ಸಿದ್ದಾಪುರ; ಬೆಳೆ ವಿಮೆ ನೀಡುವಲ್ಲಿ ಕೆಲವೊಂದು ಬದಲಾವಣೆಗಳು ಆಗಬೇಕು. ಹವಾಮಾನ ವೈಫಲ್ಯದಿಂದ ಆದ ಬೆಳೆಗೆ ಮಾತ್ರ ಬೆಳೆ ಹಾನಿ ನೀಡದೆ ಯಾವುದೇ ರೀತಿಯ ರೋಗ ರುಜನಿಯಿಂದ ಹಾನಿಯಾದರು ಬೆಳೆ ವಿಮೆ ಸಿಗುವಂತಾಗಬೇಕು ಉತ್ತರ ಕನ್ನಡ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆರಿಯಪ್ಪ ನಾಯ್ಕ ಹೇಳಿದರು.
ಅವರು ಪಟ್ಟಣದ ಲಯನ್ಸ್ ಬಾಲ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಬೆಳೆ ವಿಮೆ ಯಾಕೆ ಕಟ್ಟುತ್ತಿದ್ದೇವೆ ಎಂಬ ಬಗ್ಗೆ ವಿಮಾ ಕಂಪನಿಯವರು ನಮ್ಮ ರೈತರಿಗೆ ಈವರೆಗೂ ಸರಿಯಾಗಿ ಮನವರಿಕೆ ಮಾಡಿ ಕೊಟ್ಟಿಲ್ಲ ಹವಾಮಾನದ ವೈಪರಿತ್ಯಕ್ಕೆ ಮಾತ್ರ ಬೆಳೆ ವಿಮೆ ಸಿಗಲಿದೆ. ಇದನ್ನು ನಮ್ಮ ರೈತ ಸಂಘ ಸ್ವಾಗತಿಸುವುದಿಲ್ಲ. ಹವಾಮಾನ ವೈಪರ್ಯತೆದಿಂದ ಆದ ಬೆಳೆಹಾನಿಗೆ ಮಾತ್ರ ಬೆಳೆ ವಿಮೆ ಕೊಡುವುದಾದರೆ ಅದರ ಅವಶ್ಯಕತೆ ನಮ್ಮ ರೈತರಿಗಿಲ್ಲ. ಅಡಿಕೆ ಬೆಳೆ ನಮ್ಮ ಜಿಲ್ಲೆಯ ಮುಖ್ಯ ಬೆಳೆ ಆಗಿರುವುದರಿಂದ, ಅಡಿಕೆ ಕೊಳೆ ರೋಗಕ್ಕೆ ಬೆಳೆ ವಿಮೆ ಕೊಡುವಂತಾಗಬೇಕು. ಅಡಿಕೆ ಕೊಳೆ ರೋಗಕ್ಕೆ ಬೆಳೆ ವಿಮೆ ಪಡೆಯುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ನಾವು ಬಾರಿ ಹೋರಾಟ ಮಾಡಬೇಕಾಗಿದೆ. ಸಾವಿರಾರು ಕೋಟಿ ರೂಪಾಯಿ ಇನ್ಶೂರೆನ್ಸ್ ಕಂಪನಿಗಳಿಗೆ ಜಮಾ ಆಗಿದ್ದು ಬಿಟ್ಟರೆ ಇದರಿಂದ ರೈತರಿಗೆ ಹೆಚ್ಚಿನ ಲಾಭವಾಗಿಲ್ಲ ಎಂದರು.
ಶಿರಸಿ ತಾಲೂಕಿನಲ್ಲಿ ನಾಲ್ಕು ಕಡೆಗಳಲ್ಲಿ ನಾಲ್ಕು ಜನ ರೈತರ ಅಡಿಕೆ ತೋಟ ಬೆಂಕಿ ಬಿದ್ದು ಸುಟ್ಟು ಹಾನಿಯಾಗಿದೆ. ಇನ್ನು ಆರು ವರ್ಷಗಳವರೆಗೆ ಅವರು ತಲೆಯೇ ಎತ್ತದಂತ ಪರಿಸ್ಥಿತಿ ಬಂದಿದೆ ಸಿದ್ದಾಪುರ ತಾಲೂಕಿನಲ್ಲಿ ಸಹ ಒಂದು ಕೊಟ್ಟಿಗೆ ಮನೆಗೆ ಬೆಂಕಿ ಬಿದ್ದು 10 ಲಕ್ಷ ರೂಪಾಯಿ ಹಾನಿಯನ್ನು ಅವರು ಅನುಭವಿಸಿದ್ದಾರೆ ಅಲ್ಲಿ ವ್ಯವಸಾಯಕ್ಕೆ ಬೇಕಾದ ಬಹಳಷ್ಟು ಪರಿಕರಗಳು ಸುಟ್ಟು ಹೋಗಿವೆ. ಅವರಿಗೆ ಯೋಗ್ಯ ಪರಿಹಾರ ಶೀಘ್ರದಲ್ಲಿ ಸಿಗುವಂತೆ ಆಗಬೇಕು. ಜೊತೆಗೆ ರಾಜ್ಯ ಸರ್ಕಾರದಿಂದ ಅವರ ಸಾಲ ಕೂಡ ಮನ್ನಾ ವಾಗುವಂತೆ ಮಾಡಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂಗದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.