Slide
Slide
Slide
previous arrow
next arrow

ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕಾರ: ಶಿರಸಿಯಲ್ಲಿ ಸಿಹಿ ವಿತರಣೆ

300x250 AD

ಶಿರಸಿ: ರಾಜ್ಯದ 31ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿ ಕಾಂಗ್ರೆಸ್ ಸರ್ಕಾರ ರಚನೆಗೊಂಡಿದ್ದರಿಂದ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮ ಆಚರಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪ್ರಮಾಣ ವಚನ ಕಾರ್ಯಕ್ರಮ ವೀಕ್ಷಿಸಿ ಪಕ್ಷದ ಕಚೇರಿ ಎದುರು ಪಟಾಕಿ ಸಿಡಿಸಿ ನಂತರ ಪಕ್ಷದ ಎಲ್ಲ ಸ್ಥರದ ಮುಖಂಡರು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಹಳೆ ಬಸ್ ಸ್ಟಾಂಡ್ ಸರ್ಕಲ್, ಶಿವಾಜಿ ಚೌಕ, ಐದು ರಸ್ತೆ ಸರ್ಕಲ್, ರಾಘವೇಂದ್ರ ಮಠ ಸರ್ಕಲ್, ಅಶ್ವಿನಿ ಸರ್ಕಲ್‌ನಲ್ಲಿ ಪಟಾಕಿ ಸಿಡಿಸಿ ಪಕ್ಷದ ಪರ ಘೋಷಣೆ ಕೂಗುವ ಮುಖಾಂತರ ಸಂಭ್ರಮಾಚರಣೆ ಮಾಡಲಾಯಿತು.

300x250 AD

ಈ ಸಂದರ್ಭದಲ್ಲಿ ಮುಖಂಡರಾದ ಜಗದೀಶ ಗೌಡ, ಎಸ್.ಕೆ.ಭಾಗವತ, ಖಾದರ್ ಅನವಟ್ಟಿ, ದಯಾ ನಾಯ್ಕ್, ಶ್ರೀನಿವಾಸ ನಾಯ್ಕ್, ಶ್ರೀಧರ ನಾಯ್ಕ್, ಜಬೀವುಲ್ಲಾ ಖಾನ್, ಶೈಲೇಶ್ ಗಾಂಧಿ, ಬಾಳಾ ರೇವಣಕಾರ, ಲುಕ್ಕು ನರೋನಾ, ರಘು ಕಾನಡೆ, ಅಮರ ನೇರಳಕಟ್ಟೆ, ಗೀತಾ ಶೆಟ್ಟಿ, ಶಶಿಕಲಾ ನಾಯ್ಕ್ ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top