ಯಲ್ಲಾಪುರ: 2008ರ ಚುನಾವಣೆಯಿಂದಲೂ ಪದೇ ಪದೇ ಜೆಡಿಎಸ್ ಅಭ್ಯರ್ಥಿ ಬದಲಾವಣೆ ಆಗಿರುವುದು ಸಹ ಪಕ್ಷ ಸಂಘಟನೆಗೆ ಹಿನ್ನಡೆಯಾಗಿದ್ದು, ಮತದಾರರನ್ನು ತಲುಪಲು ಸಾಧ್ಯವಾಗದೇ ನಾನೂ ಸೋತಿದ್ದೇನೆ ಎಂದು ಜೆಡಿಎಸ್ ಪರಾಜಿತ ಅಭ್ಯರ್ಥಿ ನಾಗೇಶ ನಾಯ್ಕ ಕಾಗಲ್ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಬಲಿಷ್ಠವಾಗಿದೆ. ಆದರೆ, ಅದನ್ನು ಮತವನ್ನಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಸುಮಾರು ಸಾವಿರ ಮತಗಳನ್ನು ಮಾತ್ರ ಪಡೆಯಲಾಗಿದ್ದು, ಮುಂದಿನ ದಿನದಲ್ಲಿ ಜನರ ವಿಶ್ವಾಸಗಳಿಸುವ ಪ್ರಯತ್ನ ಮುಂದುವರೆಯಲಿದೆ ಎಂದರು.
ಜೆಡಿಎಸ್ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಅಂಶಗಳನ್ನು ಈಡೇರಿಸುವುದಕ್ಕಾಗಿ ಇದೀಗ ಹೋರಾಟ ಮಾಡಲಾಗುತ್ತದೆ. ಪ್ರಮುಖವಾಗಿ ಅತಿಕ್ರಮಣ, ಇ-ಸ್ವತ್ತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು. ಪ್ರಮುಖರಾದ ಬೆನಿತ್ ಸಿದ್ದಿ ಇತರರು ಇದ್ದರು.