Slide
Slide
Slide
previous arrow
next arrow

ಲೋಡರ್ ನಿರ್ವಹಣಾ ತರಬೇತಿಗೆ ಚಾಲನೆ

300x250 AD

ದಾಂಡೇಲಿ: ನಗರದ ಸಮೀಪದ ಹಸನ್ಮಾಳದಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ರ‍್ಸೆಟಿ ಸಂಸ್ಥೆಯ ಆಶ್ರಯದಡಿ ಹಾಗೂ ಜೆ.ಎಸ್.ಡಬ್ಲೂ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿರುವ ಬ್ಯಾಕ್ ಹೋ ಲೋಡರ್ ನಿರ್ವಹಣಾ ತರಬೇತಿ ಕರ‍್ಯಕ್ರಮಕ್ಕೆ ಹಸನ್ಮಾಳದಲ್ಲಿ ಚಾಲನೆಯನ್ನು ನೀಡಲಾಯಿತು.

ಒಂದು ತಿಂಗಳವರೆಗೆ ನಡೆಯಲಿರುವ ಈ ತರಬೇತಿಗೆ ನಗರ ಸಭೆಯ ಮಾಜಿ ಅಧ್ಯಕ್ಷೆ ಸರಸ್ವತಿ ರಜಪೂತ್ ಅವರು ಚಾಲನೆಯನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಕೆನರಾ ಬ್ಯಾಂಕ್ ದೇಶಪಾಂಡೆ ರ‍್ಸೆಟಿ ಸಂಸ್ಥೆಯ ಯೋಜನಾ ಸಂಯೋಜಕರಾದ ವಿನಾಯಕ್ ಚೌವ್ಹಾಣ್ ಭಾಗವಹಿಸಿದ್ದರು.
ಈ ವೇಳೆ ಕೆನರಾ ಬ್ಯಾಂಕ್ ದೇಶಪಾಂಡೆ ರ‍್ಸೆಟಿ ಸಂಸ್ಥೆಯ ಯೋಜನಾಧಿಕಾರಿ ನಟರಾಜ ಅಂಗಡಿ, ಸಂಸ್ಥೆಯ ಅಧಿಕಾರಿಗಳಾದ ಅಂದಾನಪ್ಪ ಅಂಗಡಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top