Slide
Slide
Slide
previous arrow
next arrow

ಲಯನ್ಸ್ ಶಾಲೆಯಲ್ಲಿ ಅದ್ದೂರಿಯಾಗಿ ನಡೆದ ಶಾಲಾ ಪ್ರಾರಂಭೋತ್ಸವ

300x250 AD

ಶಿರಸಿ: ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೇ.31, ಬುಧವಾರದಂದು 2023-24ನೇ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವಕ್ಕಾಗಿ ತಳಿರು ತೋರಣಗಳಿಂದ ಶಾಲೆಯನ್ನು ಸಿಂಗರಿಸಲಾಗಿತ್ತು. ಎಲ್ ಕೆ ಜಿ ಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿ, ಸಂಭ್ರಮದಿಂದ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಲಯನ್ ಪ್ರೊ. ಎನ್.ವಿ.ಜಿ ಭಟ್ ಮತ್ತು ಗೌರವ ಕಾರ್ಯದರ್ಶಿಗಳಾದ ಲ. ಪ್ರೊ. ರವಿ ನಾಯಕ್ ಇವರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲೆಯ ಮುಖ್ಯೋಪಾಧ್ಯಾಯ ಶಶಾಂಕ ಹೆಗಡೆ ವಿದ್ಯಾರ್ಥಿಗಳಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡುವುದರೊಂದಿಗೆ ಹೊಸ ಶೈಕ್ಷಣಿಕ ವರ್ಷಕ್ಕೆ ಆದರದಿಂದ ಸ್ವಾಗತಿಸಿದರು.  ಸಹ ಶಿಕ್ಷಕರೊಡಗೂಡಿ ಜ್ಞಾನದ  ಸಂಕೇತವಾಗಿ ದೀಪ ಬೆಳಗಿಸಿದರು. ಶಾಲೆಯ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳನ್ನೊಳಗೊಂಡ ಶಾಲಾ ಪ್ರಾಂಗಣವು ಚಟುವಟಿಕೆಯಿಂದ ಚೇತೋಹಾರಿಯಾಗಿತ್ತು.

300x250 AD

Share This
300x250 AD
300x250 AD
300x250 AD
Back to top