ಹೊನ್ನಾವರ: ತಾಲೂಕಿನ ಗುಣವಂತೆ ಒಕ್ಕಲಿಗರ ಸಭಾಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವರಾದ ಮಂಕಾಳ ವೈದ್ಯರನ್ನು ಭೇಟಿಯಾದ ಹರಡಸೆಯ ನರಸಿಂಹ ನಾಯ್ಕ್, ವಾಸು ನಾಯ್ಕ್ ಮೊದಲಾದವರು ವೈದ್ಯರನ್ನು ಅಭಿನಂದಿಸಿ, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಹಾಗೂ ಅತಿಕ್ರಮಣದಾರರ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಮನವಿ ಮಾಡಿಕೊಂಡರು.