Slide
Slide
Slide
previous arrow
next arrow

ಮಂಜುನಾಥ ಸುಣಗಾರಗೆ ವಿಧಾನ ಪರಿಷತ್ ಸ್ಥಾನ ನೀಡಲು ಆಗ್ರಹ

300x250 AD

ಶಿರಸಿ: ಮೀನುಗಾರರ ಸಮುದಾಯದ ಯುವ ನಾಯಕರಾಗಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಮೀನುಗಾರರ ವಿಭಾಗದ ರಾಜ್ಯಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಮೀನುಗಾರರ ವಿಭಾಗವನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದ ಯುವ ರಾಜಕಾರಣಿ ಮಂಜುನಾಥ ಸುಣಗಾರ ಅವರನ್ನು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ನೇಮಕ ಮಾಡಬೇಕೆಂದು ಉತ್ತರ ಕನ್ನಡ ಜಿಲ್ಲೆ ಶಿರಸಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಮೀನುಗಾರರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ನರಸಿಂಹ ಉಗ್ರಾಣಕರ ಅವರು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಹಾಗೂ ರಾಜ್ಯ ಮುಖಂಡರನ್ನು ಆಗ್ರಹಿಸಿದ್ದಾರೆ.
ಮಂಜುನಾಥ ಸುಣಗಾರ ಅವರು ಹಗಲು ರಾತ್ರಿ ಎನ್ನದೇ ಸಮುದಾಯ ಹಲವಾರು ಗುಂಪುಗಳಾಗಿ ವಿವಿಧ ಪಕ್ಷಗಳೊಡನೆ ಸಂಬAಧ ಹೊಂದಿದ್ದನ್ನು ಒಗ್ಗೂಡಿಸಿ ಕಾಂಗ್ರೆಸ್ ಪಕ್ಷದ ಪರ ಒಕ್ಕೊರಲಿನ ಧ್ವನಿಯಾಗಿ ಸಮುದಾಯವನ್ನು ಮುನ್ನೆಡಿಸಿಕೊಂಡು ಬಂದಿರುತ್ತಾರೆ. ಎಷ್ಟೋ ಮೀನುಗಾರರ ಜನಾಂಗದವರು ಕಾಂಗ್ರೆಸ್ ಪಕ್ಷವನ್ನು ಈ ಹಿಂದೆ ಬಿಟ್ಟು ಹೋದರೂ ಕೂಡ ಒಬ್ಬ ಛಲದಂಕಮಲ್ಲನಾಗಿ, ಪಕ್ಷನಿಷ್ಠನಾಗಿ, ಎಐಸಿಸಿ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಗೃಹ ಸಚಿವ ಡಾ.ಜಿ.ಪರಮೇಶ್ವರ, ಅಖಿಲ ಭಾರತ ಮೀನುಗಾರ ಕಾಂಗ್ರೆಸ್‌ನ ಮಾಜಿ ರಾಷ್ಟ್ರೀಯ ಅಧ್ಯಕ್ಷ ಟಿ.ಎನ್.ಪ್ರತಾಪನ್ ಇವರುಗಳ ಆದೇಶದ ಮೇರೆಗೆ ಎಲ್ಲಾ ಹಂತದ ಚುನಾವಣೆಗಳಲ್ಲಿ ಸಕ್ರಿಯನಾಗಿ ಮೊಗವೀರ ಸಮುದಾಯದ ಧೀಮಂತ ನಾಯಕ ದಿವಂಗತ ಯು.ಆರ್.ಸಭಾಪತಿಯವರ ಮಾರ್ಗದರ್ಶನದಲ್ಲಿ ಅವರ ಪ್ರೀತಿಯ ಶಿಷ್ಯರಾಗಿ ಕಾಂಗ್ರೆಸ್ ಪಕ್ಷದ ಮೀನುಗಾರ ವಿಭಾಗವನ್ನು ರಾಜ್ಯದಲ್ಲಿಯೇ ಸದೃಢಗೊಳಿಸಿದ ಕೀರ್ತಿಯ ಜೊತೆಗೆ ಮೀನುಗಾರರ ಸಮುದಾಯದ ಯಶಸ್ವಿ ನಾಯಕರಾಗಿ ಮಂಜುನಾಥ ಸುಣಗಾರ ಅವರು ಹೊರಹೊಮ್ಮಿದ್ದಾರೆ.
ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಪಕ್ಷ ಅಧಿಕಾರಕ್ಕೆ ಬರುವ ವರೆಗೂ ಪ್ರತಿ ಜಿಲ್ಲೆ ಹಾಗೂ ವಿಧಾನ ಸಭಾ ಕ್ಷೇತ್ರದಲ್ಲಿ ಕ್ರೀಯಾಶೀಲ ಸಮಿತಿಗಳನ್ನು ರಚಿಸಿ ಸಮುದಾಯದ ಜನರ ಮನವೊಲಿಸಿ ಪಕ್ಷಕ್ಕೆ ಸೇರ್ಪಡಿಸುವ ಹಾಗೂ ಪಕ್ಷಕ್ಕೆ ಶಕ್ತಿ ನೀಡುವ ಕೆಲಸ ಮಾಡಿದ್ದಾರೆ ಹಾಗೇಯೇ ಸಮುದಾಯದ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಕೆಲಸಗಳನ್ನು ಹಾಗೂ ಮೀನುಗಾರರ ಸಂಕಷ್ಟಗಳ ಬಗ್ಗೆ ಸ್ಥಳೀಯ ಮೀನುಗಾರರ ಬಳಿ ದಾವಿಸಿ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಾಕಷ್ಟು ಯಶಸ್ವಿಯಾಗಿದ್ದಾರೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೀನುಗಾರರ ಸಮಸ್ಯೆಗಳನ್ನು ಹಾಗೂ ಬಂದರುಗಳ ಸಮಸ್ಯೆ, ಮೀನು ಮಾರಾಟಗಾರರ, ಮಹಿಳಾ ಮೀನುಗಾರರ ಸಮಸ್ಯೆಗಳನ್ನು ನಾಡದೋಣಿ ಮೀನುಗಾರರ ಸಮಸ್ಯೆಗಳನ್ನು ಹೀಗೆ ಸಾಂಪ್ರದಾಯಿಕ ಹಾಗೂ ವೃತ್ತಿಪರ ಮೀನುಗಾರರ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಆಲಿಸಿ ಅನೇಕಬಾರಿ ಅವರ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಹಾಗೂ ಕೇಂದ್ರದ ಮೀನುಗಾರಿಕಾ ಸಚಿವರನ್ನು ಮೀನುಗಾರರ ನಿಯೋಗವನ್ನು ಕರೆದೋಯ್ದು ಸಮಸ್ಯೆಗಳಿಗೆ ಸ್ಪಂದಿಸುವಂತೆ ಮನವಿ ಸಲ್ಲಿಸಿದ್ದಾರೆ. ಮೀನುಗಾರರ ಬಹುದಿನಗಳ ಬೇಡಿಕೆಗಳನ್ನು ಈ ಬಾರಿಯ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸುವಂತೆ ಮಂಜುನಾಥ ಸುಣಗಾರ ಅವರು ಪಕ್ಷದ ವರಿಷ್ಠರಿಗೆ ಭೇಟಿಯಾಗಿ ಮನವಿ ಸಲ್ಲಿಸಿ ಪ್ರಣಾಳಿಕೆಯಲ್ಲಿ ಬೇಡಿಕೆಗಳನ್ನು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಾರಿ ಕಾಂಗ್ರೆಸ್ ಪಕ್ಷವು ಅತ್ಯಧಿಕ ಸ್ಥಾನಗಳನ್ನು ರಾಜ್ಯದಲ್ಲಿ ಪಡೆದುಕೊಂಡಿದ್ದು, ಈ ಸುವರ್ಣಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಪಕ್ಷಕ್ಕಾಗಿ ದುಡಿದ ಯುವಕರಿಗೆ ಸಮರ್ಥ ಸ್ಥಾನಮಾನವನ್ನು ಕೊಟ್ಟು ಗೌರವಿಸಬೇಕಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಮೀನುಗಾರ ವಿಭಾಗದ ರಾಜ್ಯಾಧ್ಯಕ್ಷರಾದ ಮಂಜುನಾಥ ಸುಣಗಾರ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳುವ ಮೂಲಕ ಅವರ ಪಕ್ಷಸೇವೆಗೆ ಹಾಗೂ ಪಕ್ಷನಿಷ್ಠೆಗೆ ಗೌರವಿಸಬೇಕಾಗಿ ಮತ್ತು ಜನಾಂಗಕ್ಕೆ ರಾಜಕೀಯ ಅವಕಾಶವನ್ನು ಕಲ್ಪಿಸಿಕೊಡಬೇಕಾಗಿ ರಾಜು ಉಗ್ರಾಣಕರ್ ಅವರು ಸಮುದಾಯದ ಹಾಗೂ ಮೀನುಗಾರರ ಪರವಾಗಿ ಕಾಂಗ್ರೆಸ್ ಮುಖಂಡರನ್ನು ಒತ್ತಾಯಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top