• Slide
    Slide
    Slide
    previous arrow
    next arrow
  • ಕಾರ್ಮಿಕರ ದಿನಾಚರಣೆ; ರೋಟರಿಯಿಂದ ಶ್ರಮಿಕರಿಗೆ ಸನ್ಮಾನ

    300x250 AD

    ಕಾರವಾರ: ಕಾರ್ಮಿಕ ದಿನಾಚರಣೆಯ ಅಂಗವಾಗಿ ನಗರದ ರೋಟರಿ ಶತಾಬ್ಧಿ ಭವನದಲ್ಲಿ ರೋಟರಿ ಕ್ಲಬ್‌ನಿಂದ ಕಾರ್ಮಿಕ ದಿನವನ್ನು ಆಚರಿಸಲಾಯಿತು.
    ಪ್ರಾರಂಭದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷರಾದ ರಾಘವೇಂದ್ರ ಜಿ. ಪ್ರಭು ಎಲ್ಲರನ್ನು ಸ್ವಾಗತಿಸುತ್ತ, ಕಾರ್ಮಿಕರು ನಮ್ಮ ದೇಶದ ಬಹು ಮುಖ್ಯ ಅಂಗ, ಕಾರ್ಮಿಕರಿಲ್ಲದೇ ದೇಶದ ಅಭಿವೃದ್ಧಿ ಅಸಾಧ್ಯ ಎಂದರು. ನಂದನಗದ್ದಾ ನ್ಯೂ ಹೈಸ್ಕೂಲ್ ಕಲಾ ಶಿಕ್ಷಕ ಆನಂದ ಎನ್.ಘಟಕಾಂಬಳೆರವರು ದೇಶಾದ್ಯಂತ ಕಾರ್ಮಿಕರ ಪ್ರಾಮಾಣಿಕ ದುಡಿತದಿಂದ ಬಹಳಷ್ಟು ಕಟ್ಟಡಗಳು ತಲೆ ಎತ್ತಿ ನಿಂತು ದೇಶದ ಪ್ರಗತಿಗೆ ಸಹಕಾರವಾಗಿದೆ. ಅದೇ ರೀತಿ ಕಾರ್ಮಿಕರು ತಮ್ಮ ಸುರಕ್ಷತೆಯೊಂದಿಗೆ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಬೇಕು ಎಂದರು.
    ರೋಟರಿ ಸಂಸ್ಥೆಯ ಕಾರ್ಯದರ್ಶಿ ಗುರುದತ್ತ ಬಂಟರವರು ಕಾರ್ಮಿಕರ ಕಾರ್ಯವನ್ನು ಶ್ಲಾಘಿಸುತ್ತ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಗರಸಭೆಯ ಕಾರ್ಮಿಕ ಮುತ್ಯಾಳು ಜುಟುರು, ಕಾಂಕ್ರಿಟ್ ಮೇಸ್ತ್ರಿ ಸಾವಂತಬಾಬು ಗೌಡಾ, ಕಟ್ಟಡ ಕಾರ್ಮಿಕ ಭೀಮಪ್ಪ ಅಬ್ಬಿಗೇರಿ ಮತ್ತು ಗಾರೆ ಕಾರ್ಮಿಕ ಹನುಮಂತಪ್ಪ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಕಾರವಾರದ ಕಾಂಕ್ರಿಟ್ ಕೆಲಸದಲ್ಲಿ ಪ್ರಖ್ಯಾತರಾಗಿದ್ದ ಉಮಾಬಾಯಿ ಗುನಗಿ ಇವರಿಗೆ ರೋಟರಿ ಕ್ಲಬ್ ವತಿಯಿಂದ ಶೃದ್ಧಾಂಜಲಿಯನ್ನು ಸಲ್ಲಿಸಲಾಯಿತು.


    ಕಾರ್ಯಕ್ರಮದಲ್ಲಿ ಕೆ.ಡಿ.ಪೆಡ್ನೇಕರ, ಶೈಲೇಶ ಹಳದಿಪೂರ, ನಾಗರಾಜ ಜೋಶಿ, ಅಮರನಾಥ ಶೆಟ್ಟಿ, ಸಾತಪ್ಪಾ ತಾಂಡೇಲ, ಪಿ.ಎಸ್.ನಾಯ್ಕ, ಮುರಲಿ ಗೊವೇಕರ, ಗೋವಿಂದಪ್ಪಾ, ವಿನೋದ ಕೋಠಾರಕರ ಉಪಸ್ಥಿತರಿದ್ದರು. ಸಾತಪ್ಪಾ ತಾಂಡೇಲರವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರವನ್ನು ಕೃಷ್ಣಾನಂದ ಬಾಂದೇಕರ ನಡೆಸಿಕೊಟ್ಟರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top