ಯಲ್ಲಾಪುರ: ಮಾಗೋಡ ಸಮೀಪದ ಹಲಸಿನಬೀಳು ಶ್ರೀಲಕ್ಷ್ಮಿನರಸಿಂಹ ದೇವಾಲಯದಲ್ಲಿ ಪುನಃ ಪ್ರತಿಷ್ಠಾ ಮಹೋತ್ಸವವು ಮೇ 20ರಿಂದ 22ರವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ನೂತನವಾಗಿ ಸಂಪೂರ್ಣ ಶಿಲಾಮಯ ದೇವಾಲಯವನ್ನು ನಿರ್ಮಿಸಲಾಗಿದ್ದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸ್ವರ್ಣವಲ್ಲೀ ಶ್ರೀಗಳ ಸಾನ್ನಿಧ್ಯದಲ್ಲಿ ಲಕ್ಷ್ಮಿನರಸಿಂಹ ದೇವರ ಪ್ರಾಚೀನ ಮೂರ್ತಿ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ. ಮೇ 20 ಶನಿವಾರದಂದು ಬೆಳಿಗ್ಗೆ ಗಣೇಶ ಪೂಜೆ, ಪುಣ್ಯಾಹ, ನಾಂದಿ, ಋತ್ವಿಕ್ ವರ್ಣನ, ಮಧುಪರ್ಕ, ಅಷ್ಟಮೂರ್ತಿ ಪ್ರಾರ್ಥನೆ, ಜಲಾಧಿವಾಸ, ಅಕ್ಷತ ಹವನ, ಗಣಹವನ ನಡೆಯಲಿದೆ. ಸಾಯಂಕಾಲ ಮಂಟಪ ಪ್ರವೇಶ, ಉದಕ ಸಂತಿ, ವಾಸ್ತುಶಾಂತಿ, ಕಲಶಸ್ಥಾಪನ, ಚಕ್ರಾಬ್ಜ ಮಂಡಲ ಪೂಜೆ ನಡೆಯಲಿದೆ.
ಮೇ 21 ರವಿವಾರದಂದು ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇoದ್ರ ಸರಸ್ವತೀ ಸ್ವಾಮೀಜೀಯವರ ಅಮೃತಹಸ್ತದಿಂದ ಲಕ್ಷ್ಮಿನರಸಿಂಹ ದೇವರ ಪುನಃಪ್ರತಿಷ್ಠೆ ಶಿಖರ ಪ್ರತಿಷ್ಠೆ ನಡೆಯಲಿದೆ. ಮಧ್ಯಾಹ್ನ ಗುರುಪಾದಪೂಜೆ, ಗುರುಭಿಕ್ಷೆ, ಆಶೀರ್ವಚನ ನಡೆಯಲಿದೆ. ಸಾಯಂಕಾಲ ರಾಜೋಪಚಾರ,ಅಷ್ಟಾವಧಾನ, ಸ್ನಪನ ಕಲಶಸ್ಥಾಪನೆ, ನಡೆಯಲಿವೆ. ಮೇ 22 ಸೋಮವಾರದಂದು ಮಹಾಶಾಂತಿ, ಪುರುಷ ಸೂಕ್ತ ಹವನ, ಶ್ರೀಸೂಕ್ತ ಹವನ, ಲಕ್ಷ್ಮಿನರಸಿಂಹ ಹವನ, ಪೂರ್ಣಾಹುತಿ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಪ್ರತಿದಿನ ಸಂಜೆ 6 ಗಂಟೆಯಿ0ದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.