• Slide
  Slide
  Slide
  previous arrow
  next arrow
 • ಪದ್ಮಾವತಿ ದೇವಸ್ಥಾನದಲ್ಲಿ ಶಾಸಕ ದಿನಕರ ಶೆಟ್ಟಿಯಿಂದ ಪೂಜೆ

  300x250 AD

  ಕುಮಟಾ: ಇಲ್ಲಿನ ವಿಧಾನಸಭಾ ಕ್ಷೇತ್ರದಿಂದ ಮತ್ತೊಮ್ಮೆ ಜಯಭೇರಿ ಭಾರಿಸಿರುವ ಶಾಸಕ ದಿನಕರ ಶೆಟ್ಟಿಯವರು ತಾಲೂಕಿನ ಮಿರ್ಜಾನ ತಾರೀಬಾಗಿಲ ಪದ್ಮಾವತಿ ಅಮ್ಮನವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
  ನಂತರ ಬಿಜೆಪಿಯ ಸ್ಥಳೀಯ ಮುಖಂಡರು ಹಾಗೂ ನೂರಾರು ಕಾರ್ಯಕರ್ತರೊಡನೆ ಮೆರವಣಿಗೆಯಲ್ಲಿ ತೆರಳಿದರು. ಈ ಸಂದರ್ಭದಲ್ಲಿ ಶಾಸಕರನ್ನು ಆತ್ಮೀಯತೆಯಿಂದ ಬರಮಾಡಿಕೊಂಡ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಜಯಘೋಷಗಳೊಂದಿಗೆ ಭಾರತೀಯ ಜನತಾ ಪಾರ್ಟಿಯ ಗೆಲುವನ್ನು ಸಂಭ್ರಮಿಸಿದರು.

  ಕಾರ್ಯಕರ್ತರನ್ನು ಹಾಗೂ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿಯವರು, ನಾನು ಶಾಸಕನಾಗಿ ಕಳೆದ ಐದು ವರ್ಷಗಲ್ಲಿ ನೆರವೇರಿಸಿದ ಅಭಿವೃದ್ಧಿ ಕಾರ್ಯಗಳನ್ನು ಆಧರಿಸಿ ನೀವು ಮತ್ತೊಮ್ಮೆ ನನಗೆ ಆಶೀರ್ವಾದ ಮಾಡಿದ್ದೀರಿ. ನೀವೆಲ್ಲರು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾನು ಚಿರಋಣಿ. ಸಾರ್ವಜನಿಕರ ಯೋಗಕ್ಷೇಮಕ್ಕಾಗಿ ನಾನು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನಮ್ಮ ರಾಜಕೀಯ ವಿರೋಧಿಗಳು ನನ್ನ ವಿರುದ್ಧ ನಿರಂತರವಾಗಿ ಅಪಪ್ರಚಾರ ನಡೆಸಿದ್ದರು. ಆದರೆ ಮತದಾರರು ನನಗೆ ಹಿಂದೆ0ದಿಗಿ0ತಲೂ ಹೆಚ್ಚಿನ ಮತನೀಡುವ ಮೂಲಕ, ಮೋಸದಿಂದ ಅಧಿಕಾರ ಗಿಟ್ಟಿಸುವ ಯತ್ನದಲ್ಲಿದ್ದವರಿಗೆ ತಕ್ಕಶಾಸ್ತಿ ಮಾಡಿದ್ದಾರೆ. ಕುಮಟಾ ಹೊನ್ನಾವರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೊಂದನ್ನೇ ಮೂಲಮಂತ್ರವನ್ನಾಗಿಟ್ಟುಕೊ0ಡು ಕಾರ್ಯನಿರ್ವಹಿಸುತ್ತೇನೆ ಎಂದರು.
  ಈ ಸಂದರ್ಭದಲ್ಲಿ ಮಿರ್ಜಾನ ಭಾಗದ ಬಿಜೆಪಿ ಮುಖಂಡ ಹಾಗೂ ಗ್ರಾಮಪಂಚಾಯತ್ ಸದಸ್ಯ ಗಣೇಶ ಅಂಬಿಗ, ಕುಮಟಾ ಮಂಡಲ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಬಾಳಾ ಡಿಸೋಜ, ಶಕ್ತಿಕೇಂದ್ರದ ಅಧ್ಯಕ್ಷ ಭಾಸ್ಕರ ಅಂಬಿಗ, ಪಂಚಾಯತ್ ಸದಸ್ಯರಾದ ಮಂಜುನಾಥ ಮರಾಠಿ, ಈಶ್ವರ ಮರಾಠಿ, ಮಾಲತಿ ಅಂಬಿಗ, ಅಂಬಿಗ ಸಮಾಜದ ಯಜಮಾನರಾದ ರಾಮಚಂದ್ರ ನಾಗಪ್ಪ ಅಂಬಿಗ, ಬೂತ್ ಅಧ್ಯಕ್ಷರಾದ ಕೆ. ಪಿ. ಹೆಗಡೆ, ಬಾಳಾ ನಾಯ್ಕ, ಸ್ಥಳೀಯ ಪ್ರಮುಖರಾದ ಶ್ರೀಧರ ಅಂಬಿಗ, ಸಾತು ಪಟಗಾರ, ನಾಗೇಶ ಎಸ್. ನಾಯ್ಕ, ದಾಮೋದರ ಎಮ್. ನಾಯ್ಕ, ಸುಭಾಷ್ ಅಂಬಿಗ, ಆನಂದ ಹರಿಕಂತ್ರ, ರಾಮು ಕೆಂಚನ, ನಾಗರಾಜ ಪಟಗಾರ ಖೈರೆ, ಈಶ್ವರ ಪಟಗಾರ, ಉಪೇಂದ್ರ ಪಟಗಾರ, ಲಕ್ಷ್ಮಣ ಪಟಗಾರ ಮತ್ತಿತರರು ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top