘ದಶಕದ ಕಥೆಗಳು’ ಕೃತಿಗೆ ಪ್ರಥಮ ಬಹುಮಾನ ಲಭಿಸಿದ್ದು, ಎರಡನೇ ಬಹುಮಾನಕ್ಕೆ ಕವಯತ್ರಿ ಶೋಭಾ ನಾಯಕರ ‘ಶಯ್ಯಾಗೃಹದ ಸುದ್ದಿಗಳು’ ಕಾವ್ಯ ಸಂಕಲನ ಆಯ್ಕೆಯಾಗಿದೆ. 2022 ನೇ ಸಾಲಿನ ಕೃತಿಗಳಲ್ಲಿ ಕತೆಗಾರ ಗಂಗಾಧರ ಕೊಳಗಿ ಅವರ ‘ಮಿಸ್ಡ್ ಕಾಲ್’ ಕತೆ ಸಂಕನಲನ ಆಯ್ಕೆಯಾಗಿದ್ದರೆ, 2022ನೇ ಸಾಲಿನ ಕಾವ್ಯ ಪ್ರಶಸ್ತಿಗೆ ಡಾಲಿ ವಿಜಯಕುಮಾರ್ ಅವರ “ನೆಲ್ಲು ಎಸೆಯ ಬೇಡ ಮತ್ತೆ” ಕವನ ಸಂಕಲನ ಆಯ್ಕೆಯಾಗಿದೆ. ನಾಲ್ವರು ವಿಜೇತರಿಗೆ ತಲಾ 3000 ರೂ. ನಗದು ಬಹುಮಾನವನ್ನು ಘೋಷಿಸಲಾಗಿದೆ.

  ನಗದು ರಹಿತ ಪ್ರಶಸ್ತಿಗೆ ವಿಜೇತರಾದವರು:
  ಕತೆಗಾರ ಆನಂದಗೋಪಾಲ್ ಅವರ ‘ಆಟಗಾಯಿ’ ಕಥಾಸಂಕಲನಕ್ಕೆ ದ್ವಿತೀಯ, ‘ಭಿನ್ನ ಭಾವಗಳು’ ಕವನಸಂಕಲನಕ್ಕೆ ತೃತೀಯ ಬಹುಮಾನ, ಎ.ಎನ್. ರಮೇಶ್ ಗುಬ್ಬಿ ಅವರ ‘ಮಾತು ಮೌನಗಳ ನಡುವೆ’ ಕವನಸಂಕಲನಕ್ಕೆ ದ್ವಿತೀಯ, ಅಜಿತ್ ಹರೀಶಿ ಅವರ ‘ಕನಸಿನ ದನಿ’ ಕವನಸಂಕಲನಕ್ಕೆ ತೃತೀಯ, ‘ಸೆರಗಿನೊಳಗಿನ ಕೆಂಡ’, `ಗೌರಿ ಚಂದ್ರಕೇಸರಿ’ ಕಥಾಸಂಕಲನಕ್ಕೆ ತೃತೀಯ, ರೇಣುಕಾ ರಮಾನಂದ ಅವರ ‘ಸಂಭಾರ ಬಟ್ಟಲ ಕೊಡಿಸು’ ಕವನಸಂಕಲನಕ್ಕೆ ದ್ವಿತೀಯ, ಮಂಡಲಗಿರಿ ಪ್ರಸನ್ನ ಅವರ ‘ನಿದಿರೆ ಇರದ ಮೌನ’ ತೃತೀಯ ಬಹುಮಾನವನ್ನು ಪಡೆದುಕೊಂಡಿರುತ್ತದೆ.

  300x250 AD

  ಸಾಹಿತಿ ಭಾಗೀರಥಿ ಹೆಗಡೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾಸ್ಕೇರಿ ಎಂ.ಕೆ.ನಾಯಕ ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top