• Slide
  Slide
  Slide
  previous arrow
  next arrow
 • ಹೆಗಡೆಕಟ್ಟಾ ಪ್ರೌಢಶಾಲೆ ‘ಸುವರ್ಣ ಸಂಭ್ರಮ’: ಜನಮನಗೆದ್ದ ‘ವಾದನ ವೈವಿಧ್ಯ’

  300x250 AD

  ಶಿರಸಿ: ತಾಲೂಕಿನ ಹೆಗಡೆಕಟ್ಟಾದ ಶ್ರೀ ಗಜಾನನ ಸೆಕೆಂಡರಿ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿದ್ದ ‘ವಾದನ ವೈವಿಧ್ಯ’ ಕಾರ್ಯಕ್ರಮವು ಕಿಕ್ಕಿರಿದ ಸಭೆಯ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ.

  ವಾದನ ವೈವಿಧ್ಯ ಕಾರ್ಯಕ್ರಮವು ಒಟ್ಟೂ ಏಳು ವಾದನಗಳ ಕಲಾವಿದರು ಸಮ್ಮಿಲನದೊಂದಿಗೆ ಸುವರ್ಣ ಸಂಭ್ರಮದ ವಾತಾವರಣಕ್ಕೆ ಇನ್ನಷ್ಟು ಮೆರಗು ನೀಡಿತು. ಕೊಳಲಿನಲ್ಲಿ ಸಮರ್ಥ ತಂಗಾರಮನೆ, ಸಿತಾರ ವಾದನದಲ್ಲಿ ಭಾರ್ಗವ ಹೆಗಡೆ ಶೀಗೇಹಳ್ಳಿ, ತಬಲಾ ಮತ್ತು ಡೋಲಕ್ ವಾದನದಲ್ಲಿ ಗಣೇಶ ಗುಂಡ್ಕಲ್ ಯಲ್ಲಾಪುರ, ಚಂಡೆ ವಾದನದಲ್ಲಿ ಪ್ರಸನ್ನ ಭಟ್ಟ ಹೆಗ್ಗಾರ್, ರಿದಮ್ ಪ್ಯಾಡ್‌ವಾದನದಲ್ಲಿ ಉದಯ ಭಂಡಾರಿ ಕುಮಟಾ ಮತ್ತು ಕೀ ಬೋರ್ಡ್ನಲ್ಲಿ ಚಂದ್ರು ಭಂಡಾರಿ ಕುಮಟಾ ಪಾಲ್ಗೊಂಡಿದ್ದು, ಆರಂಭಿಕವಾಗಿ ರಾಗ್ ಮಾಲಕಂಸ್ ನುಡಿಸುತ್ತ ಕಾರ್ಯಕ್ರಮಕ್ಕೆ ಭದ್ರ ಬುನಾದಿ ಹಾಕಿದರು. ಕಲಾವಿದರು ತಮ್ಮ ವಾದನಗಳಲ್ಲಿ ಕೈಚಳಕ ಪ್ರದರ್ಶಿಸಿ, ಹೊಸತನದ ಅಪರೂಪದ ಕಾರ್ಯಕ್ರಮ ಪ್ರಸ್ತುತಪಡಿಸುತ್ತ ಸರಿ ಸುಮಾರು ಒಂದುವರೆಯಿಂದ ಎರಡು ತಾಸುಗಳ ಕಾಲ ಕಾರ್ಯಕ್ರಮ ನಡೆಸಿಕೊಟ್ಟು ಸಂಗೀತ ರಸಿಕರಿಗೆ ಕಲಾರಸದೂಟ ನೀಡಿದರು.
  ಲಯ, ತಾಳಗಳ ಏರಿಳಿತದೊಂದಿಗೆ ಜನಮಾನಸದಲ್ಲಿ ಅಚ್ಚುಳಿಯುವ ಪ್ರದರ್ಶನ ನೀಡಿ ಪ್ರಶಂಸೆಗೆ ಪಾತ್ರರಾದರು. ನಾಲ್ಕೈದು ಬಗೆಯ ಲಘು ಸಂಗೀತವನ್ನು ಎಲ್ಲಾ ವಾದನಕಾರರು ಜುಗಲ್‌ಬಂದಿಯಾಗಿ ನುಡಿಸುತ್ತ ಪ್ರತಿ ಹಂತದಲ್ಲಿ ಪ್ರೇಕ್ಷಕರ ಕರತಾಡನಕ್ಕೆ ಸಾಕ್ಷಿಯಾದರು.

  300x250 AD

  ವಾದನ ವೈವಿದ್ಯದ ಪೂರ್ವ ಹಾಗೂ ನಂತರದಲ್ಲಿ ಭರತನಾಟ್ಯ, ಹಾಡು, ಭಕ್ತಿಗೀತೆ, ಸುಗಮ ಸಂಗೀತ, ನಾಟಕ ಮುಂತಾದ ವಿವಿಧ ಕಾರ್ಯಕ್ರಮ ಯಶಸ್ವಿಯಾಗಿ ನಡೆದು ಸುವರ್ಣ ಸಂಭ್ರಮಕ್ಕೆ ಹಬ್ಬದ ಕಳೆಗಟ್ಟಿತ್ತು.

  Share This
  300x250 AD
  300x250 AD
  300x250 AD
  Leaderboard Ad
  Back to top