• Slide
    Slide
    Slide
    previous arrow
    next arrow
  • ಸಹಕಾರ ಮಾರಾಟ ಮಹಾಮಂಡಳದ ಎಂಡಿಗೆ ಟಿಎಂಎಸ್‌ನಿಂದ ಸನ್ಮಾನ

    300x250 AD

    ಸಿದ್ದಾಪುರ: ಇಲ್ಲಿನ ಟಿ.ಎಂ.ಎಸ್.ಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ವ್ಯವಸ್ಥಾಪಕ ನಿರ್ದೇಶಕ ಹೆಚ್.ಬಾಲಶೇಖರರವರು ಭೇಟಿ ನೀಡಿದ್ದು, ಸಂಘದ ಆರ್ಥಿಕ ವ್ಯವಹಾರವನ್ನು, ಆಡಳಿತಾತ್ಮಕ ವ್ಯವಹಾರವನ್ನು ಕಂಡು ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.
    ಉತ್ತರಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಸಮೃದ್ಧವಾಗಿ ಬೆಳೆದಿದ್ದು, ಅದರಲ್ಲಿ ಸಿದ್ದಾಪುರ ಟಿ.ಎಂ.ಎಸ್. ತನ್ನ ವಿವಿಧ ಚಟುವಟಿಕೆಗಳ ಮೂಲಕ ಘನತೆಯನ್ನು ಹೆಚ್ಚಿಸಿಕೊಂಡಿದ್ದು, ಆಡಳಿತ ಮಂಡಳಿ ಮತ್ತು ಸಿಬ್ಬಂದಿವರ್ಗದ ಕ್ರಿಯಾಶೀಲತೆಯನ್ನು ಕಂಡು ಶ್ಲಾಘಿಸಿದರು.
    ಈ ಸಂದರ್ಭದಲ್ಲಿ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಅವರು ಸಂಘದ ಪರವಾಗಿ ಅವರನ್ನು ಸನ್ಮಾನಿಸಿದರು. ಟಿ.ಎಂ.ಎಸ್. ವ್ಯವಸ್ಥಾಪಕ ಸತೀಶ ಹೆಗಡೆ ಹೆಗ್ಗಾರಕೈ ಹಾಗೂ ಸೆಲ್ಕೋ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಮೋಹನ್ ಭಾಸ್ಕರ ಹೆಗಡೆ ಮತ್ತು ಜಿ.ಜಿ. ಹೆಗಡೆ ಬಾಳಗೋಡ ಇನ್ನಿತರರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top