ಶಿರಸಿ: ನಗರಸಭೆ ಹಾಗೂ ಪಂಚಾಯತಗಳ ಅಂಗವಿಕಲ ಸೇವಾ ಕಾರ್ಯಕರ್ತರ ಜೊತೆ ಅಜಿತ ಮನೋಚೇತನಾದಲ್ಲಿ ಸಮಾಲೋಚನೆ ನಡೆಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಯೋಜಕರಾದ ಫರ್ಜಾನಾ ಮತ್ತು ಎಮ್.ಆರ್.ಡಬ್ಲ್ಯೂ ಸ್ನೇಹಾ ತಾಲೂಕಿನಲ್ಲಿ 148 ಬುದ್ಧಿಮಾಂದ್ಯ ಮಕ್ಕಳು ಇದ್ದಾರೆ. ಅವರ ಪೈಕಿ 44 ಮಕ್ಕಳು ಅಜಿತ ಮನೋಚೇತನಾಕ್ಕೆ ಸೇರ್ಪಡೆ ಆಗಿದ್ದಾರೆ ಎಂಬ ಮಾಹಿತಿ ನೀಡಿದರು. ಇನ್ನಷ್ಟು ಮಕ್ಕಳನ್ನು ಸಂಪರ್ಕಿಸಿ ಶಾಲೆಗೆ ಸೇರಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ.
ಶೈಕ್ಷಣಿಕ ಸಲಹೆಗಾರ ಡಾ.ಕೇಶವ ಹೆಚ್.ಕೊರ್ಸೆ ಅವರು ಪಾಲಕರಲ್ಲಿ ಜಾಗೃತಿ ಮಾಡಿಸಲು ಜೂನ್‌ನಲ್ಲಿ ಪಾಲಕರನ್ನು ವಿಕಾಸ ಶಾಲೆಗೆ ಭೆಟಿ ನೀಡುವಂತೆ ಕಾರ್ಯಕ್ರಮ ರೂಪಿಸಬೇಕು ಎಂದು ಸೂಚಿಸಿದರು. ಸಂಸ್ಥೆಯ ಅಧ್ಯಕ್ಷ ಸುಧೀರ ಭಟ್, ಬನವಾಸಿ ಸೇರಿದಂತೆಗ್ರಾಮೀಣ ಭಾಗದಲ್ಲೂಜಗೃತಿ ಸಮಾಲೋಚನೆ ನಡೆಸಲಿದ್ದೇವೆ ಎಂದು ಪ್ರಕಟಿಸಿದರು. ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ ನಿರಾಮಯ ಮುಂತಾದ ಸೌಲಭ್ಯ ನೀಡಲು ಅಂಗವಿಕಲರ ಕಲ್ಯಾಣ ಇಲಾಖೆಯ ಸಹಕಾರ ಬೇಕು ಎಂದು ಮನವಿ ಮಾಡಿದರು. ಜೂನ್ 15ರಂದು ಜಿಲ್ಲಾ ಮಟ್ಟದಲ್ಲಿ ವಿಶೇಷ ಶಿಕ್ಷಕರ ಕಾರ್ಯಗಾರ ಏರ್ಪಡಿಸುತ್ತೇವೆ ಎಂದರು.
ಸಮಾಲೋಚನ ಸಭೆಯಲ್ಲಿ ನಗರ ಮತ್ತು ಎಲ್ಲಾ ಗ್ರಾಮ ಪಂಚಾಯತ್‌ಗಳ ಅಂಗವಿಕಲ ಸೇವಾ ಕಾರ್ಯಕರ್ತರು, ಅಜಿತ ಮನೋಚೇತನಾ ಪದಾಧಿಕಾರಿಗಳು, ಶಿಕ್ಷಕರು ಪಾಲ್ಗೊಂಡರು.
ಅಜಿತ ಮನೋಚೇತನಾದಲ್ಲಿ ಅಂಗವಿಕಲರ ಸೇವಾ ಕಾರ್ಯಕರ್ತರ ಸಭೆ
