Slide
Slide
Slide
previous arrow
next arrow

ಸಿಮೆಂಟ್ ರಸ್ತೆ ಕಳಪೆ; ಸ್ಥಳೀಯರ ಸಂಶಯ

300x250 AD

ಶಿರಸಿ: ಇಲ್ಲಿಯ ಲಾಲಗೌಡ್ರು ನಗರದಲ್ಲಿರುವ ಘನತ್ಯಾಜ್ಯ ಘಟಕಕ್ಕೆ ಸಾಗಲು ನಗರಸಭೆಯಿಂದ ಮಾಡಿರುವ ಸಿಮೆಂಟ್ ರಸ್ತೆಯು ಕಳಪೆ ಗುಣಮಟ್ಟದಿಂದ ಕೂಡಿರುವ ಬಗ್ಗೆ ಆ ಭಾಗದಲ್ಲಿ ದಿನನಿತ್ಯ ಸಂಚರಿಸುವ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ.

ಘನತ್ಯಾಜ್ಯ ಘಟಕವು ನಗರದಿಂದ ಸುಮಾರು 5 ಕಿ.ಮೀ.ದೂರದಲ್ಲಿದ್ದು ಮಳೆಗಾಲದಲ್ಲಿ ಈ ಘಟಕಕ್ಕೆ ತೆರಳಲು ಸರಿಯಾದ ರಸ್ತೆಯಿಲ್ಲದ ಕಾರಣದಿಂದಾಗಿ ಮೊದಲ ಹಂತದಲ್ಲಿ 251 ಮೀಟರ್ ಹಾಗು ಎರಡನೇ ಹಂತದಲ್ಲಿ 140 ಮೀಟರ್ ಸಿಮೆಂಟ್ ರಸ್ತೆ ಮಾಡಲಾಗಿದೆ. ಆದರೆ ಈ ರಸ್ತೆಯ ಗುತ್ತಿಗೆ ಹಿಡಿದ ಹಾನಗಲ್ ತಾಲೂಕಿನ ಎಫ್ ಎಮ್ ಖಾಜಿ ಎಂಬುವರು ಯಾವುದೇ ಗುಣಮಟ್ಟದಿಂದ ಕಾಮಗಾರಿ ಮಾಡಿಲ್ಲ ಎನ್ನುವ ಬಲವಾದ ಆರೋಪವನ್ನು ಆ ಭಾಗದ ಸಂಚಾರಿಗಳು ವ್ಯಕ್ತಪಡಿಸಿದ್ದಾರೆ.

300x250 AD

ಮುಖ್ಯವಾಗಿ ಗುತ್ತಿಗೆದಾರರು ಎಲ್ಲೆ ಕೆಲಸಮಾಡಿದರೂ ಅಲ್ಲೊಂದು ನಾಮಫಲಕ ಹಾಕಿ ಕಾಮಗಾರಿಯ ವಿವರ ನೀಡಿರುತ್ತಾರೆ. ಆದರೆ ಇಲ್ಲಿನ ಕಾಮಗಾರಿಗೆ ಯಾವ ಕಾಮಗಾರಿ? ಗುತ್ತಿಗೆದಾರರ ಹೆಸರು, ಅಂದಾಜು ಮೊತ್ತ ಎಂಬಿತ್ಯಾದಿ ಮಾಹಿತಿಯಿರುವ ನಾಮಫಲಕ ರಸ್ತೆಯಂಚಿಗೂ ಎಲ್ಲಿಯೂ ಕಾಣಸಿಗುತ್ತಿಲ್ಲ. ಈ ರಸ್ತೆಯು ನಗರದಿಂದ ಹೊರಗೆ ಇರುವುದರಿಂದ ಯಾರೂ ಕೂಡಾ ಪ್ರಶ್ನಿಸುವದಿಲ್ಲವೆಂದು ಕಳಪೆ ಗುಣಮಟ್ಟದಲ್ಲಿ ಮಾಡಿದಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಮಾಡಿದ ಸಿಮೆಂಟ್ ರಸ್ತೆ ಒಂದೆರಡು ಮಳೆಗೆ ಹಳ್ಳ ಹಿಡಿಯುವಂತೆ ಕಾಣುತ್ತದೆ. ಆದ್ದರಿಂದ ನಗರಸಭೆಯವರು ಸಿಮೆಂಟ್ ರಸ್ತೆ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿಯೇ ಗುತ್ತಿಗೆದಾರನಿಗೆ ಬಿಲ್ ಪಾಸ್ ನಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Share This
300x250 AD
300x250 AD
300x250 AD
Back to top