• Slide
    Slide
    Slide
    previous arrow
    next arrow
  • ಭೀಮಣ್ಣ ಗೆಲುವು; ಕಾಂಗ್ರೆಸ್ ಮುಖಂಡರಿಂದ ಸಿಹಿ ವಿತರಣೆ

    300x250 AD

    ಸಿದ್ದಾಪುರ: ಕ್ಷೇತ್ರದಲ್ಲಿ ಮೊದಲ ಬಾರಿಗೆ ಭೀಮಣ್ಣ ನಾಯ್ಕ ಶಾಸಕರಾಗಿ ಆಯ್ಕೆಯಾಗಿರುವ ಹಿನ್ನಲೆ ಕಾಂಗ್ರೆಸ್ ಮುಖಂಡರು ಅಧಿಕಾರಿಗಳಿಗೆ ಸಿಹಿ ವಿತರಿಸಿದರು.

    ಪಟ್ಟಣದ ಬಿಇಓ ಕಚೇರಿ ಸರ್ವೋದಯ ಬ್ಯಾಂಕ್ ವಲಯ ಅರಣ್ಯಾಧಿಕಾರಿ ಕಚೇರಿ ತಹಶೀಲ್ದಾರ್ ಕಚೇರಿಗಳಲ್ಲಿ ಅಧಿಕಾರಿಗಳಿಗೆ ಸಿಹಿ ವಿತರಿಸಿದರು. ನಂತರ ಮಾತಾಡಿದ ರೈತ ಮುಖಂಡ ವೀರಭದ್ರ ನಾಯ್ಕ್, ರೈತ ಸಂಘ, ಅರಣ್ಯ ಅತಿಕ್ರಮಣ ಹೋರಾಟ ವೇದಿಕೆ ಕಾಂಗ್ರೆಸ್‌ನ ವಸಂತ ನಾಯ್ಕ್ ಹಾಗೂ ಹಲವು ಮುಖಂಡರ ನೇತೃತ್ವದಲ್ಲಿ ಕ್ಷೇತ್ರದ ಮತದಾರರ ಪರಿಶ್ರಮದಿಂದ ಭೀಮಣ್ಣ ನಾಯ್ಕ್ ಶಾಸಕರಾಗಿ ಆಯ್ಕೆಯಾಗಿದ್ದಾರೆ ಈ ಸಂತೋಷಕ್ಕೆ ವಿವಿಧ ಇಲಾಖೆ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಸಿಹಿ ವಿತರಿಸಿದ್ದೇವೆ. ಶಾಸಕರು ಉತ್ತಮ ಆಡಳಿತ ನೀಡಲಿ ಎಂದು ಬಯಸುತ್ತೇವೆ ಎಂದರು.
    ಈ ಸಂದರ್ಭದಲ್ಲಿ ಮಾಬ್ಲೆಶ್ವರ ಬೇಡ್ಕಣಿ, ಸುನೀಲ್ ನಾಯ್ಕ್, ಎಚ್ ಕೆ ಶಿವಾನಂದ, ದಿನೇಶ್ ಬೇಡ್ಕಣಿ, ಲಕ್ಷಣ ನಾಯ್ಕ್, ರೇವಣ್ಣ, ಅನಿಲ್ ಕೊಠರಿ, ವಿನಾಯಕ,ಪಿ ವಿ ಹೆಗಡೆ, ಸುರೇಶ್ ತೆಂಗಿನಮನೆ, ರಾಘವೇಂದ್ರ ಮುಂತಾದವರು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top