• Slide
    Slide
    Slide
    previous arrow
    next arrow
  • ನನಸಾಗದ ನೂತನ ಸೇತುವೆ ಕನಸು: ಶಿಥಿಲಗೊಂಡ ಕಂಬಗಳಿಗೆ ಬಲ ನೀಡಿದ ಗ್ರಾಮಸ್ಥರು

    300x250 AD

    ಸಿದ್ದಾಪುರ: ತಾಲೂಕಿನ ಎರಡು ಗ್ರಾಮಗಳ ಸೇತುವೆ ಕನಸು, ಪ್ರಯತ್ನಗಳೆಲ್ಲ ಹೊಳೆಯಲ್ಲಿ ಮಾಡಿದ ಹೋಮದಂತಾಗಿದ್ದು, ಮಳೆಗಾಲದಲ್ಲಿ ಸಂಪರ್ಕ ಕಡಿತವಾಗದಂತೆ, ಇರುವ ಸೇತುವೆ ಈ ಮಳೆಗಾಲದಲ್ಲಿ ಉಳಿಸಿಕೊಳ್ಳುವ ಸಲುವಾಗಿ ಅಲ್ಲಿಮ ಗ್ರಾಮಸ್ಥರೇ ಸಿಮೆಂಟ್ ಚೀಲದಲ್ಲಿ ರೇತಿ ತುಂಬಿ ಕಂಬದ ಬುಡದಲ್ಲಿಟ್ಟ ಘಟನೆ‌ ನಡೆದಿದೆ.

    ಇಲ್ಲಿಯ ಅಣಲೇಬೈಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡಿಮನೆ, ಕ್ಯಾತನಮನೆ, ಅಂಬೆಗಾರ ಸೇರಿದಂತೆ ಹಲವು ಹಳ್ಳಿಗಳಿಗೆ ಅಘನಾಶಿನಿ ನದಿ ಅಡ್ಡ ಬಂದಿದೆ. ಮಳೆಗಾಲದಲ್ಲಿ ಈ ನದಿ ದಾಟಲು ಸಾಧ್ಯವಾಗದೇ ಇಲ್ಲಿಯ ನಿವಾಸಿಗಳು ಸಮಸ್ಯೆ ಎದುರಿಸುತ್ತಾರೆ. ಹೇರೂರು ಗೋಳಿಮಕ್ಕಿ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಸಲುವಾಗಿ ಇಲ್ಲಿಯ ನಡಿಮನೆ ಬಳಿ ಜೀಪ್ ಮತ್ತು ಬೈಕ್ ದಾಟಬಹುದಾದ ಮಾದರಿಯ ಸಣ್ಣ ಸೇತುವೆಯನ್ನು ಹಲವು ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಆದರೆ ಅಘನಾಶಿನಿ ನದಿಯ ಪ್ರವಾಹದ ಅಬ್ಬರಕ್ಕೆ ಸೇತುವೆಯ ಇಕ್ಕೆಲಗಳ ಭದ್ರತಾ ಕಂಬಗಳು ಮುರಿದುಹೋಗಿ ಬೈಕ್ ದಾಟಿಸಲೂ ಭಯವಾಗುವ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸೇತುವೆಯ ಮಧ್ಯ ಭಾಗದ ಕಂಬವೇ ಶಿಥಿಲಗೊಂಡು ಸೇತುವೆಯ ಮೇಲೆ ಸಂಚರಿಸಲು ಭಯಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಇತ್ತೀಚೆಗೆ ನೂತನ ಸೇತುವೆ ನಿರ್ಮಿಸಿಕೊಡುವಂತೆ ಆಗ್ರಹಿಸಿದ್ದರು.
    ಗ್ರಾಮಸ್ಥರ ಬೇಡಿಕೆಗೆ ಮಾಮೂಲಿಯಂತೆ ಈ ವರ್ಷ ಸಹ ಸ್ಪಂದನೆ ಸಿಕ್ಕಿಲ್ಲ. ಮಳೆಗಾಲದ ಅನಿವಾರ್ಯತೆಗಾಗಿ ಗ್ರಾಮಸ್ಥರೇ ಈಗ ಶ್ರಮದಾನದ ಮೂಲಕ ಸೇತುವೆ ಕುಸಿದುಬೀಳದಂತೆ ರೇತಿ ಚೀಲದ ಆಧಾರ ಒದಗಿಸಿದ್ದಾರೆ.

    300x250 AD

    ಗ್ರಾಮದ ಗಣೇಶ ಹೆಗಡೆ, ತಿರುಮಲೇಶ್ವರ ಹೆಗಡೆ, ರಘುಪತಿ ಹೆಗಡೆ, ಜನಾರ್ಧನ ಹೆಗಡೆ, ನಾಗರಾಜ ಗೌಡ, ಎಂ.ಎನ್. ಹೆಗಡೆ, ಗಣಪತಿ ಗೌಡ, ನವೀನ್ ಗೌಡ, ಮಹಾಬಲೇಶ್ವರ ನಾಯ್ಕ, ದಿನೇಶ ನಾಯ್ಕ, ಗಜಾನನ ಗೌಡ, ಸುಮಂತ ಹೆಗಡೆ ಇತರರು ಸುಮಾರು‌ 400 ಚೀಲದಲ್ಲಿ ಉಸುಕು ತುಂಬಿ ಶಿಥಿಲಗೊಂಡ ಕಂಬದ ಬುಡದಲ್ಲಿಟ್ಟು ಸೇತುವೆ ಕುಸಿತ ತಪ್ಪಿಸಲು ಯತ್ನಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top