Slide
Slide
Slide
previous arrow
next arrow

ಮಹಾಕಾಳಿ ದೇವಿಗೆ ಶತಚಂಡಿಕಾ ಯಾಗ ಸಂಪನ್ನ

300x250 AD

ಹೊನ್ನಾವರ: ಪಟ್ಟಣದ ಕಸಬಾ ಗುಂಡಿಬೈಲ್ ಸ್ವರ್ಣಪುರಾಧೀಶ್ವರಿ ಮಹಾಕಾಳಿ ದೇವಿಯ ಸನ್ನದಿಯಲ್ಲಿ ವರ್ಧಂತಿ ಉತ್ಸವ, ಶತಚಂಡಿಕಾಯಾಗ, ಶ್ರೀಕರಿಕಾನಪರಮೇಶ್ವರಿ ದೇವಿಯ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಧಾರ್ಮಿಕ ವಿಧಿವಿಧಾನದಂತೆ ಜರುಗಿತು.


ಶ್ರೀಕರಿಕಾನ ಪರಮೇಶ್ವರಿ ದೇವಿಯ ಪುನರ್ ಪ್ರತಿಷ್ಠಾಪನೆ, ಶತಚಂಡಿಕಾಯಾಗ, ಮಹಾಕಲಾಬಿಷೇಕ, ಮಹಾಪೂರ್ಣಾವತಿ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ವಿದ್ವಾನ ಗಣಪತಿ ಭಟ್ ಗಾಳಿ, ವೆಂಕಟೇಶ ಭಟ್ ಆಚಾರ್ಯತ್ವದಲ್ಲಿ ಜರುಗಿತು. ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಆಗಮಿಸಿ ದೇವಿಯ ದರ್ಶನ ಪಡೆದು ಉಡಿಸೇವೆ, ಸರ್ವಸೇವೆ ಮುಂತಾದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಆಗಮಿಸಿದ ಭಕ್ತರಿಗೆ ಪ್ರಸಾದ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು. ಎರಡು ದಿನಗಳ ಕಾಲ ರಾತ್ರಿ ಯಕ್ಷಗಾನ ಕಾರ್ಯಕ್ರಮ ಜರುಗಿತು.

300x250 AD
Share This
300x250 AD
300x250 AD
300x250 AD
Back to top