• Slide
    Slide
    Slide
    previous arrow
    next arrow
  • ಮಾಸ್ಕೇರಿ ವೇದಿಕೆಯಿಂದ ಸಾಧಕರಿಗೆ ಸನ್ಮಾನ

    300x250 AD

    ಅಂಕೋಲಾ: ಸಮಾಜದಲ್ಲಿ ಸಾಧನೆ ಮಾಡಿದವರಿಗೆ ಗುರುತಿಸಿ ಸನ್ಮಾನಿಸುವ ಪರಂಪರೆ ಹೊಂದಿರುವ ದಾಂಡೇಲಿಯ ಮಾಸ್ಕೇರಿ ವೇದಿಕೆ ಇತ್ತೀಚೆಗೆ ಅಂಕೋಲೆಯ ಇಬ್ಬರು ಸಾಧಕರನ್ನು ಸನ್ಮಾನಿಸಿ ಗೌರವಿಸಿತು.
    ತಾಲೂಕಿನ ಬೋಳೆಯ ಎಂ.ಆರ್.ನಾಯಕರವರ ಶರವು ಮನೆಯಂಗಳದಲ್ಲಿ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದಲ್ಲಿ ಅರಣ್ಯ ಇಲಾಖೆಯಲ್ಲಿ ಮಹತ್ತರ ಸಾಧನೆ ಮಾಡಿ ನಿವೃತ್ತಿಯಾದ ಹಾಗೂ ತಮ್ಮ ದಾಂಡೇಲಿ ವಾಸ್ತವ್ಯದ ಪ್ರಾರಂಭದ ದಿನಗಳಲ್ಲಿ ಮಾಡಿದ ಅಪೂರ್ವ ಸಹಾಯವನ್ನು ಸ್ಮರಿಸಿ ಮಾಸ್ಕೇರಿ ವೇದಿಕೆಯ ಪರವಾಗಿ ನಿವೃತ್ತ ಅರಣ್ಯಾಧಿಕಾರಿ ವೆಂಕಟ್ರಮಣ ರಾಮಾ ನಾಯ್ಕರವರನ್ನು ಎಂ.ಕೆ.ನಾಯ್ಕ ಮಾಸ್ಕೇರಿ ಸನ್ಮಾನಿಸಿದರು.
    ಈ ಸಂದರ್ಭದಲ್ಲಿ ಅಂಕೋಲೆಯ ಸೃಜನಶೀಲ ಮನಸ್ಸಿನ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲ ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡಿರುವ ಅಂಕಣಕಾರ ಮಹಾಂತೇಶ ರೇವಡಿಯವರಿಗೆ ಸನ್ಮಾನಿಸಲಾಯಿತು. ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದನಾಪರ ಮಾತುಗಳನ್ನಾಡಿದ ಸಾಹಿತಿ ವಿಠ್ಠಲ ಗಾಂವಕರ ಈ ಇಬ್ಬರ ಸಾಧನೆ ಪುರಸ್ಕಾರಕ್ಕೆ ಯೋಗ್ಯವಾಗಿದ್ದು, ಅರ್ಹರನ್ನು ಸನ್ಮಾನಿಸುವ ಮೂಲಕ ಮಾಸ್ಕೇರಿ ವೇದಿಕೆ ಅರ್ಥಪೂರ್ಣ ಕಾರ್ಯ ಮಾಡುತ್ತಲಿದೆ ಎಂದರು.
    ಶಿಕ್ಷಕ ವಾಸುದೇವ ನಾಯಕ ಎಲ್ಲರನ್ನು ಸ್ವಾಗತಿಸಿದರು. ಲಕ್ಷ್ಮಿ ನಾಯಕ ವಂದಿಸಿದರು. ಮಾಧವ ನಾಯಕ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಅಗಲಿದ ಹಿರಿಯ ಸಾಹಿತಿ ಜಿ.ಎಚ್.ನಾಯಕರಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top