ಗೋಕರ್ಣ: ಇಲ್ಲಿನ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಟಿಕೆಟ್ ಬುಕ್ಕಿಂಗ್‌ಗಾಗಿ ‘ಪ್ರಯಾಣಿಕರ ಕಾಯ್ದಿರಿಸುವಿಕೆ ವ್ಯವಸ್ಥೆ’ (ಪಿಆರ್‌ಎಸ್) ನಾಳೆಯಿಂದ ಆರಂಭಗೊಳ್ಳಲಿದೆ.
ಪ್ರತಿದಿನ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಬುಕ್ಕಿಂಗ್ ಮಾಡಲು ಟಿಕೆಟ್ ಕೌಂಟರ್ ತೆರೆದಿರಲಿದೆ. ಕೊಂಕಣ ರೈಲ್ವೇ ಕಾರ್ಪೊರೇಷನ್ ಈಗಾಗಲೇ ಸುರತ್ಕಲ್, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಕುಮಟಾ, ಕರ್ನಾಟಕ ರಾಜ್ಯದ ಕಾರವಾರ ನಿಲ್ದಾಣಗಳಲ್ಲಿ 18 ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಕಾಯ್ದಿರಿಸುವಿಕೆ ಕೌಂಟರ್‌ಗಳನ್ನು ಹೊಂದಿದೆ.
ಗೋವಾದ ಮಡಗಾಂವ್, ಪಣಜಿ, ಕರ್ಮಾಲಿ, ಥಿವಿಮ್, ಮಹಾರಾಷ್ಟçದ ಸಾವಂತವಾಡಿ, ಕುಡಾಲ್, ಕಂಕವಾಲಿ, ರತ್ನಗಿರಿ, ಚಿಪ್ಲುನ್, ಖೇಡ್ ಮತ್ತು ಮಣಗಾವ್ ನಿಲ್ದಾಣ, ಕಾನಕೋಣ, ರತ್ನಗಿರಿ, ಲಾಂಜಾ, ಸಂಗಮೇಶ್ವರ ಮತ್ತು ಮಹಾಡ್‌ನಲ್ಲಿರುವ ಭಾರತದ ಅಂಚೆ ಕಚೇರಿಗಳಲ್ಲಿ 5 ಪಿಆರ್‌ಎಸ್ ಕಾರ್ಯನಿರ್ವಹಿಸುತ್ತಿವೆ.