• Slide
  Slide
  Slide
  previous arrow
  next arrow
 • ಮೇ.27ಕ್ಕೆ ನಾಣಿಕಟ್ಟಾದಲ್ಲಿ ‘ಯಕ್ಷಗಾನ ಹಿಮ್ಮೇಳ ವೈಭವ’

  300x250 AD

  ಸಿದ್ದಾಪುರ: ತಾಲೂಕಿನ ನಾಣಿಕಟ್ಟಾ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಆವಾರದಲ್ಲಿ “ಕೃಷ್ಣ ಯಜುರ್ವೇದ ಪಾರಾಯಣ” ಹಾಗೂ “ಭಾಗವತ ಸಪ್ತಾಹ” ಪೂಜಾ ಕಾರ್ಯಕ್ರಮಗಳ ಪ್ರಯುಕ್ತ, ವೇ.ಮೂ. ವಿನಾಯಕ ಭಟ್ ಮತ್ತೀಹಳ್ಳಿ ದಿವ್ಯ ಉಪಸ್ಥಿತಿಯಲ್ಲಿ,ಸೂರನ್ ಕುಟುಂಬದ ಸಂಪೂರ್ಣ ಸಹಕಾರದೊಂದಿಗೆ ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗ ನಾಣಿಕಟ್ಟಾ(ಶ್ರೀ ನಟರಾಜ ಎಮ್ ಹೆಗಡೆ & ಬಳಗ) ಅವರ ಸಮರ್ಥ ಸಂಯೋಜನೆಯಲ್ಲಿ ಮೇ.27, ಶನಿವಾರ, ಮುಸ್ಸಂಜೆ 5-30 ಘಂಟೆಯಿಂದ, ಯಕ್ಷರಂಗದ ದಿಗ್ಗಜ ಹಿಮ್ಮೇಳದ ಕಲಾವಿದರಿಂದ, ‘ಯಕ್ಷಗಾನ ಹಿಮ್ಮೇಳ ವೈಭವ’ ನಡೆಯಲಿದೆ.

  ಯಕ್ಷರಂಗದ ಪ್ರಖ್ಯಾತ ಭಾಗವತರುಗಳಾದ ರಾಘವೇಂದ್ರ ಆಚಾರ್ಯ ಜನ್ಸಾಲೆ ಮತ್ತು ರಾಮಕೃಷ್ಣ ಹೆಗಡೆ ಹಿಲ್ಲೂರು ಅವರ ಸುಮಧುರ ದ್ವಂದ್ವ ಗಾನಸುಧೆ, ಸುನೀಲ್ ಬಂಡಾರಿ & ಪ್ರಸನ್ನ ಹೆಗ್ಗಾರ ಮದ್ದಲೆ &ಚಂಡೆಯ ಜುಗಲಬಂದಿ, ನಡೆಯಲಿದ್ದು ಕಲಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಚಂದಗಾಣಿಸಿ, ಕಲಾವಿದರನ್ನೂ, ಸಂಘಟಕರನ್ನೂ, ಪ್ರೋತ್ಸಾಹಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top