• Slide
  Slide
  Slide
  previous arrow
  next arrow
 • ನಾಮಧಾರಿ ಈಡಿಗ ಶಾಸಕರಿಗೆ ಮಂತ್ರಿ ಸ್ಥಾನಕ್ಕಾಗಿ ದೇವರಿಗೆ ಪೂಜೆ ಸಲ್ಲಿಕೆ

  300x250 AD

  ಸಿದ್ದಾಪುರ: ಕ್ಷೇತ್ರದಲ್ಲಿ ಭೀಮಣ್ಣ ನಾಯ್ಕ, ಸೊರಬದಲ್ಲಿ ಮಧು ಬಂಗಾರಪ್ಪ, ಸಾಗರದಲ್ಲಿ ಬೇಳೂರು ಗೋಪಾಲಕೃಷ್ಣ ಶಾಸಕರಾಗಿ ಆಯ್ಕೆಯಾಗಿದ್ದು, ಮಂತ್ರಿ ಸ್ಥಾನ ಸಿಗಲೆಂದು ಶ್ರೀನಾಗಚೌಡೇಶ್ವರಿ ಯುವ ಗೆಳೆಯರ ಬಳಗ, ಸಂಪಖ0ಡದ ಗೆಳೆಯರ ಬಳಗದವರು ಚಂದ್ರಗುತ್ತಿಯ ಶ್ರೀರೇಣುಕಾಂಬ ದೇವರಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಿದರು.

  ಸಂಘದ ಅಧ್ಯಕ್ಷ ಸುನಿಲ್ ನಾಯ್ಕ್ ಮಾತನಾಡಿ, ನಮ್ಮ ಕ್ಷೇತ್ರದ ಅಭ್ಯರ್ಥಿ ಭೀಮಣ್ಣ ನಾಯಕರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಗೊಂಡಿದ್ದಾರೆ. ಮಧು ಬಂಗಾರಪ್ಪ ಹಾಗೂ ಬೇಳೂರು ಗೋಪಾಲಕೃಷ್ಣರವರು ಮತ್ತೊಮ್ಮೆ ಆಯ್ಕೆಯಾಗಿರುವುದು ನಮಗೆಲ್ಲರಿಗೂ ಸಂತಸ ತಂದಿದೆ. ಹಾಗಾಗಿ ದೇವರಿಗೆ ಪೂಜೆಯನ್ನು ಸಲ್ಲಿಸಿದ್ದೇವೆ. ಅವರಿಗೆ ಮಂತ್ರಿಮ0ಡಲದಲ್ಲಿ ಸ್ಥಾನಮಾನಗಳು ಸಿಗಲೆಂದು ದೇವರಿಗೆ ಪ್ರಾರ್ಥನೆ ನಡೆಸಿ ಪೂಜೆಯನ್ನು ಸಲ್ಲಿಸಿದ್ದೇವೆ ಎಂದರು.
  ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಅರುಣ್‌ಕುಮಾರ್, ಸಹ ಕಾರ್ಯದರ್ಶಿ ಮನೋಜ, ಸದಸ್ಯರಾದ ಕಾರ್ತಿಕ, ವಿನಾಯಕ, ದಿವಾಕರ್ ಸಂಪಖ0ಡ ಮುಂತಾದವರು ಇದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top