• Slide
    Slide
    Slide
    previous arrow
    next arrow
  • ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ವಿಶ್ವ ತಂಬಾಕು ನಿಷೇಧ ದಿನಾಚರಣೆ

    300x250 AD

    ಶಿರಸಿ : ಇಲ್ಲಿನ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಗುರುವಾರ ವಿಶ್ವ ತಂಬಾಕು ನಿಷೇಧ ದಿನದ ಕಾರ್ಯಕ್ರಮ ನಡೆಯಿತು.
    ಕಾರ್ಯಕ್ರಮದಲ್ಲಿ ನಶಾಮುಕ್ತ ಶಿರಸಿ ಅಭಿಯಾನ ಪ್ರಾರಂಭಿಸಲಾಯಿತು. ಪ್ರತಿಯೊಬ್ಬರೂ ಕನಿಷ್ಟ ಒಂದೊ0ದು ನಶಾಮುಕ್ತತೆಯ ಕುರಿತು ಜಾಗೃತಿ ಕಾರ್ಯಕ್ರಮ ಏರ್ಪಡಿಸುವ ಪ್ರತಿಜ್ಣೆ ಮಾಡಿದರು. ಎಲ್ಲರೂ ಸ್ವತಃ ಮನೋವಿಕಾರದ ನಶೆಯಿಂದ ಮುಕ್ತರಾಗಿ ಸಮಾಜವನ್ನು ವ್ಯಸನಮುಕ್ತ ಮಾಡುವ ಕಾರ್ಯದಲ್ಲಿ ಸಹಭಾಗಿಯಾಗುವ ಪ್ರತಿಜ್ಞೆ ಮಾಡಿ ಪರಸ್ಪರ ಕಂಕಣ ಕಟ್ಟಿ ವಚನಬದ್ದರಾದರು.
    ಕಾರ್ಯಕ್ರಮದಲ್ಲಿ ಐಎಂಎ ಮಹಿಳಾ ಘಟಕದ ಅಧ್ಯಕ್ಷೆ ಡಾ.ಶಾಂತಾ ಭಟ್ಟ, ಕಾರ್ಯದರ್ಶಿ ಡಾ.ಮಮತಾ ಭಟ್ಟ, ಡಾ.ಆಶಾ ಪ್ರಭು, ಇನ್ನರ್‌ವೀಲ್ ಅಧ್ಯಕ್ಷೆ ಮಾಧುರಿ ಶಿವರಾಮ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಅನಿತಾ ಪರ್ವತೀಕರ, ಸಾಂತ್ವನ ಮಹಿಳಾ ವೇದಿಕೆ ಅಧ್ಯಕ್ಷೆ, ಲಯನ್ಸ ರೀಜನಲ್ ಚೇರಮನರಾದ ಜ್ಯೋತಿ ಭಟ್, ಅದರ್ಶ ವನಿತಾ ಸಮಾಜದ ಅಧ್ಯಕ್ಷರಾದ ಸೀತಾ ಕುರ್ಸೆ, ಗೌರಿ ಮಹಿಳಾ ಮಂಡಳದ ಅಧ್ಯಕ್ಷ ರಾದ ನಾಗರತ್ನ ಶೇಟ್ ಆಗಮಿಸಿ, ಪ್ರತಿಯೊಬ್ಬರೂ ಯಾವ ರೀತಿ ಅಭಿಯಾನ ಯಶಸ್ವಿಗೊಳಿಸಬೇಕು ಎನ್ನುವುದರ ಕುರಿತು ತಮ್ಮ ಅಮೂಲ್ಯ ಸಲಹೆ ನೀಡಿದರು.
    ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ.ವೀಣಾಜಿಯವರು ತಂಬಾಕಿನ ದುಷ್ಪರಿಣಾಮ ಅದರಿಂದಾಗುತ್ತಿರುವ ಹಾನಿಯನ್ನು ಅಂಕಿ ಅಂಶಗಳ ಸಮೇತ ವಿವರಿಸಿದರು. ಮನೋಬಲವನ್ನು ಬೆಳೆಸಿ ಜಾಗೃತಿ ಮೂಡಿಸಿ ನಶಾಮುಕ್ತ ಸಮಾಜ ನಿರ್ಮಾಣ ಮಾಡುವ ಕುರಿತು ಸಂಸ್ಥೆಯ ದಶಕಗಳ ಸಾಧನೆಯನ್ನು ತಿಳಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top