• Slide
    Slide
    Slide
    previous arrow
    next arrow
  • ಮಂಕಾಳ ವೈದ್ಯರಿಗೆ ಸಚಿವ ಸ್ಥಾನ ನೀಡಲು ಸುನ್ನಿ ಮುಸ್ಲಿಮರ ಆಗ್ರಹ

    300x250 AD

    ಕಾರವಾರ: ಭಟ್ಕಳದಲ್ಲಿ ನಾವು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಮಂಕಾಳ ವೈದ್ಯರನ್ನು ಗೆಲ್ಲಿಸಿದ್ದೇವೆ. ಅವರು ಸರ್ವಧರ್ಮದವರಿಗೆ ಬೇಕಾದ ಶಾಸಕರಾಗಿದ್ದು, ಅವರನ್ನು ಮೀನುಗಾರಿಕಾ ಸಚಿವರನ್ನಾಗಿ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ವಿನಂತಿಸುತ್ತೇವೆ ಎಂದು ಸುನ್ನಿ ಸಂಯುಕ್ತ ಕಮಿಟಿ ಅಧ್ಯಕ್ಷ ಮುನೀರ್ ಅಹಮ್ಮದ್ ಎಂ.ಎಚ್. ಹೇಳಿದರು.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಎಲ್ಲರ ಹಿತ ಕಾಯುವ ಪಕ್ಷ. ಸರ್ವ ಧರ್ಮೀಯರನ್ನು ಸಮಾನತೆಯಿಂದ ಕಾಣುವ ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಆದುದು ನಮಗೆ ಸಂತೋಷ ತಂದಿದೆ. ಕೇಂದ್ರದ ಬಿಜೆಪಿ ಸರ್ಕಾರ ಮೀನುಗಾರರಿಗೆ ಅನುಕೂಲ ಮಾಡಿಲ್ಲ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಬಂದಿದೆ, ಇದು ಸಂತಸ ತಂದಿದೆ ಎಂದರು. ವೈದ್ಯರಿಗೆ ಬಡವರ ಕಷ್ಟ ಗೊತ್ತಿದೆ. ಅಲ್ಲದೆ ವೈದ್ಯರಿಗೆ ಬಡವರ, ಮೀನುಗಾರರ ಕಷ್ಟ ಗೊತ್ತಿದೆ. ಒಳನಾಡು ಮೀನುಗಾರಿಕೆಗೆ ಸಹ ಅವರು ಒಳ್ಳೆಯ ಆಡಳಿತ ನೀಡಬಲ್ಲರು. ಹಾಗಾಗಿ ಅವರಿಗೆ ಮೀನುಗಾರಿಕೆ ಖಾತೆ ಕೊಡಬೇಕು ಎಂದು ಸಹ ಒತ್ತಾಯಿಸಿದರು. ಪತ್ರಿಕಾಗೋಷ್ಟಿಯಲ್ಲಿ ಅಬ್ದುಲ್ ಗವಾಯಿ, ಶಫಿಕ್, ಅಬ್ದುಲ್ ರೆಹಮಾನ್, ಸಮೀರ್ ಅಹಮ್ಮದ್, ಮಹಮ್ಮದ್ ಇದ್ರೀಸ್, ಮೋತೆಶಾಂ, ಸುನ್ನಿ ಸಂಘಟನೆಯ ಪದಾಧಿಕಾರಿಗಳು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top