• Slide
    Slide
    Slide
    previous arrow
    next arrow
  • ಕುಮಟಾದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿ ಚಿಂತನ ಶಿಬಿರ: ವೀರಭದ್ರ ನಾಯ್ಕ

    300x250 AD

    ಸಿದ್ದಾಪುರ: ರಾಷ್ಟ್ರೀಯ ಈಡಿಗ ಮಹಾಮಂಡಳಿಯು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಮಾಜವನ್ನು ಸಂಘಟನೆ ಮಾಡಬೇಕು. ನಮ್ಮ ಸಮಾಜದವರು ರಾಜಕೀಯವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಎಲ್ಲಾ ರಂಗದಲ್ಲಿಯೂ ಬೆಳೆಯಬೇಕೆಂಬ ಸಂಕಲ್ಪವನ್ನು ಕೂಡ ಮಾಡಿಕೊಂಡಿದ್ದಾರೆ. ಹಾಗಾಗಿ ಆ ಸಂಕಲ್ಪದ0ತೆ ಜೂನ್ 3 ಮತ್ತು 4ರಂದು ಕುಮಟಾ ನಗರದಲ್ಲಿ ಒಂದು ಚಿಂತನ ಶಿಬಿರವನ್ನು ಹಮ್ಮಿಕೊಂಡಿದ್ದೇವೆ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ನಾಯ್ಕ ಮಲವಳ್ಳಿ ಹೇಳಿದರು.

    ಅವರು ಪಟ್ಟಣದ ಲಯನ್ಸ್ ಬಾಲ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಈ ಕುರಿತು ಮಾತನಾಡಿ ಈಗಾಗಲೇ ಪ್ರಣವಾನಂದ ಸ್ವಾಮಿಗಳ ನೇತೃತ್ವದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರೀಯ ಈಡಿಗ ಮಂಡಳಿಯನ್ನು ರಚಿಸಲಾಗಿದೆ. ತಮಗೆಲ್ಲ ತಿಳಿದಂತೆ ಕಳೆದ ತಿಂಗಳು ನಾಮಧಾರಿ ಅಭಿವೃದ್ಧಿ ಬಗ್ಗೆ ಹತ್ತು ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಪ್ರಣವಾನಂದ ಸ್ವಾಮೀಜಿಯವರು ಮಂಗಳೂರಿನಿ0ದ ಪಾದಯಾತ್ರೆಯನ್ನು ಕೈಗೊಂಡು ಸಿದ್ದಾಪುರದಲ್ಲಿ ಒಂದು ಬೃಹತ್ ಸಮಾವೇಶವನ್ನು ಕೂಡ ಮಾಡಿ ಬೆಂಗಳೂರಿಗೆ ಪಾದಯಾತ್ರೆಯಲ್ಲಿ ತೆರಳಿ, ಅಂದಿನ ಬಿಜೆಪಿ ಸರ್ಕಾರಕ್ಕೆ ಬೇಡಿಕೆ ಈಡೇರಿಕೆ ಕುರಿತು ಒತ್ತಾಯವನ್ನು ಮಾಡಿದ್ದಾರೆ. ಅಂದಿನ ಆಡಳಿತರೂಡ ಬಿಜೆಪಿ ಸರ್ಕಾರ ನಮ್ಮ ಒಂದು ಒತ್ತಾಯವನ್ನು ಈಡೇರಿಸಿದೆ. ನಾಮಧಾರಿ ನಾರಾಯಣ ಗುರುಗಳ ಹೆಸರಿನಲ್ಲಿ ನಿಗಮ ಮಾಡಿದೆ. ಆ ಕುರಿತು ಕೋಟ ಶ್ರೀನಿವಾಸ ಪೂಜಾರಿಯವರಿಗೆ ನಾವು ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದರು.

    ಜೂ.3ರoದು ರಾಜ್ಯಾದ್ಯಂತ ಆಯ್ಕೆಯಾಗಿರುವ ನಮ್ಮ ನಾಮಧಾರಿ ಸಮುದಾಯದ ಶಾಸಕರುಗಳನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸನ್ಮಾನ ಕಾರ್ಯಕ್ರಮದ ನಂತರ ಜಿಲ್ಲೆಯಲ್ಲಿರುವ ಎಲ್ಲಾ ಪಕ್ಷದ ಮುಖಂಡರನ್ನು ವೇದಿಕೆಯಲ್ಲಿ ಕರೆಯಿಸಿ ತಾವು ಯಾವುದೇ ಪಕ್ಷದಲ್ಲಿ ಗುರುತಿಸಿಕೊಳ್ಳಿ ಆದರೆ ಸಮಾಜ ಎಂದು ಬಂದಾಗ ನೀವೆಲ್ಲ ಸಮಾಜದೊಂದಿಗೆ ಇರಬೇಕು ಅಂತ ಹೇಳಿ ಸೂಚನೆಯನ್ನು ಕೊಡುವ ಒಂದು ಕಾರ್ಯಕ್ರಮ ಸಹ ಇದೆ. ಈಗಾಗಲೇ ನಮ್ಮ ನಾಮಧಾರಿಗಳಿಗೆ ಮಠದ ಬಗ್ಗೆ, ಸ್ವಾಮೀಜಿಗಳ ಬಗ್ಗೆ ತಿಳುವಳಿಕೆ ಕಡಿಮೆ ಇದೆ. ಆ ಒಂದು ಚಿಂತನ ಸಭೆಯಲ್ಲಿ ಸ್ವಾಮೀಜಿಗಳೆಂದರೇನು, ಸ್ವಾಮೀಜಿಗಳ ಮಾರ್ಗದರ್ಶನವನ್ನು ಯಾತಕ್ಕಾಗಿ ಪಡೆದುಕೊಳ್ಳಬೇಕು, ಯಾವ ರೀತಿ ನಾವು ಸಂಘಟಿತರಾಗಬೇಕು ಎಂಬ ಬಗ್ಗೆ ಎರಡು ದಿನಗಳ ಅಧ್ಯಯನ ಶಿಬಿರದಲ್ಲಿ ಸ್ವಾಮೀಜಿಗಳು ಮತ್ತು ಸಮಾಜದ ಅನೇಕ ಗಣ್ಯರು ತಿಳಿಸಿಕೊಡಲಿದ್ದಾರೆ. ಜಿಲ್ಲೆಯ ಎಲ್ಲಾ ಜನರಿಗೆ ಆ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳಲು ವಿನಂತಿಸಿಕೊಳ್ಳುತ್ತೇನೆ ಎಂದರು.

    300x250 AD

    ಪತ್ರಿಕಾಗೋಷ್ಠಿಯಲ್ಲಿ ತಾಲೂಕ ಅಧ್ಯಕ್ಷ ರಾಜೇಶ ನಾಯ್ಕ ಕತ್ತಿ, ಪ್ರಮುಖರಾದ ರಾಘವೇಂದ್ರ ನಾಯ್ಕ, ಅಣ್ಣಪ್ಪ ನಾಯ್ಕ, ಸುಇನೀಲ್ ನಾಯ್ಕ ಸಂಪಖ0ಡ,ಅನೀಲ ಕೋಠಾರಿ, ಉಮೇಶ ನಾಯ್ಕ ಕಡಕೇರಿ, ಬಾಲಕೃಷ್ಣ ನಾಯ್ಕ ಕೋಲಶಿರ್ಸಿ, ಪಿ.ಟಿ.ನಾಯ್ಕ, ಮಂಜುನಾಥ್ ನಾಯ್ಕ ತ್ಯಾರ್ಸಿ, ದಿನೇಶ ನಾಯ್ಕ ಬೇಡ್ಕಣಿ ಮೊದಲಾದವರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top