Slide
Slide
Slide
previous arrow
next arrow

ತೆರಕನಳ್ಳಿ ಮಾರುತಿ ದೇವರ ಪ್ರತಿಷ್ಠಾಪನಾ ಕಾರ್ಯಕ್ರಮ ಸಂಪನ್ನ

300x250 AD

ಶಿರಸಿ :ತಾಲೂಕಿನ ಕುಳವೆ ಗ್ರಾಮ ಪಂಚಾಯತ ವ್ಯಾಪ್ತಿಯ ತೆರಕನಹಳ್ಳಿ ಊರಿನಲ್ಲಿ ಅನಾದಿಕಾಲದ ಮಾರುತಿ ದೇವರ ಪ್ರತಿಷ್ಠಾಪನಾ ಕಾರ್ಯಕ್ರಮ ಭಕ್ತಿಯಿಂದ ನೆರವೇರಿತು.

ದೇವಸ್ಥಾನದ ನೂತನ ಕಟ್ಟಡದಲ್ಲಿ ಮಂಜುಗುಣಿ ಶ್ರೀನಿವಾಸ್ ಭಟ್ ಮಾರ್ಗದರ್ಶನದಲ್ಲಿ ಕೊಳಗಿಬೀಸ್ ಕುಮಾರ್ ಭಟ್ ಮತ್ತು ಕೆರೆಕೈ ಶ್ರೀಕಾಂತ್ ಭಟ್ ಅವರನ್ನು ಒಳಗೊಂಡ ವೈದಿಕ ಬಳಗದೊಂದಿಗೆ ಶ್ರೀ ಮಾರುತಿ ದೇವರನ್ನು ಮೇ.20 ರಂದು ಅಮೃತ ಸಿದ್ದಿ ಮುಹೂರ್ತದಲ್ಲಿ ಪ್ರತಿಷ್ಠಾಪಿಸಲಾಯಿತು.

ಅದೇ ರೀತಿ ನೂತನ ದೇವಾಲಯದ ಸಮೀಪದಲ್ಲೇ ಇರುವ ಮಾರಿಕಾಂಬಾ ದೇವಿಯ ವರ್ಧಂತಿ ಉತ್ಸವವನ್ನು ಮೇ.19 ಶುಕ್ರವಾರದಂದು ನೆರವೇರಿಸಲಾಯಿತು. ಪ್ರತಿಷ್ಠಾಪನೆ ಹಾಗೂ ವರ್ಧಂತಿ ಉತ್ಸವವು ಅತ್ಯಂತ ಸಂಭ್ರಮದಿಂದ ಕೂಡಿದ್ದು ರಾತ್ರಿಯಲ್ಲಿ ನಾಟಕ ಮತ್ತು ದೀಪೋತ್ಸವ ಮತ್ತು ಭಜನೆಯನ್ನು ಹಮ್ಮಿಕೊಳ್ಳಲಾಗಿತ್ತು.

300x250 AD

ಎರಡು ಕ್ಷೇತ್ರದಲ್ಲೂ ಅನ್ನದಾನವನ್ನು ನೆರವೇರಿಸಿ ದೇವರ ಕೃಪೆ , ಮತ್ತು ಆಶೀರ್ವಾದವನ್ನು ಪಡೆದು ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಯಿತು ಎಂದು ಮಾರುತಿ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಮತ್ತು ಮಾರಿಕಾಂಬಾ ದೇವಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಗಂಗಾಧರ ನಾಯ್ಕ ತೆರಕನಹಳ್ಳಿ ತಿಳಿಸಿದರು.

Share This
300x250 AD
300x250 AD
300x250 AD
Back to top