Slide
Slide
Slide
previous arrow
next arrow

ಕುಡಿಯುವ ನೀರು, ರಸ್ತೆ ವಿಷಯದಲ್ಲಿ ರಾಜಕಾರಣ ಸಲ್ಲದು: ಭೀಮಣ್ಣ ನಾಯ್ಕ್

300x250 AD

ಶಿರಸಿ: ನಗರದ ಮಿನಿ ವಿಧಾನ ಸೌಧದಲ್ಲಿ ಮಂಗಳವಾರ ಶಿರಸಿ- ಸಿದ್ದಾಪುರ ತಾಲೂಕಿನ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ನೂತನ ಶಾಸಕ ಭೀಮಣ್ಣ ನಾಯ್ಕ ಮಾತನಾಡಿದರು. ಅಧಿಕಾರಿಗಳು, ಪಿಡಿಒಗಳು ಸ್ಥಳಕ್ಕೆ ತೆರಳಿ ಪರಿಶೀಲಿಸದೇ ಕಾಗದಪತ್ರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ವರದಿ ಮಾಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕ್ಷೇತ್ರದ ಮೂಲೆ ಮೂಲೆ ತಿರುಗಿದ್ದೇನೆ, ಕುಡಿಯುವ ನೀರಿನ ಸಮಸ್ಯೆ ಇರುವ ಹಳ್ಳಿಗಳನ್ನು ದಾಖಲಿಸಿಕೊಂಡಿದ್ದೇನೆ. ಅಧಿಕಾರಿಗಳು ಸಮಸ್ಯೆ ಇದ್ದರೂ ದಾಖಲೆಯಲ್ಲಿ ದಾಖಲಿಸದಿದ್ದರೆ, ಕ್ರಮ ಕೈಗೊಳ್ಳದಿದ್ದರೆ ಮುಂದೆ ಏನಾಗತ್ತದೆ ಎಂದು ಗೊತ್ತಿಲ್ಲ. ಸಮಸ್ಯೆ ಜಾಸ್ತಿ ಇದ್ದಾಗ ಅಧಿಕಾರಿಗಳಿಂದ ಅಸಮರ್ಪಕ ಉತ್ತರ ನನಗೆ ಬೇಕಾಗಿಲ್ಲ. ಕುಡಿಯುವ ನೀರು, ರಸ್ತೆ ವಿಷಯದಲ್ಲಿ ರಾಜಕಾರಣ ನಾನು ಒಪ್ಪಲ್ಲ. ಅಲ್ಲಿನ ನಿವಾಸಿಗಳು ಏನು ಮಾಡಬೇಕು? ವಯಸ್ಸಾದವರು ಏನು ಮಾಡಬೇಕು? ಇನ್ನು ನಾಲ್ಕು ದಿನಗಳಲ್ಲಿ ಪ್ರತಿ ಹಳ್ಳಿಯ ನೀರಿನ ಸಮಸ್ಯೆ ವರದಿ ಬೇಕಿದೆ ಎಂದರು.
ಹಿoದೆ ವ್ಯವಸ್ಥೆ ಹೇಗಿತ್ತು ಎಂಬುದರ ಕುರಿತು ಚರ್ಚೆಗೆ ನಾನು ಹೋಗುವುದಿಲ್ಲ. ಮುಂದೆ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧಿಕಾರಿಗಳು ಪ್ರಾಕ್ಟಿಕಲ್ ಆಗಿ ಓಡಾಡಬೇಕು. ಪ್ರತಿ ಪಿಡಿಒ ಹಳ್ಳಿ ಓಡಾಡಿ ನೀರಿನ ಸಮಸ್ಯೆ, ಪರಿಹಾರ ಹೇಗೆ ಎಂಬ ವರದಿ ಮೂರು ದಿನದಲ್ಲಿ ಸಲ್ಲಿಸಬೇಕು. ಶಿರಸಿ- ಸಿದ್ದಾಪುರದ ಯಾವುದೇ ಸಮಸ್ಯೆ ಇದ್ದರೂ ಕ್ಷೇತ್ರಕ್ಕೆ ಸಿಗುವ ಅನುದಾನವನ್ನು ಸಮರ್ಪಕವಾಗಿ ಬಳಸಬೇಕು, ಅಧಿಕಾರಿಗಳು ಮಾನವೀಯತೆ ಆಧಾರದಲ್ಲಿ ಸಾರ್ವಜನಿಕರಿಗೆ ಸ್ಪಂದಿಸಿ ಎಂದರು.

ಕ್ಷೇತ್ರದ ನೀರಿನ ಸಮಸ್ಯೆ ಬಗ್ಗೆ ವಿವರಿಸಿದ ಅಧಿಕಾರಿಗಳು, ಶಿರಸಿ ನಗರದ 31 ವಾರ್ಡ್ಗಳಿಗೆ ದಿನ ಬಿಟ್ಟು ದಿನ ನೀರು ಕೊಡುತ್ತಿದ್ದೇವೆ. ಕೆಂಗ್ರೆ ಮತ್ತು ಮಾರಿಗದ್ದೆ ಜಾಕ್‌ವೆಲ್‌ನಲ್ಲಿ ಹೂಳು ತೆಗೆದಿದ್ದೇವೆ ಎಂದರು. ತಾ.ಪಂ ಇಒ ದೇವರಾಜ ಹಿತ್ಲಮಕ್ಕಿ ಮಾತನಾಡಿ, ಶಿರಸಿ ತಾಲೂಕಿನ 9 ಪಂಚಾಯಿತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದ್ದೇವೆ. ಮುಂದೆ ಮಳೆ ಆಗದಿದ್ದರೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈಗಾಗಲೇ ಪಟ್ಟಿ ಮಾಡಿಕೊಂಡಿದ್ದೇವೆ. ಬನವಾಸಿ ಪಂಚಾಯಿತಿ, ಹೋಬಳಿಯಲ್ಲಿ ಸಮಸ್ಯೆ ಇದೆ. 44 ಕಾಮಗಾರಿ, ಎರಡನೇ ಹಂತದಲ್ಲಿ 33ರಲ್ಲಿ 44 ಜಲಜೀವನ ಮಿಷನ್ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದರು.

300x250 AD

ಇದಕ್ಕುತ್ತರಿಸಿದ ಭೀಮಣ್ಣ, ಪ್ರತಿ ಪಂಚಾಯತಿಗೆ ಭೇಟಿ ನೀಡಿದಾಗ ನೀರಿನ ಸಮಸ್ಯೆ ಗೋಚರವಾಗಿದೆ. ಜಲ ಜೀವನ ಮಿಷನ್ ಯೋಜನೆ ಅನುಷ್ಠಾನಗೊಳಿಸಿದ್ದರೂ ನೀರಿನ ಮೂಲ ಹಲವು ಕಡೆ ಇರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬರಪೀಡಿತ ಎಂದು ಘೋಷಣೆ ಆಗದೇ ವಿಶೇಷ ಅನುದಾನ ಬರುವುದಿಲ್ಲ. ಈಗಾಗಲೇ ಇರುವ ಅನುದಾನವನ್ನು ಬಳಸಿಕೊಂಡು ನೀರಾವರಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಇದೇ ವೇಳೆ ಉಪವಿಭಾಗಾಧಿಕಾರಿ ದೇವರಾಜ ಆರ್. ತಿಳಿಸಿದರು. ತಹಸೀಲ್ದಾರ್ ಸುಮಂತ ಹಾಗೂ ಇತರ ಅಧಿಕಾರಿಗಳು ಇದ್ದರು.

Share This
300x250 AD
300x250 AD
300x250 AD
Back to top