• Slide
    Slide
    Slide
    previous arrow
    next arrow
  • ಮಹಾಗಣಪತಿ ವರ್ಧಂತಿ ಉತ್ಸವ ಸಂಪನ್ನ

    300x250 AD

    ಯಲ್ಲಾಪುರ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಯಲ್ಲಾಪುರ ಘಟಕದ ಆವಾರದಲ್ಲಿಯ ಮಹಾಗಣಪತಿ ದೇವಸ್ಥಾನದಲ್ಲಿ ಪ್ರಥಮ ವರ್ಷ ವಾರ್ಷಿಕ ವರ್ಧಂತಿ ಉತ್ಸವ ನೂರಾರು ಭಕ್ತರ ಆಗಮನದೊಂದಿಗೆ ದೇವಸ್ಥಾನದ ಅರ್ಚಕರು ಪ್ರಸಾದ್ ಭಟ್ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.
    ಸೋಮವಾರ ಬೆಳಿಗ್ಗೆ ಶ್ರೀ ಮಹಾಗಣಪತಿ ಪೂಜೆ, ಪುಣ್ಯಾಹ ವಾಚನ, ಕಲಶ ಪೂಜೆ, ಪ್ರಾಣ ಪ್ರತಿಷ್ಠಾಪನೆ, ನವಗ್ರಹ ಶಾಂತಿ, ಕಲಾಭಿವೃದ್ಧಿ ಹವನ, ಗಣ ಹವನ, ಶ್ರೀ ದೇವರಿಗೆ ಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ಅಲಂಕಾರ, ಕುಂಕುಮಾರ್ಚನೆ. ಮಧ್ಯಾಹ್ನ ಮಹಾಪೂಜೆ ನಡೆಯಿತು.
    ಮಹಾಪೂಜೆಯ ನಂತರ ವರ್ಧಂತಿ ಉತ್ಸವಕ್ಕೆ ಆಗಮಿಸಿದ ನೂರಾರು ಭಕ್ತರಿಗಾಗಿ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ರಾತ್ರಿ ಎಂಟು ಗಂಟೆಗೆ ಮಹಾಪೂಜೆ ನಡೆಯಿತು. ಯಲ್ಲಾಪುರ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಘಟಕದ ಅಧಿಕಾರಿಗಳು, ಸಿಬ್ಬಂದಿಗಳು, ಘಟಕದ ಕಾರ್ಮಿಕರು ಹಾಗೂ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top