• Slide
    Slide
    Slide
    previous arrow
    next arrow
  • ವಸಂತ ನಾಯ್ಕಗೆ ನಿಗಮ ಮಂಡಳಿ ನೀಡಲು ಆಗ್ರಹ

    300x250 AD

    ಸಿದ್ದಾಪುರ: ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನ್ಮನೆ ಅವರನ್ನು ಪ್ರಭಾವಿಯಾಗಿರುವ ನಿಗಮಕ್ಕೆ ನೇಮಕ ಮಾಡಬೇಕು ಎನ್ನುವ ಬಲವಾದ ಆಗ್ರಹ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಸಂತ ನಾಯ್ಕ ಅಭಿಮಾನಿಗಳಿಂದ ಕೇಳಿಬರುತ್ತಿದೆ.
    ವಸಂತ ನಾಯ್ಕ ಮನ್ಮನೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಂತರದಲ್ಲಿ ತಾಲೂಕಿನಲ್ಲಿ ಪಕ್ಷಕ್ಕೊಂದು ಹೊಸ ಚೈತನ್ಯವನ್ನು ತಂದುಕೊಟ್ಟವರು. ಸಂಘಟನಾತ್ಮಕವಾಗಿ ತಳಮಟ್ಟದಿಂದ ಪಕ್ಷವನ್ನು ಕಟ್ಟಿ ಬೆಳೆಸಿದವರು. ಕಾರ್ಯಕರ್ತರನ್ನು ಒಗ್ಗೂಡಿಸಿ ಚುನಾವಣೆಯನ್ನು ಗೆಲ್ಲುವ ಮಟ್ಟಕ್ಕೆ ತಂದು ನಿಲ್ಲಿಸಿದವರು ಎನ್ನುವುದನ್ನು ಯಾರು ಕೂಡ ಅಲ್ಲಗಳೆಯುವುದಿಲ್ಲ. ಸಂಘಟನೆಯಲ್ಲಿ ಶಿಸ್ತುಬದ್ಧತೆಯನ್ನು ರೂಢಿಸಿ ಕಾರ್ಯಕರ್ತರ ಪಡೆಯನ್ನು ಕಟ್ಟಿಕೊಂಡಿದ್ದರು. ಇದೇ ಕಾರಣಕ್ಕೆ ವಿಧಾನಸಭಾ ಚುನಾವಣೆಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕೊನೆಯ ಹಂತದವರೆಗೂ ಅಭ್ಯರ್ಥಿಯಾಗುವುದಕ್ಕೆ ಎಲ್ಲಾ ಪ್ರಯತ್ನ ನಡೆಸಿದ ಇವರು ಅಂತಿಮವಾಗಿ ಟಿಕೆಟ್ ಸಿಗದಿದ್ದಾಗ ಪಕ್ಷದ ಅಭ್ಯರ್ಥಿಯ ಪರವಾಗಿ ಗಟ್ಟಿಯಾಗಿ ನಿಂತವರು. ಗೆಲುವಿಗೆ ಹಗಲಿರುಳು ಶ್ರಮಿಸಿದವರು. ಈ ಎಲ್ಲಾ ಕಾರಣಗಳಿಂದಾಗಿ ಶಾಸಕರಾಗಿ ಕಾಣಲು ಸಾಧ್ಯವಾಗದ ವಸಂತ ನಾಯ್ಕ ಅವರನ್ನು ನಿಗಮದ ಅಧ್ಯಕ್ಷರನ್ನಾಗಿಯಾದರೂ ಕಾಣಬೇಕು ಎನ್ನುವುದು ಪ್ರಾಮಾಣಿಕ ಕಾರ್ಯಕರ್ತರ ಹಂಬಲವಾಗಿದೆ.
    ವಸಂತ ನಾಯ್ಕ ಮನ್ಮನೆಯವರು ಪಕ್ಷಕ್ಕೆ ಬಲವನ್ನು ತಂದುಕೊಡುವದರೊಂದಿಗೆ ಸ್ಥಳೀಯ ಚುನಾವಣೆಯನ್ನು ಸಮರ್ಥವಾಗಿ ಎದುರಿಸಿದವರು. ಹೆಚ್ಚಿನ ಗ್ರಾಮ ಪಂಚಾಯತಗಳಲ್ಲಿ ಪಕ್ಷ ಅಧಿಕಾರ ಹಿಡಿಯುವಂತೆ ಕಾಳಜಿಯನ್ನು ತೋರಿದವರು. ಆ ಮೂಲಕ ಸಾಮಾನ್ಯ ಕಾರ್ಯಕರ್ತರಿಗೂ ಅಧಿಕಾರ ಸಿಗುವುದಕ್ಕೆ ಕಾರಣರಾದವರು. ತಾನೊಬ್ಬ ಅಭ್ಯರ್ಥಿಯಾಗಬೇಕು ಎಂದು ಪ್ರಯತ್ನಿಸಿದರೂ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಬೆನ್ನೆಲುಬಾಗಿ ನಿಂತವರು. ಇಂತವರಿಗೆ ಹೆಚ್ಚಿನ ಅಧಿಕಾರವನ್ನು ನೀಡಿದರೆ ಜನಸಾಮಾನ್ಯರಿಗೆ ಅಧಿಕಾರವನ್ನು ನೀಡಿದಂತಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಸೇವೆ ಮಾಡುವುದಕ್ಕೆ ಅವಕಾಶ ಮಾಡಿದಂತಾಗುತ್ತದೆ. ಕಾರಣ ವಸಂತ ನಾಯ್ಕ ಅವರನ್ನು ನಿಗಮಕ್ಕೆ ಅಧ್ಯಕ್ಷರಾಗಿ ನೇಮಕ ಮಾಡಬೇಕು ಎನ್ನುವುದು ಪಕ್ಷದ ವರಿಷ್ಠರಲ್ಲಿ ಸ್ಥಳೀಯ ನಾಯಕರ ಭಿನ್ನಹವಾಗಿದೆ.

    ಟಿಕೆಟ್ ಭರವಸೆ ಇತ್ತು
    ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಟಿಕೆಟ್ ನೀಡುತ್ತದೆ ಎನ್ನುವ ಬಲವಾದ ಭರವಸೆ ವಸಂತ ನಾಯ್ಕ ಅವರಲ್ಲಿ ಮತ್ತು ಅವರ ಆಪ್ತ ವಲಯದಲ್ಲಿ ಇತ್ತು. ಅದಕ್ಕೆ ಬೇಕಾಗಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಕೊನೆಯ ಕ್ಷಣದಲ್ಲಿ ಭೀಮಣ್ಣ ನಾಯ್ಕ ಅವರನ್ನು ಪಕ್ಷ ಅಭ್ಯರ್ಥಿಯಾಗಿಸಿತ್ತು. ಇವರೆಲ್ಲರ ಶ್ರಮ ಮತ್ತು ಸಹಕಾರದಿಂದ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇನ್ನು ಮುಂದೆ ಎದುರಾಗುವುದು ನಿಗಮ ಮಂಡಳಿಗೆ ನೇಮಕ. ಆ ಸಮಯದಲ್ಲಿ ಇವರನ್ನು ಗಂಭೀರವಾಗಿ ಪಕ್ಷ ಪರಿಗಣಿಸುತ್ತದೆ ಎನ್ನುವ ನಂಬಿಕೆಯನ್ನು ಹಲವರು ಹೊಂದಿದ್ದಾರೆ.

    300x250 AD

    ಡಿಸಿಎಂ ಡಿಕೆಶಿಯ ಪರಮಾಪ್ತ
    ವಸಂತ ನಾಯ್ಕ ಮನ್ಮನೆ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಸಿಎಂ ಡಿ.ಕೆ.ಶಿವಕುಮಾರ ಅವರ ಪಾಳಯದಲ್ಲಿ ಗುರುತಿಸಿಕೊಂಡವರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಡಿಮೆ ಅವಧಿಯಲ್ಲಿಯೆ ಸಂಘಟನೆಗೆ ಮೆಚ್ಚುಗೆಯನ್ನು ಗಳಿಸಿದವರು. ಡಿಕೆಶಿಯವರ ಪರಮಾಪ್ತರಾಗಿ ರಾಜಕೀಯ ನಂಟನ್ನು ಗಟ್ಟಿಯಾಗಿ ಉಳಿಸಿಕೊಂಡು ಬಂದಿದ್ದಾರೆ. ಜಿಲ್ಲೆಯಲ್ಲಿ ನಿಗಮ ಮಂಡಳಿಗೆ ಹಲವು ಹೆಸರುಗಳು ಕೇಳಿಬಂದಿದೆ. ಆದರೂ ಇವರನ್ನು ಡಿಕೆಶಿಯವರು ಕೈ ಬಿಡಲಾರರು ಎಂದು ರಾಜಕೀಯ ಪಡಶಾಲೆಯಲ್ಲಿ ಕೇಳಿಬರುವ ಮಾತನ್ನು ಅಲ್ಲಗಳೆಯುವಂತಿಲ್ಲ.


    Share This
    300x250 AD
    300x250 AD
    300x250 AD
    Leaderboard Ad
    Back to top